ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಲು ಕ್ರೀಡೆ ಅವಶ್ಯಕ: ಮುದಿಗೌಡರ

ಧಾರವಾಡ 24: ವಿದ್ಯಾರ್ಥಿ ನಿಯರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಲು ಕ್ರೀಡೆಯಲ್ಲಿ ಭಾಗವಹಿಸುವುದು ಅತಿ ಅವಶ್ಯಕ ಎಂದು ಧಾರವಾಡ ಶಾರದಾ ಸಮೂಹ ಶಿಕಣ ಸಂಸ್ಥೆ ಕಾರ್ಯಾ ಧ್ಯಕ್ಷ ಎಸ್. ಬಿ. ಮುದಿಗೌಡರ ಹೇಳಿದರು.

ದಿ. 21ರಂದು ಕರ್ನಾ ಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತರ ಮಹಾವಿದ್ಯಾಲಯಗಳ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅತಿಥಿಗಳಾಗಿ ಆಗಮಿಸಿದ್ದ ಧಾರವಾಡ ಸಾಯಿಚರಣ ಕ್ಯಾಂಪಸ್ ಅಕಾಡ್ಮಿಕ ಅಡ್ಮಿನಿಸ್ಟ್ರೇಟರ್ ಡಾ.ಸಿ.ಆರ್.ಗೋಪಾಲಕೃಷ್ಣನ್, ಇವರು ಕ್ರೀಡಾಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ದೈಹಿಕ, ಮಾನಸಿಕ ಬೆಳವಣಿಗೆ ಜೊತೆಗೆ ಜೀವನದಲ್ಲಿ ಯಾವುದೇ ಸಾಧನೆ ಮಾಡಲು ಕ್ರೀಡೆ ಅವಶ್ಯಕವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ದೈಹಿಕ ಚಟುವಟಿಕೆ ಕಡಿಮೆ ಆಗಿದ್ದು, ಕ್ರೀಡಾಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ದೈಹಿಕ ಬೆಳವಣಿಗೆ ಮತ್ತು ಅಭ್ಯಾಸದಲ್ಲಿ ಹೆಚ್ಚಿನ ಆಸಕ್ತಿವಹಿಸಲು ಸಹಾಯಕವಾಗಿದೆ ಎಂದು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ ಅಕ್ಯಾಡಮಿಕ್ ಕೋ ಆರ್ಡಿ ನೇಟರ್ ಡಾ. ತುಳಸಿ, ಇವರು ವಿದ್ಯಾರ್ಥಿ ನಿಯರು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಶಾಲಾ ಕಾಲೇಜನ ಹಂತದಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು. ನಮ್ಮದೇಶದಲ್ಲಿ ಹಲವಾರು ಮಹಿಳೆಯರು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿದ್ದಾರೆ. ಹಾಗೆ ನೀವು ಒಲಂಪಿಕ್ನಲ್ಲಿ ಭಾಗವಹಿಸುವ ಗುರಿಯನ್ನು ಹೊಂದಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷ ಸ್ಥಾನವನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಕುಮಾರ ಪಂಚಪ್ಪ ಮಜ್ಜಿಗಿ ವಹಿಸಿದ್ದರು. ವೇದಿಕೆ ಮೇಲೆ ಟಾ.ವಿಶ್ವನಾಥ ನಡಕಟ್ಟಿ, ಶ್ರೀಧರ ಜೋಶಿ ಇದ್ದರು.

ಪಂದ್ಯಾಟದಲ್ಲಿ ಪ್ರಥಮ ಸಾನವನ್ನು ಕೆ.ಎಲ್.ಇ.ಆರ್.ಆರ್.ಮಹಿಳಾ ಮಹಾವಿದ್ಯಾಲಯ, ರಾಣೆಬೆನ್ನೂರು, ದ್ವೀತಿಯ ಸ್ಥಾನವನ್ನು ಶ್ರೀ ಸತ್ಯಸಾಯಿ ಮಹಿಳಾ ಮಹಾವಿದ್ಯಾಲಯ ಪಡೆದಿರುತ್ತದೆ.

ದೈಹಿಕ ಶಿಕ್ಷಣ ವಿಭಾಗದ ನಿರ್ದೇ ಶಕ ಮಂಜುನಾಥ ಜಾಡರ ಸ್ವಾಗತಿಸಿದರು. ವಂದನಾರ್ಪಣೆಯನ್ನು ಅಪೂರ್ವ ತುರಮರಿ ಮಾಡಿದರು. ಐಶ್ವರ್ಯ ಬೆಳ್ಳಿಗಟ್ಟಿ, ರುತುಕೊನೇರಿ ನಿರೂಪಿಸಿದರು.