ಮಣ್ಣಿನ ಸವಕಳಿ ತಡೆ, ಭೂಮಿಯ ಫಲವತ್ತತೆ ರಕ್ಷಣೆ ಬಹುಮುಖ್ಯ: ಸುರೇಶ ಕಮ್ಮಾರ


ಗ್ರಾಮ ಸಭೆಯಲ್ಲಿ ಕೃಷಿ ಇಲಾಖೆಯ ತರಬೇತಿ ಸಂಯೋಜಕ  ಮಾಹಿತಿ 

ಧಾರವಾಡ 09: ರಾಜ್ಯ ಸಕರ್ಾರ ಪ್ರಸಕ್ತ ವರ್ಷ ಜಲವರ್ಷ ಎಂದು ಘೋಷಣೆ ಮಾಡಿದ ಪ್ರಯುಕ್ತ ಜಲಾಮೃತ ಯೋಜನೆಯ ಉದ್ದೇಶ ಅಂತರಜಲ ಮಟ್ಟ ಹೆಚ್ಚಿಸುವ ಮೂಲಕ ಮಣ್ಣಿನ ಸವಕಳಿಯನ್ನು ತಡೆದು, ಭೂಮಿಯ ಫಲವತ್ತತೆಯನ್ನು ಕಾಪಾಡುವುದು ಬಹು ಮುಖ್ಯವಾಗಿದೆ ಎಂದು ಕೃಷಿ ಇಲಾಖೆಯ ತರಬೇತಿ ಸಂಯೋಜಕ ಸುರೇಶ ಕಮ್ಮಾರ ರೈತರಿಗೆ ಮಾಹಿತಿ ನೀಡಿದರು.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕುಬಿಹಾಳ ಮತ್ತು ಹಂಚಿನಾಳ ಗ್ರಾಮಗಳಲ್ಲಿ ಇತ್ತೀಚೆಗೆ ಕೃಷಿ ಇಲಾಖೆ, ಕುಂದಗೋಳ ಮತ್ತು ಪ್ರೇರಣಾ ರೂರಲ್ ಡೆವಲಪ್ಮೆಂಟ್ ಸೊಸೈಟಿ, ಧಾರವಾಡ ಇವರ ಸಹಯೋಗದಲ್ಲಿ "ಜಲಾಮೃತ ಯೋಜನೆ" ಕುರಿತು ಹಮ್ಮಿಕೊಂಡ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.  

ಜಲಾಮೃತ ಯೋಜನೆಯ ಅಡಿಯಲ್ಲಿ ಮಣ್ಣಿನ ಬದು, ಇಂಗು ಗುಂಡಿ, ಕೃಷಿ ಹೊಂಡ, ಕೃಷಿ ಅರಣ್ಯ ಹಾಗೂ ತೋಟಗಾರಿಕೆ ಚಟುವಟಿಕೆಗಳನ್ನು ಅನುಷ್ಠಾನ ಮಾಡುವುದಲ್ಲದೇ, ಬೆಳೆಗಳ ಇಳುವರಿಯನ್ನು ಯಾವರೀತಿ ಮಾಡಬೇಕು ಎಂಬುದರ ಕುರಿತು ರೈತರಿಗೆ ಮನವರಿಕೆ ಮಾಡಿಕೊಡುವುದಾಗಿದೆ. ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೂಲಿಕಾಮರ್ಿಕರಿಗೆ ಉದ್ಯೋಗ ಒದಗಿಸುವುದಾಗಿದೆ. ಗ್ರಾಮದ ರೈತರು ಜಲಾಮೃತ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು. 

ಸಹಾಯಕ ಕೃಷಿ ಅಧಿಕಾರಿ ಬಸವರಾಜ ಜಗ್ಗಲ್ ಮಾತನಾಡಿ, ಈ ಯೋಜನೆಯ ಅಡಿಯಲ್ಲಿ ಕೃಷಿಗೆ ಸಂಬಂಧಿಸಿದಂತೆ ಅನೇಕ ಕಾಮಗಾರಿಗಳು ಇವೆ. ವಿಶೇಷವಾಗಿ ತೋಟಗಾರಿಕೆ ಬೆಳೆಗಳಿಂದ ಸುಸ್ತಿರ ಆಧಾಯ ಹೆಚ್ಚಿನದಾಗಿ ಸಿಗುತ್ತದೆ. ರೈತರು ಆಧುನಿಕತೆಯನ್ನು ಬಳಸಿಕೊಂಡು ಉತ್ತಮ ಬೆಳೆಯ ಮೂಲಕ ಆಧಾಯ ಗಳಿಸಿಕೊಳ್ಳಬಹುದು ಎಂದು ತಿಳಿಸಿದರು. 

ಗ್ರಾಮ ಪಂಚಾಯತಿ ಅಧ್ಯಕ್ಷರು ಯಲ್ಲವ್ವ ಯೆಂಕುಬಾಯಿ ಗ್ರಾಮಸಭೆಯ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷರು ಶಿವಲಿಂಗಪ್ಪ ಸವಣೂರ, ಸದಸ್ಯರು ರಮೇಶ ತಂಬೂರ, ಶಿವಾನಂದ ತಂಬೂರ, ಶಾಂತವ್ವ ನಡೂರ, ಮಹಾದೇವಿ ನೀಲಗುಂದ, ಪ್ರೇರಣಾ ಸಂಸ್ಥೆಯ ಡಾ.ವಿಶ್ವನಾಥ ಚಿಂತಾಮಣಿ ಉಪಸ್ಥಿತರಿದ್ದರು. ಪ್ರೇರಣಾ ಸಂಸ್ಥೆಯ ಕಾರ್ಯದಶರ್ಿ ಮಂಜುನಾಥ ಪಾಟೀಲ ಯೋಜನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿ.ಕೆ. ಬಾಗಲ್ ನಿರೂಪಿಸಿದರು. ಗಂಗಾಧರ ಯಲಿಗಾರ ಸ್ವಾಗತಿಸಿದರು. ಗ್ರಾಮ ಸಭೆಯಲ್ಲಿ ಗ್ರಾಮದ ರೈತರು ಹಾಜರಿದ್ದು ಯೋಜನೆ ಕುರಿತು ಸಮಗ್ರ ಮಾಹಿತಿ ಪಡೆದರು.