ಸಿದ್ದೇಶ್ವರ ಶ್ರಿ?ಗಳ ಪ್ರವಚನ ಅಮೃತ ಸಮಾನ:ಸಂತೋಷ ಬಂಡೆ

Sri Siddeshwara's discourse Amrita Samana: Santosha Bande

ಸಿದ್ದೇಶ್ವರ ಶ್ರಿ?ಗಳ ಪ್ರವಚನ ಅಮೃತ ಸಮಾನ:ಸಂತೋಷ ಬಂಡೆ

ಇಂಡಿ 02 : ಸಿದ್ದೇಶ್ವರ ಶ್ರೀಗಳು ತಮ್ಮ ಜ್ಞಾನದ ಮಾತುಗಳ ಮೂಲಕ ವಿಶ್ವದ ಜನರಿಗೆ ಪ್ರೇರಕಶಕ್ತಿಯಾಗಿ, ನಡೆದಾಡುವ ದೇವರಾಗಿದ್ದರು. ಅವರ ಮನಮುಟ್ಟುವ ಪ್ರವಚನವೇ ನಮ್ಮ ಮನಸನ್ನು ಪರಿವರ್ತಿಸುವ ಶಕ್ತಿಯಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಗುರುವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ  ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶ್ರಿಗಳಿಗೆ ಪ್ರವಚನವೇ ಸರ್ವಸ್ವ. ಅವರ ಪ್ರವಚನ ಅಮೃತ ಸಮಾನ. ಪ್ರವಚನದ ಮೂಲಕ ದೇಶ-ವಿದೇಶಗಳಲ್ಲಿ ಜ್ಞಾನದೀವಿಗೆ ಹಿಡಿದ, ಸರಳತೆಯ ಸಾಕಾರಮೂರ್ತಿ, ಜಾತಿ, ಕುಲ, ಧರ್ಮ, ವರ್ಗ, ಲಿಂಗ ಭೇದ ಎನ್ನದೆ ಸರ್ವರ ಏಳಿಗೆಗೆ ಸಂದೇಶ ಸಾರಿದ ಸಿದ್ದೆಶ್ವರ ಶ್ರಿಗಳು ಶತಮಾನ ಕಂಡ ಶ್ರೆ?ಷ್ಠ ಸಂತ ಎಂದು ಹೇಳಿದರು.ಮುಖ್ಯ ಶಿಕ್ಷಕ ಎ ಎಂ ಪತಂಗಿ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ತಮ್ಮ ಪ್ರವಚನಗಳ ಮೂಲಕ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಪರಿಚಯ ಮಾಡಿಕೊಟ್ಟಿರುವ ಶ್ರೀಗಳು ಸಮಾಜಕ್ಕೆ ಜ್ಞಾನವನ್ನು ಹಂಚಿದ್ದಾರೆ.ಶ್ರಿಗಳ ಜೀವನವೇ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಎಂದು ಹೇಳಿದರು.ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಎಂ ಪಂಚಮುಖಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ, ಗ್ರಾಮಸ್ತರಾದ ಬೇಗಂ ಮುಲ್ಲಾ, ಕಮಲಾಬಾಯಿ ದಳವಾಯಿ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.