ಪ್ರತಿಯೊಬ್ಬರಿಗೂ ಕ್ರೀಡೆ ಅವಶ್ಯಕ: ರಮೇಶ್ ಬಿರಾದಾರ

ಪ್ರತಿಯೊಬ್ಬರಿಗೂ ಕ್ರೀಡೆ ಅವಶ್ಯಕ: ರಮೇಶ್ ಬಿರಾದಾರ Sports are essential for everyone: Ramesh Biradar

ಪ್ರತಿಯೊಬ್ಬರಿಗೂ ಕ್ರೀಡೆ ಅವಶ್ಯಕ: ರಮೇಶ್ ಬಿರಾದಾರ 

ಆಲಮೇಲ 10: ಸಮೀಪ ಕಡಣಿ ಭೋಗಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು.  

ಸಿಂದಗಿ ತಾಲೂಕು ಕ್ರೀಡಾ ಶಿಕ್ಷಣ ಅಧಿಕಾರಿ ರಮೇಶ್ ಬಿರಾದಾರ ಮಾತನಾಡಿ ಸದೃಢ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ. ಪ್ರತಿಯೊಬ್ಬರಿಗೂ ಕ್ರೀಡೆ ಅವಶ್ಯಕ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಅನೇಕ ದುಶ್ಚಟಗಳಿಗೆ ಅಂಟಿಕೊಂಡಿರುವುದು ನಾವು ನೋಡಿದ್ದೇವೆ ಕೇಳಿದ್ದೇವೆ. ಆದ್ದರಿಂದ ವಿದ್ಯಾರ್ಥಿಗಳು ದುಶ್ಚಟಗಳಿಗೆ ಅಂಟಿಕೊಳ್ಳದೆ ಕ್ರೀಡೆಯಲ್ಲಿ ಭಾಗವಹಿಸುವುದು ಆರೋಗ್ಯ ಕಾಪಾಡುವುದು ಅತ್ಯಂತ ಅವಶ್ಯಕ ಎಂದು ಹೇಳಿದರು.  

ಸಾನಿಧ್ಯ ಎಸ್ ಆರ್ ಗಂಗನಳ್ಳಿ ಅಧ್ಯಕ್ಷ ಲಕ್ಷ್ಮೀಪುತ್ರ ಲಾಳಸಂಗಿ ಕ್ರೀಡಾ ಜ್ಯೋತಿ ಬೆಳಗಿಸಿದವರು. ಸಂತೋಷ್ ಕ್ಷತ್ರಿ ಆಲಮೇಲ ವಲಯದ ಕರವೇ ಅಧ್ಯಕ್ಷರು, ಕಡಣಿ ಗ್ರಾಮ ಪಂಚಾಯಿತಿ ಹಾಲಿ ಸದಸ್ಯರು ಕ್ರೀಡಾ  ಉದ್ಘಾಟಿಸಿದರು. ಬಸಲಿಂಗಪ್ಪ ಎಸ್ ಕತ್ತಿ ಕಡಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಎನ್ ಎಂ ಬಿರಾದಾರ ದೈಹಿಕ ಶಿಕ್ಷಕರು. ಪ್ರತಿಭಾ ವಿಧಿ ಬಿ ಸಿ ಕೆಸರಟ್ಟಿ ದೈಹಿಕ ಶಿಕ್ಷಕರು ಕಡಣಿ ದೇವಣಗಾವದ ಪ್ರಗತಿ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಸುರೇಶ್ ಗಂಗನಳ್ಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

ಕಡಣಿ ಭೋಗಲಿಂಗೇಶ್ವರ ಪ್ರೌಢಶಾಲೆಯ ಪ್ರಾಚಾರ್ಯ ರಮೇಶ್ ಗಂಗನಳ್ಳಿ ನಿರೂಪಿಸಿದರು.  

ಮುಖ್ಯ ಅತಿಥಿಗಳಾಗಿ ಕುಮಾರ್ ಚರಂತಿಮಠ, ಪಂಚು ಕ್ಷತ್ರಿ, ಚಂದು ಪೂಜಾರಿ, ಎನ್‌ಎಂ ಬಿರಾದಾರ, ಮಂಜುನಾಥ ಕುಂಬಾರ್, ಸಿದ್ದು ಶಿವಗೊಂಡ, ಸಿದ್ದು ಗಂಗನಳ್ಳಿ, ಈಶ್ವರ ಪೂಜಾರಿ, ಸೋಮನಾಥ ನವಲಿ, ಪ್ರಭಾಕರ್ ಬಿರಾದಾರ ಅನೇಕರು ಉಪಸ್ಥಿತರಿದ್ದರು.