ಮುರ್ಕವಾಡ ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರ
Solution to the water problem of Murkawada village
ಮುರ್ಕವಾಡ ಗ್ರಾಮದಲ್ಲಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಪಟ್ಟಂತೆ ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟವಾದ ಸಮಸ್ಯೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಸ್ಪಂದಿಸಿದ್ದು, ಈ ಕೆಳಗಿನಂತೆ ಮಾಹಿತಿ ನೀಡಿರುತ್ತಾರೆ.
ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಶ್ರೀ ಲಕ್ಷ್ಮೀ ದೇವಿ ಜಾತ್ರೆ ದಿನಾಂಕ: 05/02/2026 ರಿಂದ 13/02/2026 ರವರೆಗೆ ನಡೆಯುತ್ತಲಿದ್ದು, ಸದರಿ ಜಾತ್ರೆಗೆ ಲಕ್ಷಕ್ಕಿಂತ ಅಧಿಕ ಭಕ್ತಾದಿಗಳು ಸೇರಿರುತ್ತಾರೆ. ಆದ್ದರಿಂದ ಸದರಿ ಗ್ರಾಮಕ್ಕೆ ಜಾತ್ರೆಯ ಸಮಯದಲ್ಲಿ ನೀರಿನ ಅಭಾವ ಉಂಟಾಗದಂತೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಜಾತ್ರೆಯ ಸಮಯದಲ್ಲಿ ಕಾಳಿ ನದಿಯ ನೀರನ್ನು ಪೂರೈಸುವಂತೆ ಶಾಸಕರು ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರರವರು ಪೂರ್ವಭಾವಿ ಸಭೆಗಳಲ್ಲಿ ಸೂಚಿಸಿರುತ್ತಾರೆ.
ಅದರಂತೆ ನಾವು ಕ್ರಮ ಕೈಗೊಂಡು, ಮುರ್ಕವಾಡ ಗ್ರಾಮದ ಓ.ಹೆಚ್.ಟಿ. ವರೆಗೆ ಬಹುಗ್ರಾಮ ಕುಡಿಯುವ ನೀರಿನ ಪೈಪಲೈನನ್ನು ಅಳವಡಿಸಿ, ನೀರು ಪೂರೈಸಿರುತ್ತೇವೆ. ಆದರೆ ಕೆಲವರು ಇಲಾಖೆಯ ಗಮನಕ್ಕೆ ತರದೇ, ಬಹುಗ್ರಾಮ ಕುಡಿಯುವ ನೀರಿನ ಪೈಪಲೈನನಿಂದ ಗ್ರಾಮದ ನೀರು ವಿತರಣಾ ಪೈಪಲೈನ್ ಗೆ ಜೋಡಣೆ ಮಾಡಿರುತ್ತಾರೆ. ಆದರಿಂದ ನೀರಿನ ಒತ್ತಡಕ್ಕೆ ಗ್ರಾಮದ ನೀರು ವಿತರಣಾ ಪೈಪಲೈನ ಹಾನಿಗೊಂಡಿದ್ದು, ಸುಮಾರು 20 ಮನೆಗಳಿಗೆ ಮಾತ್ರ ನೀರು ಪೂರೈಸಲು ವ್ಯತ್ಯಯ ಉಂಟಾಗಿರುತ್ತದೆ.
ಹಾಗೂ ಬಾಕಿ ಉಳಿದ ಎಲ್ಲಾ ಮನೆಗಳಿಗೆ ನೀರು ಪೂರೈಸಲು ಯಾವುದೇ ಸಮಸ್ಯೆ ಉಂಟಾಗಿರುವುದಿಲ್ಲ. ಸದರಿ 20 ಮನೆಗಳಿಗೆ ಹಾಗೂ ಗ್ರಾಮದ ಇತರೇ ಸ್ಥಳಗಳಿಗೆ ನೀರು ಪೂರೈಸಲು 5 ಟ್ಯಾಂಕರಗಳ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಈಗ ಗ್ರಾಮದಲ್ಲಿ ಯಾವುದೇ ನೀರಿನ ಅಭಾವವಿರುವುದಿಲ್ಲ. ಹಾನಿಗೊಳಗಾದ ಪೈಪಲೈನನ್ನು ಜಾತ್ರೆ ಮುಗಿದ ನಂತರ ದುರಸ್ತಿ ಮಾಡಲಾಗುವುದು.
ಮುಂದುವರೆದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನಿರ್ಮಿಸಲಾದ ನೀರು ಶುದ್ದೀಕರಣ ಘಟಕದಲ್ಲಿ, ನೀರನ್ನು ಶುದ್ದೀಕರಿಸಿ ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದೆ. ಸದರಿ ಘಟಕದ ನೀರಿನ ಮಾದರಿ, ಮುರ್ಕವಾಡ ಗ್ರಾಮದ ಓ.ಹೆಚ್.ಟಿ.ಯಲ್ಲಿನ ನೀರಿನ ಮಾದರಿ ಹಾಗೂ ಮುರ್ಕವಾಡ ಗ್ರಾಮದ ನಲ್ಲಿಯಿಂದ ನೀರನ್ನು ಸಂಗ್ರಹಿಸಿ ಪರೀಕ್ಷೆ ಕೈಗೊಳ್ಳಲಾಗಿದೆ. ಹಾಗೂ ಈವರೆಗೂ ನೀರಿನ ಗುಣಮಟ್ಟ ಚೆನ್ನಾಗಿದ್ದು, ಕುಡಿಯಲು ಯೋಗ್ಯವೆಂದು ದೃಢಪಟ್ಟಿರುತ್ತದೆ. 2 ಸದರಿ ಮಾದರಿಗಳನ್ನು ಜೈವಿಕ ಪರೀಕ್ಷೆಗಾಗಿ (ಃಠಠಛಿಚಿಟ) ವಿಭಾಗ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಹಳಿಯಾಳ ಅವರು ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 