ಮಾ. 26ರಿಂದ ನೇಸರಗಿಯ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಜಾತ್ರೆ
Sri Channavrishabendra Ajjanavara fair of Nesaragi from 26th Mar
ಮಾ. 26ರಿಂದ ನೇಸರಗಿಯ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಜಾತ್ರೆ
ಬೈಲಹೊಂಗಲ, 22; ಇಲ್ಲಿನ ಪ್ರತಿಷ್ಠಿತ ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಲೀಲಾಮಠದ 34 ನೇ ಜಾತ್ರಾ ಮಹೋತ್ಸವವು ಬುಧವಾರ ದಿ. 26-03-2025 ರಂದು ಪ್ರಾರಂಭವಾಗಲಿದ್ದು, ಜಾತ್ರಾ ಕಾರ್ಯಕ್ರಮದಲ್ಲಿ ಇಂಚಲ ಸಾಧು ಸಂಸ್ಥಾನ ಮಠದ ಪರಮಪೂಜ್ಯ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ನೇಸರಗಿ ಮಲ್ಲಾಪೂರ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಾತ್ರೆ ಜರುಗಲಿದೆ. ದಿ. 26ರಂದು ಬೆಳಿಗ್ಗೆ 6 ಘಂಟೆಗೆ ಶ್ರೀ ಚನ್ನವೃಷಬೇಂದ್ರ ಮೂರ್ತಿಗೆ ರುದ್ರಾಭಿಷೇಕ, ಮಹಾಪೂಜೆ ನಡೆಯುವದು. ಮದ್ಯಾಹ್ನ 3 ಘಂಟೆಗೆ ಸಕಲ ವಾದ್ಯ ಮೇಳಗಳೊಂದಿಗೆ ಗ್ರಾಮದ ಮುತೈದ್ಯೇಯರಿಂದ ಬ್ರಹತ್ ಕುಂಭಮೇಳ, ಅಜ್ಜನವರ ಪಲ್ಲಕ್ಕಿ ಉತ್ಸವ, ಗ್ರಾಮದೇವಿಯರಿಗೆ ಉಡಿ ತುಂಬುವದು. ಸಂಜೆ 5 ಘಂಟೆಗೆ ಕಳಸರೋಹಣ ನೆರವೇರುವದು. ದಿ. 26,27,28 ರಂದು ದಿನಾಲೂ ರಾತ್ರಿ 8 ಘಂಟೆಗೆ ಪ್ರವಚನ ನಂತರ ಗ್ರಾಮದ ಭಕ್ತರಿಂದ ಪ್ರಸಾದ ಸೇವೆ ಮಹಾಪ್ರಸಾದ ಜರುಗುವದು. ಶನಿವಾರ ದಿ. 29-03-2025 ರಂದು ರಾತ್ರಿ 9-00 ಘಂಟೆಗೆ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಲೀಲಾಮಠದ ಎದುರಿಗೆ ಎಪಿಎಮಸಿ ಮೈದಾನದಲ್ಲಿ ನಿರ್ಮಿಸಿರುವ ಬ್ರಹತ್ ರಂಗಮಂಟಪದಲ್ಲಿ ಸದ್ಗುರು ಬಾಲಯೋಗಿ ಮಾಣಿಕ್ಯ ವೃಷಬೇಂದ್ರ ಸ್ವಾಮಿಗಳು ಭಾವಿಹಾಳ ಇವರ ದಿವ್ಯ ಸಾನಿಧ್ಯದಲ್ಲಿ ಧಾರವಾಡ ಜಿಲ್ಲೆಯ, ಕಲಘಟಗಿ ತಾಲೂಕಿನ ದೇವರಕೊಂಡ ಗ್ರಾಮದ ಚನ್ನವೃಷಬೇಂದ್ರ ನವ ತರುಣ ನಾಟ್ಯ ಸಂಘ ಇವರಿಂದ" ಶ್ರೀ ಅವತಾರ ಶಿದ್ದಯೋಗಿ ಚನ್ನವೃಷಬೇಂದ್ರ ಮಹಾತ್ಮೆ" ಭಕ್ತಿ ಪ್ರಧಾನ ನಾಟಕ ಜರುಗುವದು. ರವಿವಾರ ದಿ. 30-03-2025 ರಂದು ಸಾಯಂಕಾಲ 4 ಘಂಟೆಗೆ ಅಜ್ಜನವರ ಮಹಾ ರಥೋತ್ಸವ ನೆರವೇರುವದು.
ಮಾರ್ಚ್ 25 ಹಾಗೂ ಮಾರ್ಚ್ 26 ರಂದು ಶ್ರೀ ಚನ್ನವೃಷಬೇಂದ್ರ ಅಜ್ಜನವರ ಜಾತ್ರೆ ಪ್ರಯುಕ್ತ" ರಾಜ್ಯ ಮಟ್ಟದ ಖಾಲಿ ಗಾಡಾ ಚಕ್ಕಡಿ ಓಡಿಸುವ ಶರ್ಯತ್ತು" ಏರಿ್ಡಸಲಾಗಿದ್ದು. ಪ್ರಥಮ ಬಹುಮಾನ ರೂ. 50,000/- ದ್ವಿತೀಯ ರೂ. 40,000/- ತೃತೀಯ ರೂ. 35,000/- ಮತ್ತು ಒಟ್ಟು 17 ಸ್ಥಾನದಲ್ಲಿ ಬರುವ ಜೋಡಿ ಎತ್ತುಗಳಿಗೆ ಬಹುಮಾನ ನೀಡಲಾಗುವದು. ದಿ.31 ರಂದು ಸಂಜೆ ಕಳಸ ಇಳಿಸುವದು, ಲಕ್ಷ ದೀಪೋತ್ಸವ, ಮಹಾಪ್ರಸಾದ ಕಾರ್ಯಕ್ರಮ ನಡೆಯುತ್ತವೆ. ಜಾತ್ರೆ ನಡೆಯುವ ಪ್ರತಿದಿನ ಪ್ರವಚನಕ್ಕೆ ಹುಣಸ್ಯಾಳ ಪಿ. ಜಿ ಮಠದ ಶ್ರೀ ನಿಜಗುಣ ದೇವರು, ಅರವೊಳ್ಳಿಯ ಚನ್ನಬಸವ ದೇವರು, ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಶ್ರೀಗಳು, ಧತ್ತವಾಡದ ಹೃಷಿಕೇಶಾನಂದ ಮಹಾರಾಜರು, ಹಾರುಗೋಪ್ಪದ ಶಿವಪ್ಪ ಅಜ್ಜನವರು, ಸವಟಗಿಯ ಲಿಂಗಯ್ಯ ಶ್ರೀಗಳು, ಮದನಭಾವಿಯ ಮಾತೋಶ್ರೀ ಶಿವದೇವಿ ತಾಯಿ, ಹಾರುಗೋಪ್ಪದ ಮಾತೋಶ್ರೀ ಶಿವಯೋಗಿಣಿ ತಾಯಿ ಮುಂತಾದ ಶರಣರು ಪಾಲ್ಗೊಳ್ಳಲಿದ್ದಾರೆ ಎಂದು ಜಾತ್ರಾ ಕಮಿಟಿ ಸದಸ್ಯರು ತಿಳಿಸಿದ್ದಾರೆ.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 