ಸಾಮಾಜಿಕ ನ್ಯಾಯವೇ ಸಮಾನ ಸಮಾಜದ ಅಡಿಪಾಯ: ಅನ್ವರ ಅಂಗಡಿ

ಸಾಮಾಜಿಕ ನ್ಯಾಯವೇ ಸಮಾನ ಸಮಾಜದ ಅಡಿಪಾಯ:  ಅನ್ವರ ಅಂಗಡಿ  Social justice is the foundation of an equal society: Anwar Angadi

         ಸಿಂದಗಿ 20:  ಭಾರತ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೆ ಸಾಮಾಜಿಕ ಹಾಗೂ ಲಿಂಗ ಸಮಾನತೆ ಹಕ್ಕುಗಳನ್ನು ನೀಡಿದೆ ಎಂದು ತಿಳಿಸಿದರು. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು; ಆದರೆ ಜಾತಿ, ಲಿಂಗ, ಧರ್ಮ, ಬಡತನ-ಶ್ರೀಮಂತಿಕೆ ಇತ್ಯಾದಿ ಬೇಧಭಾವಗಳಿಂದ ಸಮಾಜದಲ್ಲಿ ಅಸಮಾನತೆ ಉಂಟಾಗುತ್ತಿದೆ ಎಂದು ಸಂಪನ್ಮೂಲ ವ್ಯಕ್ತಿ ವಕೀಲರಾದ ಅನ್ವರ ಅಂಗಡಿ ಹೇಳಿದರು. 

     ಪಟ್ಟಣದ ಬಸವ ನಗರದಲ್ಲಿರುವ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯಲ್ಲಿ ಮಾತನಾಡಿ, ಸಮಾಜದಲ್ಲಿ ಸಮಾನತೆ, ಮಾನವ ಹಕ್ಕುಗಳು ಹಾಗೂ ನ್ಯಾಯದ ಮಹತ್ವವನ್ನು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. 

     ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿ’ಮೆಲ್ಲೊ, ಮಾತನಾಡಿ, ಸಾಮಾಜಿಕ ನ್ಯಾಯದ ಪ್ರಮುಖ ಅಂಶಗಳಾದ ಆರ್ಥಿಕ ಸಹಾಯ, ಆರೋಗ್ಯ ರಕ್ಷಣೆ, ಉದ್ಯೋಗ ಭದ್ರತೆ, ಆಹಾರ ಮತ್ತು ಪೌಷ್ಠಿಕತೆ ಸೇರಿದಂತೆ ಪ್ರತಿಯೊಬ್ಬರಿಗೂ ಯೋಗ್ಯವಾದ ರಕ್ಷಣೆ ದೊರಕಬೇಕೆಂಬುದು ಸಾಮಾಜಿಕ ನ್ಯಾಯದ ಮೂಲ ಉದ್ದೇಶವೆಂದು ತಿಳಿಸಿದರು. 

       ತಾಲೂಕು ಆಸ್ಪತ್ರೆ ಸಿಂದಗಿ ವೈದ್ಯಾಧಿಕಾರಿಗಳಾದ ರಶ್ಮಿ ಪ್ರಿಯಾ ನಾಯಕ ಅವರು ಮಾತನಾಡಿ, ಆಯುಷ್ಮಾನ್ ಭಾರತ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬ ಅರ್ಹ ನಾಗರಿಕರೂ ಪಡೆಯಬೇಕು ಎಂದು ಕರೆ ನೀಡಿದರು. 

    ಸಂಸ್ಥೆಯ ನಿರ್ದೇಶಕರಾದ ಫಾ.ಸಂತೋಷ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಮಾಜದ ಸುಧಾರಣೆಗೆ ಬಸವಣ್ಣನವರು ಹಾಗೂ ಸಾವಿತ್ರಿಬಾಯಿ ಪುಲೆ ಅವರಂತಹ ಮಹನೀಯರು ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ಪ್ರತಿ ಕುಟುಂಬದ ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸಿ, ಅವರನ್ನು ಆರ್ಥಿಕವಾಗಿ ಸಬಲಗೊಳಿಸುವುದು ಸಮಸಮಾಜ ನಿರ್ಮಾಣದ ದಾರಿಯಾಗಿದೆಎಂದು ಹೇಳಿದರು. 

        ಈ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆ ಸಿಂದಗಿ ಸಿಬ್ಬಂದಿಗಳಾದ ಪ್ರಕಾಶ್ ರಾಠೋಡ, ರಫಿಕ್ ಮುಲ್ಲಾ ಹಾಗೂ ಕುಮಾರಿ ಲಕ್ಷಿ-್ಮ ಅವರು ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಿದರು.  

ಕಾರ್ಯಕ್ರಮವನ್ನು ಮಲಕಪ್ಪ ಹಲಗಿ ನಿರೂಪಿಸಿದರು, ಉಮೇಶ್ ದೊಡ್ಡಮನಿ ಸ್ವಾಗತಿಸಿದರು ಹಾಗೂ ವಿಜಯ ಭಂಟನೂರ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಹಳ್ಳಿಗಳಿಂದ ಮಹಿಳೆಯರು, ಜನ ವೇದಿಕೆ ನಾಯಕರು ಭಾಗವಹಿಸಿದರು. 

ಕಾರ್ಯಕ್ರಮದ ನಂತರ ಸರಕಾರಿ ಶಾಲೆಗಳ ಉಳಿವಿಗಾಗಿ, ಸಮುದಾಯ ಉಪಕೇಂದ್ರ ಮತ್ತು ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳು ಸಮರ​‍್ಕ ಮೂಲಸೌಕರ್ಯಗಳೊಂದಿಗೆ ವ್ಯವಸ್ಥಿತವಾಗಿ ನಡೆಯಬೇಕೆಂಬ ಬೇಡಿಕೆ ಜನವೇದಿಕೆ ನಾಯಕರು ಮತ್ತು ಸ್ಪೂರ್ತಿ ಒಕ್ಕೂಟದ ಪದಾಧಿಕಾರಿಗಳು ಮಾನ್ಯ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. 

ಫೋಟೊ : ಪಟ್ಟಣದ ಬಸವ ನಗರದಲ್ಲಿರುವ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಲಾದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಗೆ ಚಾಲನೆ ನೀಡಲಾಯಿತು.