ಧಾರವಾಡ 11: ಪಾಲಕರೆಂದರೆ ನಿಜವಾದ ಶಾಲೆಯ ಪಿಲರ್ಸ್. ಅವರು ಸರಿಯಾಗಿ ತೊಡಗಿಸಿಕೊಂಡಾಲೇ ಮಕ್ಕಳ ಕಲಿಕೆಯಲ್ಲಿ ಪ್ರಗತಿಯನ್ನು ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಕರು ಪಾಲಕರನ್ನು ಹೀಗೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಂತಾಗಬೇಕು. ಈ ಹಾದಿಯಲ್ಲಿ ಗುಬ್ಬಚ್ಚಿ ಗೂಡು ಶಾಲೆ ಹೆಜ್ಜೆಹಾಕಿರುವುದು ಅಭಿನಂದನೀಯ. ಇದೊಂದು ಉಳಿದ ಶಾಲೆಗಳಿಗೆ ಮಾದರಿಯ ಆಗುವ ರೀತಿಯಲ್ಲಿ ತಲೆ ಎತ್ತಿರುವುದು ಸಂತಸದ ಸಂಗತಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿದರ್ೇಶಕ ಡಾ. ಬಿ.ಕೆ.ಎಸ್ ವರ್ಧನ್ ಹೇಳಿದರು.
ಅವರು ಗುಬ್ಬಚ್ಚಿ ಗೂಡು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಹಾಗೂ ಪಾಲಕರ ಎರಡು ದಿನಗಳ ಪ್ರತಿಭೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಒಂದು ಉನ್ನತ ಹುದ್ದೆಗೆ ಹೋಗಬೇಕೆಂದರೆ ಅದು ಪವಾಡ ಮಾಡುವ ರೀತಿಯಲ್ಲಿ ಅಥವಾ ಜಾದು ಮಾಡಿದ ರೀತಿಯಲ್ಲಿ ಹೋಗಲು ಬರುವುದಿಲ್ಲ. ಸರಿಯಾಗಿ ಓದಬೇಕು, ಓದಿದಂತೆ ಪರೀಕ್ಷೆಗಳನ್ನು ಎದುರಿಸಬೇಕು. ಮುಂದೆ ನಿರಂತರ ಪ್ರಯತ್ನ ಇರಬೇಕು. ಅಂದಾಗಲೇ ಏನನ್ನಾದರೂ ಸಾಧನೆಗೈಯಲು ಸಾಧ್ಯವಾಗುವುದು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ ಎಂ.ಎಂ. ಚಿಕ್ಕಮಠ ಮಾತನಾಡಿ, ಪ್ರತಿ ಮಗುವನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಸಾಕು, ಅವನಲ್ಲಿರುವ ಒಂದು ಶ್ರೇಷ್ಠ ಪ್ರತಿಭೆ ಹೊರಹೊಮ್ಮಲು ಸಾಧ್ಯವಾಗುವುದು. ಇಲ್ಲದೇ ಹೋದರೆ ಅದು ಅಲ್ಲಿಯೇ ಕಮರಿ ಹೋಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಮಾತನಾಡಿ, ಗುಬ್ಬಚ್ಚಿ ಗೂಡು ಶಾಲೆ ಇದರ ಬೆಳವಣಿಗೆಯನ್ನು ಗಮನಿಸುತ್ತಿದ್ದೇನೆ. ಎಂದೂ ನಕಾರಾತ್ಮಕವಾಗಿ ಅಲ್ಲಿ ಚಟುವಟಿಕೆಗಳು ಇರುವುದಿಲ್ಲ. ಮಕ್ಕಳ ಮನಸ್ಸನ್ನು ತುಂಬಾ ಬೇಗ ಅರಳಿಸುತ್ತವತ್ತ ಕಾಳಜಿಯನ್ನು ಇಲ್ಲಿ ತೆಗೆದುಕೊಳ್ಳುವುತ್ತಿರುವುದನ್ನು ಗಮನಿಸುತ್ತಾ ಬಂದಿರುವೆ. ಯಾವಾಗಲು ಮಕ್ಕಳಿಗೆ ಸಕಾರಾತ್ಮಕ ವಿಷಯನ್ನು ಮಾತ್ರ ನೀಡುವಂತಾಗಬೇಕು ಎಂದರು.
ಕೆ.ಎಚ್. ನಾಯಕ್ ಮಾತನಾಡಿ, ಶಾಲೆಗಳಲ್ಲಿ ಕಲಿಕೆಯೆಂದರೆ ಬರೀ ಅಕ್ಷರ ಓದಲು ಬರೆಯಲು ಬರುವಂತೆ ಮಾಡುವುದು ಎಂದುಕೊಂಡಿದ್ದೇವೆ. ಆದರೆ, ನಿಜವಾದ ಕಲಿಕೆ ಪಠ್ಯೇತರ ಚಟುವಟಿಕೆಗಳಲ್ಲಿ ಇರುತ್ತದೆ. ಅದನ್ನು ಶಿಕ್ಷಣ ಸಂಸ್ಥೆಗಳು ಸರಿಯಾಗಿ ಅರ್ಥಮಾಡಿಕೊಂಡು ಪಾಲಕರು ಅಂಕಗಳ ಬೆನ್ನು ಹತ್ತದೇ ಮಕ್ಕಳ ಒಳಗಿನ ಪ್ರತಿಭೆ ಬೆನ್ನು ಹತ್ತಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿಕೊಂಡಿದ್ದರು, ವಿಜಯಲಕ್ಷ್ಮಿ ಸುಭಾಂಜಿ, ವಿ.ಎನ್. ಕೀತರ್ಿವತಿ ವೇದಿಕೆ ಮೇಲಿದ್ದರು. ವೀರಣ್ಣ ಪತ್ತಾರ, ಮಾಳಾಪೂರ ಯುವ ಧುರಿಣ ಮಂಜುನಾಥ ಚೋಳಪ್ಪನವರ, ಜಿಲ್ಲಾಪಂಚಾಯತ ಮಾಜಿ ಸದಸ್ಯೆ ಕಸ್ತೂರಿ ಅಷ್ಟಗಿ, ಮಾಜಿ ಕಾಪರ್ೋರೇಟರ್, ಪಾತೀಮಾ ಪಠಾಣ, ಮಕ್ಕಳ ಹಾಗೂ ಪಾಲಕರ ಪ್ರತಿಭೆಗಳನ್ನು ವೀಕ್ಷಿಸಿ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿದರು.
ಕನ್ನಡ, ಗಣಿತ, ವಿಜ್ಞಾನ, ಸಮಾಜ ವಿಷಯಗಳ ಮೇಲೆ ಮಕ್ಕಳ ಕಲಿಕೆಗೆ ಇಂಬು ದೊರಕುವಂತೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಾಗೆಯೇ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ವಿಸ್ತರಿಸಿಕೊಳ್ಳಲು ಮಕ್ಕಳೇ ಮಾರುಕಟ್ಟೆಯನ್ನು ಸೃಷ್ಟಿಮಾಡಿ ಸಾರ್ವಜನಿಕರು ಸಂತೆಗೆ ಬರುವಂತೆ ಮಾಡಿ, ಹಣಕಾಸಿನ ನಿರ್ವಹಣೆಯನ್ನು ಕಲಿತುಕೊಳ್ಳುವ ಪ್ರಯತ್ನವನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿದ್ದರಲ್ಲಿ ಡಾ. ಬಿಕೆಎಸ್. ವರ್ಧನ, ನಿದರ್ೇಶಕರು, ಕ್ಷೇತ್ರಶಿಕ್ಷಣಾಧಿಕರಿ ಎ.ಎ. ಖಾಜಿ ಭಾಗವಹಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು.