ಆಕಾಶ ವೀಕ್ಷಣೆ ವಿದ್ಯಾರ್ಥಿಗಳಲ್ಲಿ ವಿಜ್ಞಾನಾಸಕ್ತಿಗೆ ಹೊಸ ದಿಕ್ಕು:ಖಗೋಳ ತಜ್ಞ ರವಿಶಂಕರ್ ಎಸ್

ಆಕಾಶ ವೀಕ್ಷಣೆ ವಿದ್ಯಾರ್ಥಿಗಳಲ್ಲಿ ವಿಜ್ಞಾನಾಸಕ್ತಿಗೆ ಹೊಸ ದಿಕ್ಕು:ಖಗೋಳ ತಜ್ಞ  ರವಿಶಂಕರ್ ಎಸ್ Sky watching is a new direction for science interest among students: Astronomer Ravi Shankar S

ಹೂವಿನಹಡಗಲಿ 22: ಆಕಾಶ ವೀಕ್ಷಣೆ ವಿದ್ಯಾರ್ಥಿಗಳಲ್ಲಿ ವಿಜ್ಞಾನಾಸಕ್ತಿಗೆ ಹೊಸ ದಿಕ್ಕು ನೀಡಲಿದೆ ತುಮಕೂರಿನ ವಿಜ್ಞಾನ ಕೇಂಧ್ರದ ಖಗೋಳ ತಜ್ಞ ರವಿಶಂಕರ್ ಎಸ್ ಅಭಿಪ್ರಾಯಪಟ್ಟರು ತಾಲ್ಲೂಕಿನ ಹೊಳಗುಂದಿ ಗ್ರಾಮದ ಪರಿವರ್ತನಾ ಸಂಸ್ಥೆಯ ನೇತೃತ್ವದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಸಿದ್ದೇಶ್ವರ ಗುಡ್ಡದಲ್ಲಿ  ಸ್ಥಳೀಯ ಶಾಲಾ ಮಕ್ಕಳಿಗಾಗಿ ಆಯೋಜಿಸಲಾದ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಮಕ್ಕಳಿಗೆ ಆಕಾಶ ಕಾಯಗಳು, ಗ್ರಹಗಳು, ನಕ್ಷತ್ರಗಳು ಹಾಗೂ ನಕ್ಷತ್ರಮಂಡಲಗಳ ಕುರಿತು ಸರಳ ಮತ್ತು ಸುಗಮವಾಗಿ ಮಾಹಿತಿ ನೀಡಿದರು. ಚಂದ್ರನ ಮೇಲ್ಮೈ ವೈಶಿಷ್ಟ್ಯಗಳು, ಗುರು ಗ್ರಹದ ಉಪಗ್ರಹಗಳು ಹಾಗೂ ರಾತ್ರಿ ಆಕಾಶದಲ್ಲಿ ಕಾಣಿಸುವ ಪ್ರಮುಖ ನಕ್ಷತ್ರಗಳ ಕುರಿತು ಅವರು ಚಿತ್ರಸಹಿತವಾಗಿ ವಿವರಿಸಿದರು. ಸಂಜೆ 6 ಗಂಟೆಗೆ ನಾಲ್ಕು ದೂರದರ್ಶಕಗಳ ಸಹಾಯದಿಂದ ವಿದ್ಯಾರ್ಥಿಗಳಿಗೆ ಚಂದ್ರ ಹಾಗೂ ಕೆಲವು ಗ್ರಹಗಳನ್ನು ನೇರವಾಗಿ ವೀಕ್ಷಿಸುವ ಅವಕಾಶ ಕಲ್ಪಿಸಲಾಯಿತು. ವಿಶೇಷ ಟೆಲಿಸ್ಕೋಪ್ ಳ ಸಹಾಯದಿಂದ ಚಂದ್ರನ ಮೇಲ್ಮೈಯ ಕುಳಿಗಳು, ಗುರು ಗ್ರಹ ಮತ್ತು ಅದರ ಉಪಗ್ರಹಗಳು, ಶುಕ್ರ ಗ್ರಹದ ಪ್ರಕಾಶಮಾನತೆ ಹಾಗೂ ಕೆಲವು ಪ್ರಸಿದ್ಧ ನಕ್ಷತ್ರಮಂಡಲಗಳನ್ನು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ  ಪಾಲಕರು ನೇರವಾಗಿ ವೀಕ್ಷಿಸಿದರು. 

ಶಿಕ್ಷಕ  ಪ್ರಶಾಂತ್ ಎಂಎಸ್ ಕೆ,ನಕ್ಷತ್ರ ಪುಂಜಗಳ ಬಗ್ಗೆ ಮಾಹಿತಿ ನೀಡಿದರು.ಪರಿವರ್ತನಾ ಸಂಸ್ಥೆಯ ಸದಸ್ಯ ಎಂ. ಲೋಕೇಶ್ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ವಿಜ್ಞಾನ ತಲುಪಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪ್ರಾಸ್ತಾವಿಕವಾಗಿ ಶಿಕ್ಷಕ ಆರ್ ಬಿ. ಗುರುಬಸವರಾಜ ಮಾತನಾಡಿದರು.ವೇದಿಕೆಯಲ್ಲಿ ಕರಿಬಸಪ್ಪ .ನವೀನ ಕೃಷ್ಣ. ಕೊಟ್ರೇಶ ಬಿ ರಾಜನಗೌಡ ಪಾಟೀಲ್ .ಹನುಮಂತಪ್ಪ ಟಿ.ಸಿದ್ಲಿಂಗಪ್ಪ  ದೊಡ್ಡಮನಿ .ಡಾ.ನೆಪೋಲಿಯನ್ .ಕೊಟ್ರೇಶ್ ಹಾವನೂರು. ಗುರುಬಸವರಾಜ ಎಚ್ .ಕೊಟ್ರೇಶ್‌.ಎಚ್  ಎಂ. ಶಾಂತಪ್ಪ  ಉಪಸ್ಥಿತರಿದ್ದರು