ವಿಜ್ರಂಭಣೆಯಿಂದ ಜರುಗಿದ ಶ್ರೀ ಗ್ರಾಮ ದೇವತೆ ಜಾತ್ರೆ
Sri Grama Devi Fair held with great enthusiasm
ತಾಳಿಕೋಟೆ 21: ತಾಲ್ಲೂಕಿನ ಗುಂಡಕನಾಳ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತಾ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮಗಳಿಂದ ಶುಕ್ರವಾರ ನೆರವೇರಿತು.ಗುರುವಾರ ರಾತ್ರಿ ಗಂಗಸ್ಥಳಕ್ಕೆ ಹೋಗಿ ಶುಕ್ರವಾರ ಬೆಳಿಗ್ಗೆ 6.00 ಗಂಟೆಗೆ ಮರಳಿತು. ಗ್ರಾಮದ ಅಗಸಿ ಮುಖ್ಯದ್ವಾರದಲ್ಲಿ ಗ್ರಾಮದ ಗೌಡರಾದ ಎಂ.ಜಿ.ಪಾಟೀಲ ಗುಂಡಕನಾಳ ಹಾಗೂ ಪರಿವಾರದವರು ಕುಂಬಳಕಾಯಿ ಒಡೆಯುವ ಮೂಲಕ ಗ್ರಾಮದೇವತೆಯನ್ನು ಸ್ವಾಗತಿಸಲಾಯಿತು. ಗಂಗಸ್ಥಳದ ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಕರಡಿ ಮಜಲು ಹಾಗೂ ಕುಂಭಮೇಳ ಗಮನ ಸೆಳೆದವು. ಗ್ರಾಮದೇವತೆ ದೇವಸ್ಥಾನದಲ್ಲಿ ಪಾದಗಟ್ಟೆಗೆ ಪ್ರತಿಷ್ಠಾಪಿತವಾದ ನಂತರ ಅರ್ಚಕರಾದ ಕಾಳಪ್ಪ ಬಡಿಗೇರ, ದೇವೀಂದ್ರ ಬಡಿಗೇರ, ಪ್ರಕಾಶ ಬಡಿಗೇರ, ದೇವೀಂದ್ರ ಪತ್ತಾರ ಅವರಿಂದ, ಸೀರೆ ಉಡಿಸಿ, ಮಡಿಲು ತುಂಬಿ, ಎಡ ಹಿಡಿದು ಕಾಯಿ, ಕಪೂರಗಳಿಂದ ಬೆಳಗಿ ಪೂಜಾಕಾರ್ಯ ಮಂಗಳಾರತಿ ನಡೆದವು . ಭಕ್ತಾದಿಗಳು ತಮ್ಮ ಭಕ್ತಿ ಅರೆ್ಣ ಮಾಡಿದರು ಉತ್ಸವದಲ್ಲಿ ಪ್ರಮುಖರಾದ ಶಶಿಧರ ಹಿರೇಮಠ, ಮಲ್ಲನಗೌಡ ಲಕ್ಕುಂಡಿ, ರಾಜುಗೌಡ ಗುಂಡಕನಾಳ, ವಿಜಯಕುಮಾರ ಗಬಸಾವಳಗಿ, ನಿಂಗನಗೌಡ ಜಿ.ಪಾಟೀಲ, ಎಸ್.ಎಂ.ಸಾವರದ, ಯಂಕಣ್ಣ ಬಿರಾದಾರ, ನಿಂಗನಗೌಡ ಪಾಟೀಲ, ಸಿದ್ದನಗೌಡ ಬಿರಾದಾರ, ಸುನಿಲ ಬಡಿಗೇರ ಇತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 