ಕ್ರೀಡೆ ಶಿಸ್ತು ಸಂಯಮ ಬೆಳೆಸುವಲ್ಲಿ ಸಹಕಾರಿ - ಡಿ ಅಬ್ದುಲ್‌ರಫಿ.
Sports help in developing discipline and self-control - D Abdul Rafi.
ಕ್ರೀಡೆ ಶಿಸ್ತು ಸಂಯಮ ಬೆಳೆಸುವಲ್ಲಿ ಸಹಕಾರಿ - ಡಿ ಅಬ್ದುಲ್‌ರಫಿ.
ಹೂವಿನಹಡಗಲಿ 02: ಕ್ರೀಡೆಗಳು ಶಾರೀರಿಕ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಮೂಲಕ ಶಿಸ್ತು ಸಂಯಮ ಬೆಳೆಸುವಲ್ಲಿ ಸಹಕಾರಿಯಾಗಿವೆ ಎಂದು ದಲಾಯತ್ ಸುಭಾನ್ ಸಾಬ್ ವೆಲ್ ಫೇರ್‌ಎಜ್ಯುಕೇಶನಲ್‌ಟ್ರಸ್ಟ್‌ನ ಅಧ್ಯಕ್ಷರಾದಅಬ್ದುಲ್‌ರಫಿ ಹೇಳಿದರು. ತಾಲೂಕಿನ ಹೊಳಗುಂದಿಯ ಗ್ಲೋಬಲ್ ಪದವಿ ಪೂರ್ವಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ. ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಬಲವಾದ ಆತ್ಮವಿಶ್ವಾಸ ಬೆಳೆಯುತ್ತದೆ ಎಂದರು.ಅಧ್ಯಕ್ಷತೆಯನ್ನು ವಹಿಸಿ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿದ ಹೊಳಗುಂದಿ ಗ್ರಾಮ ಪಂಚಾಯಿತಿಅಧ್ಯಕ್ಷಅಂಚಿದಡಾರ್ಪಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಸ್ಪರ್ಧೆಯನ್ನು ಆನಂದಿಸಿ ಎಂದರು. ತಾ.ನೌಕರರ ಸಂಘದಅದ್ಯಕ್ಷಎ.ಕೊಟ್ರಗೌಡ ಮಾತನಾಡಿದರು. ತಾಲೂಕುದೈಹಿಕ ಶಿಕ್ಷಣಾಧಿಕಾರಿ ರಫಿಅಹ್ಮದ್‌ಖವಾಸ್‌ಕ್ರೀಡಾ ಪಟುಗಳಿಗೆ ಕ್ರೀಡಾ ಪ್ರತಿಜ್ಞಾ ವೀಧಿ ಭೋದಿಸಿದರು. ಈ ಸಂದರ್ಭದಲ್ಲಿಉಪನ್ಯಾಸಕರ ಸಂಘದಅಧ್ಯಕ್ಷ ಬಸೆಟ್ಟಿ ಪ್ರಕಾಶ, ಪ್ರಾಚಾರ್ಯರಾದ ಎಂ.ಸತೀಶ.ಕೆ.ಪ್ರಕಾಶ. ಕೆ.ಶಬೀನಾ. ಉಮೇಶ. ಅಮರೇಗೌಡ ಪಾಟೀಲ್ . ಯಂಕಾ ನಾಯ್ಕ, ತಾಲೂಕುದೈಹಿಕ ಶಿಕ್ಷಕರ ಸಂಘದಅಧ್ಯಕ್ಷರಾದ ಪಿ.ಕೆ.ಪಾಟೀಲ್, ಎಂ.ಶಿವಪ್ಪ.. ಶಿಕ್ಷಕರ ಸಂಘದಅಧ್ಯಕ್ಷಜಗದೀಶ ಬಳ್ಳಾರಿ, ಗ್ಲೋಬಲ್ ಪದವಿ ಪೂರ್ವಕಾಲೇಜಿನ ಆಡಳಿತಧಿಕಾರಿ ಡಿ ಕರಿಂಸಾಬ್. ಪ್ರಾಂಶುಪಾಲರಾದ ಅಶ್ವೀನ್ ಕುಮಾರ್, ಸಂತೋಷ್‌ತಾಮಸ್, ಉಪನ್ಯಾಸಕರಾದ ಶಂಕರ ಬೆಟೇಗೆರಿ ಸೇರಿದಂತೆತಾಲೂಕಿನ ವಿವಿಧ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಉಪನ್ಯಾಸಕರು. ವಿದ್ಯಾರ್ಥಿಗಳು. ಸಿಬ್ಬಂದಿಗಳು ಸೇರಿದಂತೆಇತರರಿದ್ದರು. ಉಪನ್ಯಾಸಕರಾದ ಮಾಹಾದೇವ ಸೋಗಿ, ಬಸವರಾಜ, ಅಬು ಸಾಲೆಹಾ ಕಾರ್ಯಕ್ರಮವನ್ನು ನಿರೂಪಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 