ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಭೂ ಮಾಲಿಕನ ಬಂಧನಕ್ಕೆ ಆಗ್ರಹಿಸಿ ಸ್ಲಂ ಸಮಿತಿಯಿಂದ ಪ್ರತಿಭಟನೆ
Slum committee protests, demanding arrest of landowner who is oppressing people
ಗದಗ-13, ಗದಗ ನಗರದ ವ್ಯಾಪ್ತಿಯಲ್ಲಿ ಬರುವ ನವನಗರ ಸ್ಲಂ ಪ್ರದೇಶದ ರಿ.ಸ. ನಂ 594 ಆಸ್ತಿಯಲ್ಲಿ ಸುಮಾರು 78ಕ್ಕೊ ಹೆಚ್ಚು ಬಡವರು, ಕೊಲಿಕಾರ್ಮಿಕರು ಸುಮಾರು 25 ವರ್ಷಗಳಿಂದ ವಾಸವಾಗಿದ್ದಾರೆ. ಈ ಹಿಂದೆ ಸ್ಥಳೀಯ ಜನರಿಗೆ ನಿವೇಶನಗಳನ್ನು ಮಾರಾಟ ಮಾಡಿರುವ ಭೂ ಮಾಲಿಕ ಬಡ ಜನರಿಗೆ ಒಕ್ಕಲೇಬ್ಬಸುವ ಕುತಂತ್ರ ನಡೆಸುತ್ತಿರುವುದನ್ನು ಖಂಡಿಸಿ ಬಡ ಜನರಿಗೆ ಪದೇ-ಪದೇ ತೊಂದರೆ ನೀಡುತ್ತಿರುವ ಭೂ ಮಾಲಿಕನ ಬಂಧನಕ್ಕೆ ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿಯ ನೇತೃತ್ವದಲ್ಲಿ ನೂರಾರು ಸ್ಲಂ ನಿವಾಸಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಮಾತನಾಡಿ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಗೆ ಬರುವ ವಾರ್ಡ ಸಂಖ್ಯೆ:21, ರಹಮತ ನಗರ ಹತ್ತಿರ, ಗಂಗಿಮಡಿ ಮುಖ್ಯ ರಸ್ತೆಯಲ್ಲಿರುವ ನವನಗರ ಸ್ಲಂ ಪ್ರದೇಶದ ರಿ.ಸ.ನಂ 594 ರಲ್ಲಿಯ 2 ಎಕರೆ 39 ಗುಂಟೆ ಜಾಗೆಯಲ್ಲಿ ಭೂ ಮಾಲಿಕ ದತ್ತಾತ್ರೇಯ ಭಾಂಡಗೆ ಎಂಬುವನು 1999 ಮತ್ತು 2000 ಇಸ್ವಿ, 2001 ಹಾಗೂ 2009 ರಲ್ಲಿ ಗದಗ-ಬೆಟಗೇರಿ ನಗರದ ಬಡ ಹಾಗೂ ಕೊಲಿಕಾರರ ಕುಟುಂಬಗಳಿಗೆ ಸುಮಾರು 78 ನಿವೇಶನಗಳನ್ನು ಆಗಿನ ಸಂದರ್ಭದಲ್ಲಿ ಅಂದಿನ ಮಾರುಕಟ್ಟೆ ಬೆಲೆಯ ಪ್ರಕಾರ 15,000-00 ರಿಂದ 1 ಲಕ್ಷ 50 ಸಾವಿರ ರೂಗಳಿಗೆ ಮಾರಾಟ ಮಾಡಿರುತ್ತಾನೆ. ಕಳೆದ 25 ವರ್ಷಗಳಿಂದ ನವನಗರ ಪ್ರದೇಶದಲ್ಲಿ ಕೊಲಿ ಕಾರ್ಮೀಕರು, ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ದಲಿತ ಸಮುದಾಯದ ಕುಟುಂಬಗಳು, ಅಲೆಮಾರೆ ಸಮುದಾಯದ ಕುಟುಂಬಗಳು ಮತ್ತು ಹಿಂದುಳಿದ ಸಮುದಾಯದ ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತ ಬಂದಿದ್ದಾರೆ, ಆದರೆ ಈ ಹಿಂದೆ ಖರೀದಿ ನೀಡಿರುವ ಭೂ ಮಾಲಿಕ ಸ್ಥಳೀಯ ಪ್ರದೇಶದಲ್ಲಿ ನಿರ್ಮಿಸಿಲಾಗಿರುವ ಮನೆಗಳನ್ನು ತೆರವುಗೊಳಿಸುತ್ತೇನೆ. ಈ ಜಾಗೆ ಬಿಟ್ಟು ಹೋಗಿ ಎಂದು ಪದೇ-ಪದೇ ಜನರ ಮೇಲೆ ದೌರ್ಜನ್ಯ ನಡೆಸುತ್ತಿದ್ದು. ಕೊಡಲೇ ಭೂ ಮಾಲಿಕನ ಬಂಧಿಸಿ ಸ್ಲಂ ಜನರಿಗೆ ನ್ಯಾಯ ಕೊಡಬೇಕೆಂದು ಒತ್ತಾಯಿಸಿದರು. ಮೋಹನ ಭಜಂತ್ರಿ ವಕೀಲರು ಮಾತನಾಡಿ ನವನಗರ ಸ್ಲಂ ಪ್ರದೇಶದ ಕುಟುಂಬಗಳು ಭೂ ಮಾಲಿಕ ದತ್ತಾತ್ರೇಯ ಭಾಂಡಗೆ ಹತ್ತಿರ ನಿವೇಶನಗಳನ್ನು ಪಡೆದಿರುವ ದಾಖಲೆಗಳು, ಸ್ಥಳೀಯವಾಗಿ ವಾಸಿಸುತ್ತಿರುವ ಆಧಾರ ದಾಖಲೆಗಳು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿರುವ ಫಲಾನುಭವಿಗಳ ಮನೆ ಮಂಜೂರಾತಿ ಪತ್ರಗಳು, ವಿದ್ಯುತ್ ಬಿಲ್ಲಗಳು ಇನ್ನು ಹಲುವಾರು ದಾಖಲೆಗಳು ಸ್ಥಳೀಯ ನಿವಾಸಿಗಳು ಪಡೆದುಕೊಂಡಿದ್ದಾರೆ, 78 ಕುಟುಂಬಗಳು ಈ ಜಾಗೆಯ ಮೂಲ ಮಾಲಿಕರು, ಸುಮಾರು 25 ವರ್ಷಗಳಿಂದ ಸ್ಥಳೀಯ ಜನರು ತಮ್ಮ ಭೂಮಿಯನ್ನು ಕಾಪಾಡಿಕೊಂಡು ಬಂದಿದ್ದಾರೆ, ಆದರೆ ಇತ್ತಿಚ್ಚಿಗೆ ಭೂ ಮಾಲಿಕನಾದ ದತ್ತಾತ್ರೇಯ ವಾಸುದೇವ ಭಾಂಡಗೆ ಹಾಗೂ ಇವನ ಹಿಂಬಾಲಕರು ಬಡವರ, ಸ್ಲಂ ಜನರ ಹಾಗೂ ಕೊಲಿ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಿ, ಬಡವರ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದ್ದಾನೆ. ಕೊಡಲೇ ಜನರಿಗೆ ಅವರ ಕನಸಿನ ಮನೆಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿ ಭೂ ಮಾಲಿಕನನು ಬಂಧಿಸಬೇಕೆಂದು ಆಗ್ರಹಿಸಿದರು. ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಮೋಹನ ಭಜಂತ್ರಿ ವಕೀಲರು, ಕಾರ್ಯದರ್ಶಿ ಅಶೋಕ ಕುಸಬಿ, ಮೆಹಬೂಬಸಾಬ ಬಳ್ಳಾರಿ, ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಶರಣಪ್ಪ ಸೂಡಿ, ವೆಂಕಟೇಶ ಬಿಂಕದಕಟ್ಟಿ, ಬಸವರಾಜ ಕಳಸದ, ಮೆಹರುನಿಸಾ ಡಂಬಳ, ಮೈಮುನ ಬೈರಕದಾರ, ಕಸ್ತೂರಿ ಹಳ್ಳಿ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಶೇಖಪ್ಪ ಶೆಗಣಿ, ಗಿರಜವ್ವ ಬನ್ನಿಮರದ, ಗೌಸಸಾಬ ಅಕ್ಕಿ, ಮಹ್ಮದ ಗಡಾದ, ರಿಜ್ವಾನ ಮುಲ್ಲಾ, ಸೈಯದ ಅಲ್ತಾಫ, ಮೆಹಬೂಬ ಮುಲ್ಲಾ, ಸಂಜು ಗದಗ, ರಾಜಪ್ಪ ಗೌಳಿ, ರಿಯಾಜ ಪಾಮಡಿ, ಜಂದಿಸಾಬ ಢಾಲಾಯತ ಹಾಗೂ ನೂರಾರು ಸ್ಲಂ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 