ಮತದಾನ ಜಾಗೃತಿಗೆ ಶಿಕ್ಷಕರಿಂದ ಹಾಡು
ಹಾವೇರಿ ೨೨: ಇಂದು ಎಲ್ಲರೂ ಮತ ಹಾಕಿಸಿಕೊಳ್ಳುವತ್ತ ಚಿತ್ತ ಹರಸಿದ್ದು, ಇಂತಹ ಲೋಕಸಭೆ ಚುನಾವಣೆಗಾಗಿ ಇಲ್ಲೊಬ್ಬ ಶಿಕ್ಷಕ ಮತದಾನ ಜಾಗೃತಿ ಗೀತೆಗಳನ್ನು ರಚಿಸಿ ಗಮನ ಸೆಳೆದಿದ್ದಾರೆ.
ಹೌದು ಸದಾ ಒಂದಿಲ್ಲೊಂದು ಸಮಾಜಮುಖಿ ಕರ್ತವ್ಯದ ಮೂಲಕ ಗುರುತಿಸಿಕೊಂಡಿರುವ ಜಿಲ್ಲೆಯ ಹಾನಗಲ್ಲ ತಾಲೂಕಿನ ಗಡಿಯಂಕನಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ನಿಂಗಪ್ಪ ಸಾಳಂಕಿ ಮತದಾನದ ಕುರಿತು ಮತದಾನದ ಪ್ರಮಾಣ ಹೆಚ್ಚಳ ಮಾಡಲು ಸ್ವಯಂ ಪ್ರೇರಿತವಾಗಿ ಅನೇಕ ರೀತಿಯ ಮತದಾನ ಜಾಗೃತಿ ಗೀತೆಗಳನ್ನು ರಚಿಸಿ ಜಿಲ್ಲಾ ಸ್ವೀಪ ಸಮಿತಿಗೆ ನೀಡಿದ್ದಾರೆ.
ಅದರಲ್ಲಿ 2 ಗೀತೆಗಳನ್ನು ಸ ರಿ ಗ ಮ ಪ ಖ್ಯಾತಿಯ ಹಾಗೂ ಹಾವೇರಿ ಜಿಲ್ಲಾ ಚುನಾವಣೆ ರಾಯಭಾರಿಯಾದ ಹನಮಂತಪ್ಪ ಲಮಾಣಿ ಹಾಡಿದ್ದು ಕನರ್ಾಟಕದಲ್ಲಿ ತುಂಬಾ ವೈರಲ್ ಆಗಿವೆ ಅವುಗಳೆಂದರೆ ಮತವ ಹಾಕು ಮನುಷ ನೀ ಚುನಾವಣೆಯ ದಿವಸ ಮತ್ತು ಕೇಳ ಜಾಣ ನೀ ಮತದಾನ ಮಾಡಣ್ಣ ಗೀತೆಗಳಾಗಿವೆ
ಇತ್ತೀಚೆಗೆ ಜಿಲ್ಲಾ ಕ್ರೀಡಾಂಗಣ ಹಾವೇರಿಯಲ್ಲಿ ನಡೆದ ಮತಗಾನ ಕಾರ್ಯಕ್ರಮದಲ್ಲಿ ನಿಂಗಪ್ಪ ಸಾಳಂಕಿ ರಚಿಸಿದ ಮತದಾನ ಜಾಗ್ರತಿ ಗೀತೆಗಳ ಮತದಾನ-ಮಹಾದಾನ ಎಂಬ ಧ್ವನಿ ಸುರಳಿಯನ್ನು ಹಾವೇರಿ ಜಿಲ್ಲಾಧಿಕಾರಿಗಳಾದ ಶ್ರೀ ಕೃಷ್ಣ ಭಾಜಪೇಯಿ ಬಿಡುಗಡೆಗೊಳಿಸಿ ಸಂತಸ ವ್ಯಕ್ತಪಡಿಸಿದರು.
ಧ್ವನಿ ಸುರಳಿಯಲ್ಲಿ ಒಟ್ಟು 6 ಹಾಡುಗಳಿದ್ದು ಎಲ್ಲ ಮತದಾನ ಜಾಗೃತಿ ಮೂಡಿಸುವ ಹಾಡುಗಳಾಗಿವೆ.
1)ಮತವ ಹಾಕು ಮನುಷ್ಯ 2)ಮತದಾರ.3)ಬನ್ನಿ ಬನ್ನಿ ಮತ ಹಾಕಲು ಬನ್ನಿ 4)ಬನ್ನಿ ಬೇಗ ನೀವು ಓಟು ಹಾಕಿ 5)ನಮ್ಮ ತಂದೆ ನಮ್ಮ ತಾಯಿ 6)ಮತದಾನವ ಮತದಾನವ ಈ ತರಹದ ಹಾಡುಗಳಿವೆ.
ಶಿಕ್ಷಕ ನಿಂಗಪ್ಪ ಸಾಳಂಕಿ ಹಾಡುಗಳನ್ನು ರಾಜ್ಯದ ಅನೇಕ ಜಿಲ್ಲೆಗಳು ತಮ್ಮ ತಮ್ಮ ಜಿಲ್ಲೆಗಳ ಮತದಾನ ಜಾಗೃತಿಗಾಗಿ ಬಳಸಿಕೊಳ್ಳುತ್ತಿವೆ. ಅನೇಕ ಜಿಲ್ಲೆಗಳಿಂದ ಅಭಿನಂದನಾ ಕರೆಗಳು ಬರುತ್ತಿವೆ.
ಶಿಕ್ಷಕ ನಿಂಗಪ್ಪ ಸಾಳಂಕಿಯ ಈ ನಿಸ್ವಾರ್ಥ ಸಮಾಜಮುಖಿ ಕೆಲಸವನ್ನು ಗುರುತಿಸಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸ್ವೀಪ ಸಮಿತಿ ಹಾವೇರಿ ಇವರು ಹನುಮಂತಪ್ಪ ಲಮಾಣಿ ಜೊತೆ ನಿಂಗಪ್ಪ ಸಾಳಂಕಿ ಯವರನ್ನು ಸನ್ಮಾನಿಸಿ ಹಾರೈಸಿತು
ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯ ನಿವರ್ಾಹಕ ಅಧಿಕಾರಿಗಳು, ಕೇಂದ್ರ ಚುನಾವಣೆ ವೀಕ್ಷಕರು, ವೆಚ್ಚ ವೀಕ್ಷಕರು, ಜಿಲ್ಲಾ ಪಂಚಾಯತ್ ಉಪಕಾರ್ಯದಶರ್ಿಗಳು ಹಾಗೂ ಜಿಲ್ಲಾ ಮಟ್ಟದ ಹಾಗೂ ತಾಲೂಕ ಮಟ್ಟದ ಅನೇಕ ಅಧಿಕಾರಿಗಳು ಭಾಗವಹಿಸದ್ದರು, ಕಾರ್ಯಕ್ರಮದಲ್ಲಿ ನಿಂಗಪ್ಪ ಸಾಳಂಕಿ ರಚಿಸಿದ ಗೀತೆಗಳನ್ನು ಹಣಮಂತ ಲಮಾಣಿ ಸೇರಿದಂತೆ ಅನೇಕ ಗಾಯಕರು ಹಾಡಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 