ಶ್ರೀ ಗಜಾನನ ಉತ್ಸವ ಮಾಹಾಮಂಡಲ ಪೂರ್ವಭಾವಿ ಸಭೆ
Sri Gajanana Utsav Mahamandal Preparatory Meeting
ಶ್ರೀ ಗಜಾನನ ಉತ್ಸವ ಮಾಹಾಮಂಡಲ ಪೂರ್ವಭಾವಿ ಸಭೆ
ವಿಜಯಪುರ 21: ಶ್ರೀ ಗಜಾನನ ಉತ್ಸವ ಮಾಹಾಮಂಡಲ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ವೃತ ವಿಜಯಪುರ ಇವರ ವತಿಯಿಂದ ನಗರದ ಕಾಳಿಕಾ ದೇವಸ್ಥಾನದಲ್ಲಿ ಗಜಾನನ ಉತ್ಸವದ ಪೂರ್ವಭಾವಿ ಸಭೆ ನಡೆಸಲಾಯಿತು ಈ ಸಭೆಯಲ್ಲಿ ಮಾಜಿ ಸಚಿವರಾದ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಅವರು ಮಾತನಾಡಿ ಗಜಾನನ ಉತ್ಸವ ಮಹಮಂಡಲವು ವಿಜಯಪುರ ನಗರದಲ್ಲಿ ಪ್ರತಿಷ್ಠಾಪನೆ ಆಗುವ ಎಲ್ಲ ಗಜಾನನ ಮಂಡಳಿಗಳು ಹಿಂದೂ ಸಂಪ್ರದಾಯದಂತೆ ಬೆಳಗ್ಗೆ ಮತ್ತು ಸಾಯಂಕಾಲ ಪೂಜೆ ನಡೆಸಬೇಕು ಹಾಗೂ ಪೆಂಡಾಲ್ಗಳಲ್ಲಿ ಭಕ್ತಿಗೀತೆಗಳನ್ನು ಹಾಕಬೇಕು ಪ್ರಸಾದ ವ್ಯವಸ್ಥೆಯನ್ನು ಮಾಡಬೇಕು ವಿಜಯಪುರ ನಗರದಲ್ಲಿ ಗಣೇಶ್ ಉತ್ಸವವನ್ನು ನೋಡಲು ಜಿಲ್ಲೆಯಿಂದ ಮತ್ತು ಹೊರ ಜಿಲ್ಲೆಯಿಂದ ಸಾಕಷ್ಟು ಜನ ಬರ್ತಾ ಇದ್ದು ಆದ ಕಾರಣ ನಾವು ವಿಸರ್ಜನೆ ಸಮಯದಲ್ಲಿ ಬೆಳಗಿನ ಜಾವ ಗಣೇಶ ವಿಸರ್ಜನಾ ಮೆರವಣಿಗೆಯನ್ನ ಪ್ರಾರಂಭ ಮಾಡಿ ನೋಡಲು ಬಂದಂತಹ ಭಕ್ತರಿಗೆ ಅನುವು ಮಾಡಿಕೊಡಬೇಕು ಮತ್ತು ಸಂಸ್ಕೃತಿಕ ವಾದ್ಯಗಳನ್ನು ಹಚ್ಚಿ ಗಣೇಶ ವಿಸರ್ಜನೆಗೆ ಮೆರಗು ತರಬೇಕೆಂದು ಸಲಹೆ ನೀಡಿದರು ಮಹಾಮಂಡಳವು ಬಂದಂತಹ ಎಲ್ಲ ಗಜಾನನ ಮಂಡಳಿಗಳಿಗೆ ಗಾಂಧಿ ಚೌಕದಲ್ಲಿ ಸನ್ಮಾನದ ವ್ಯವಸ್ಥೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ನಡೆಸಲಿದೆ, ಗಜಾನನ ಮಹಾಮಂಡಲವು ಹಲವಾರು ಸಾಮಾಜಿಕ ಚಟುವಟಿಕೆಯಲ್ಲಿ ವರ್ಷಪೂರ್ತಿ ನಿರಂತರವಾಗಿದ್ದು ಕೋವಿಡ್ ಸಮಯದಲ್ಲಿ ಸುಮಾರು 51 ದಿನಗಳ ಕಾಲ ನಿರಂತರವಾಗಿ ಎಲ್ಲಾ ಆಸ್ಪತ್ರೆಗಳಲ್ಲಿ ಊಟದ ವ್ಯವಸ್ಥೆಯನ್ ಮಾಡಿ ರೋಗಿಗಳಿಗೆ ಮತ್ತು ಪರಿಚಯಾರಕರಿಗೆ ಅನುವು ಮಾಡಿಕೊಟ್ಟಿದೆ ಅದೇ ರೀತಿ ಸುಮಾರು 10000 ಸಸಿಗಳನ್ನು ವಿತರಿಸಿ ಪರಿಸರ ಕಾಳಜಿ ಮೆರೆದಿದೆ. ಕರ್ನಾಟಕದಲ್ಲಿ ್ರ್ರಥಮ ಬಾರಿಗೆ ಫೈಬರ್ ಗಜಾನನ ಮೂರ್ತಿಯನ್ನು ಶ್ರೀ ಶಿವಾಜಿ ಮಹಾರಾಜ್ ವೃತ್ತದಲ್ಲಿ ಪ್ರತಿಷ್ಠಾಪನೆ ಮಾಡಿ ಎಲ್ಲರಿಗೆ ಮಾದರಿಯಾಗಿದೆ ಈಗ ವಿಜಯಪುರ ನಗರದಲ್ಲಿ ಸುಮಾರು 11 ಫೈಬರ್ ಮೂರ್ತಿಗಳು ತಮಗೆ ಕಾಣಲು ಸಿಗುತ್ತವೆ ಅದೇ ರೀತಿ ಪರಿಸರ ಕಾಳಜಿಯನ್ನ ಗಮನದಲ್ಲಿ ಇಟ್ಟುಕೊಂಡು ಸುಮಾರು ಮೂರು ವರ್ಷಗಳ ಕಾಲ ಮಣ್ಣಿನ ಗಜಾನನ ಮೂರ್ತಿಯನ್ನು ಉಚಿತವಾಗಿ ಉತ್ತರಿಸಲಾಗಿದೆ, ಸಾವಯುವ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಸಾವಯುವ ಕೃಷಿಯಲ್ಲಿ ಸಾಧನೆಗೆ ಸನ್ಮಾನ ಕಾರ್ಯಕ್ರಮ ಒಳ್ಳೆ ಕೆಲಸ ಮಾಡಿದ ಪೌರಕಾರ್ಮಿಕರನ ಗುರುತಿಸಿ ಅವರಿಗೆ ಪ್ರೋತ್ಸಾಹ ಧನ ನೀಡುವುದು ಈ ರೀತಿ ಹತ್ತು ಹಲವಾರು ಕಾರ್ಯಗಳಲ್ಲಿ ಗಜಾನನ ಉತ್ಸವ ಮಹಾಮಂಡಲವು ತನ್ನನ್ನು ತಾನು ತೊಡಗಿಸಿಕೊಂಡಿದೆ ಇನ್ನೊಂದು ವಿಶೇಷವೆಂದರೆ ಗಜಾನನ ಉತ್ಸವ ಮಹಾಮಂಡಲ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ವೃತ್ತದಲ್ಲಿ ಪ್ರತಿ ಸೋಮವಾರ ಅನ್ನದಾಸೋಹ ಕಾರ್ಯಕ್ರಮವನ್ನು ನೆರವೇರಿಸ್ತಾ ಬಂದಿದ್ದು ಈಗ 96ನೇ ಸೋಮವಾರ ಯಶಸ್ವಿಯಾಗಿ ಈ ದಾಸೋಹ ನಡಿತಾ ಇದ್ದು ತುಂಬಾ ವಿದ್ಯಾರ್ಥಿಗಳಿಗೆ ಮತ್ತು ಬಡವರಿಗೆ ಅನುಕೂಲವಾಗಿದೆ ಗಜಾನನ ಉತ್ಸವ ಮಹಾಮಂಡಲದ ಕಾರ್ಯಕರ್ತರು ವರ್ಷಪೂರ್ತಿ ಈ ಎಲ್ಲ ಸೇವೆಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.ವಿಜಯಪುರ ನಗರದಲ್ಲಿ ಪ್ರತಿಷ್ಠಾಪನೆಯಾದ ಎಲ್ಲ ಗಜಾನನ ಮಂಡಳಿಗಳಿಗೆ ಯಾವುದೇ ರೀತಿ ಸಹಾಯ ಸಹಕಾರ ಅವಶ್ಯಕತೆ ಇದ್ದಲ್ಲಿ ಮಂಡಳಿಯು ಅವರ ಜೊತೆ ಇರುತ್ತದೆ ಇದೊಂದು ಹಿಂದೂ ಧರ್ಮದ ಪವಿತ್ರ ಹಬ್ಬ ನಾವು ಎಲ್ಲರೂ ಸೇರಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಗಜಾನನ ಉತ್ಸವ ಮಹಮಂಡಲದ ಈ ವರ್ಷದ ಅಧ್ಯಕ್ಷರಾಗಿ ರಾಜು ಹೊನ್ನೂರ್ ಅವರು ಆಆಯ್ಕೆಯಾದರು, ಅವರು ಮಾತನಾಡಿ ನನ್ನನ್ನು ಅಧ್ಯಕ್ಷ ರನ್ನಾಗಿ ಮಾಡಿದ ಮಾಜಿ ಸಚಿವರಾದ ಅಪ್ಪ ಸಾಹೇಬ್ ಪಟ್ಟಣಶೆಟ್ಟಿಯವರಿಗೂ ಹಾಗೂ ಎಲ್ಲಾ ಗಜಾನನ ಮಂಡಳಿಯ ಸದಸ್ಯರಿಗೂ ಧನ್ಯವಾದಗಳು ತಿಳಿಸುತ್ತಾ ವಿಜಯಪುರ ನಗರದಲ್ಲಿ ಆಚರಿಸುವ ಖಜಾನನ ಉತ್ಸವ ಅತಿ ವಿಜೃಂಭಣೆಯಿಂದ ಆಚರಿಸಿ ಕರ್ನಾಟಕ ರಾಜ್ಯದಲ್ಲಿ ಮಾದರಿ ಗಜಾನೋತ್ಸವವು ನಗರದಲ್ಲಿ ಆಚರಿಸೋಣ ಎಂದು ಎಲ್ಲರೂ ಮಂಡಳಿಗಳಿಗೆ ಕರೆ ನೀಡಿದರು ತಮಗೆ ಯಾವುದೇ ರೀತಿಯ ಸಹಾಯ ಸರ್ಕಾರ ಬೇಕಾದಲ್ಲಿ ನಾನು ತಮ್ಮ ಜೊತೆ ಇರುತ್ತೇನೆ ಎಂದರು ಎಲ್ಲರೂ ಸೇರಿ ಗಜಾನನ ಉತ್ಸವವನ್ನು ಆಚರಿಸೋಣ ಎಂದರು. ಈ ಸಂದರ್ಭದಲ್ಲಿ ಮಾಜಿನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಭೀಮಾಶಂಕರ ಹದನೂರ್, ಮಾಜಿ ಉಪಮಾಪೌರಾದ ಗೋಪಾಲ ಘಟಕಾಂಬಳೆ, ಮಾಜಿ ನಗರಸಭೆ ಸದಸ್ಯರಾದ ರವಿಕಾಂತ್ ಬಗಲಿ, ರಾಜು ಕರ್ಬಡ್ನಾಳ್, ಹಿರಿಯರಾದ ಶಿವಾನಂದ ಮಾನಕರ, ಮತ್ತು ಮಂಡಳಿಯ ಎಲ್ಲ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದರು.ಉಪಾಧ್ಯಕ್ಷರಾಗಿ ಅರವಿಂದ್ ಮರೆಗುದ್ದಿ,ರಾಮಚಂದ್ರ ಚೌಹಾಣ್, ಗಣೇಶ್ ರಣದೇವಿ, ನಿಖಿಲ್ ಮ್ಯಾಗೇರಿ,ರಾಕೇಶ್ ನಾಗರಾಳ ಶಿವು ಶಿರನಾಳ, ಪ್ರಧಾನ ಕಾರ್ಯದರ್ಶಿಯಾಗಿ-, ಕೃಷ್ಣ ಮಾಯಾಚಾರಿ, ಕಿರಣ್ ಗೊಲಗೇರಿ ಕಾರ್ಯದರ್ಶಿಯಾಗಿ - ವಿನಾಯಕ್ ಜುಮ್ಮನಾಳ, ಮಂಜು ಕಡಪಟ್ಟಿ, ಶಿವರಾಜ್ ಮಡಿವಾಳ, ನಂದು ರುಡುಗಿ, ಹಾಜು ಭಜಂತ್ರಿ, ಮಂತನ್ ಗಾಯಕ್ವಾಡ್. ಸಹಕಾರದರ್ಶಿಯಾಗಿ - ಸುನಿಲ್ ಮುನೂರ್, ರಾಹುಲ್ ಸೂರ್ಯವಂಶಿ ಸಂದೀಪ್ ಬಾಗೇವಾಡಿ. ಕೋಶಾಅಧ್ಯಕ್ಷರಾಗಿ ವಿವೇಕ ತಾವರಗೇರಿ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 