ಲೋಕದರ್ಶನ ವರದಿ
ಕಾರವಾರ, 19: ಕೈಗಾದ ಕೇಂದ್ರಿಯ ಶಾಲೆಯ ಹತ್ತನೇ ತರಗತಿ ವಿದ್ಯಾಥರ್ಿನಿ ಕೀತರ್ಿ.ವೈ.ಹುಕ್ಕೇರಿ ಅಂತರ್ ರಾಷ್ಟ್ರೀಯ ಸ್ಕೇಟಿಂಗ್ ರೂಲರ್ ಹಾಕಿ ಭಾರತದ ತಂಡಕ್ಕೆ ಕನರ್ಾಟಕದಿಂದ ಆಯ್ಕೆಯಾಗಿದ್ದಾಳೆ. ಭಾರತ ತಂಡದಲ್ಲಿ ಕನರ್ಾಟಕವನ್ನು ಪ್ರತಿನಿಧಿಸುತ್ತಿರುವ ಏಕೈಕ ಸ್ಕೇಟಿಂಗ್ ಹಾಕಿ ಆಟಗಾತರ್ಿಯಾಗಿದ್ದು, ಇದೇ ಜೂನ್.27 ರಿಂದ ಜು.4ರ ವರೆಗೆ ಸ್ಪೇನ್ ದೇಶದ ಬಾಸರ್ಿಲೋನಾದಲ್ಲಿ ನಡೆಯುವ ಅಂತರಾಷ್ಟ್ರೀಯ ಸ್ಕೇಟಿಂಗ್ ರೂಲರ್ ಹಾಕಿ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ ಎಂದು ಕೈಗಾ ರೂಲರ್ ಸ್ಕೇಟಿಂಗ್ ಅಕಾಡೆಮಿ ತರಬೇತುದಾರ ದಿಲೀಪ್ ಹಣಬರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾರವಾರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಕೀತರ್ಿ ಕಳೆದ 8 ವರ್ಷಗಳಿಂದ ಸ್ಕೇಟಿಂಗ್ನಲ್ಲಿ ತರಬೇತಿ ಪಡೆಯುತ್ತಿದ್ದು ಹಲವು ಸಲ ಕನರ್ಾಟಕಕ್ಕೆ ಪದಕಗಳನ್ನು ತಂದು ಕೊಟ್ಟಿದ್ದಾಳೆ. ರೂಲರ್ ಹಾಕಿಯಲ್ಲಿ ಭಾರತ ತಂಡವನ್ನು ದೇಶದೊಳಗಿನ ಪಂದ್ಯಗಳಲ್ಲಿ ನಾಲ್ಕು ಸಲ ಪ್ರತಿನಿಧಿಸಿ, ಮೂರು ಸಲ ಕಂಚಿನ ಪದಕ ಗೆದ್ದಿದ್ದಾಳೆ. ಸ್ಕೇಟಿಂಗ್ ಹಾಕಿಯಲ್ಲಿ ಕೀತರ್ಿ ಹುಕ್ಕೇರಿಗೆ ಅಪಾರ ಆಸಕ್ತಿಯಿದ್ದು, ಆ ನಿಟ್ಟಿನಲ್ಲಿ ಆಕೆಗೆ ತರಬೇತಿ ನೀಡಲಾಗಿದೆ. ಸ್ಕೇಟಿಂಗ್ ಹಾಕಿ ತಂಡಕ್ಕೆ ಕೈಗಾದಿಂದ ಮೂವರು ವಿದ್ಯಾಥರ್ಿನಿಯರು ಭಾಗವಹಿಸಿದ್ದರು. ಭಾರತ ತಂಡದ ಆಯ್ಕೆ ಮಹಾರಾಷ್ಟ್ರದ ನಂದೂರು ಬಾರ್ನಲ್ಲಿ ಇದೇ ಎಪ್ರಿಲ್ 24 ರಿಂದ ಮೇ.5 ರವರೆಗೆ ನಡೆದಿತ್ತು. ಭಾರತ ತಂಡಕ್ಕಾಗಿ ನಡೆದ ಪಂದ್ಯಗಳಲ್ಲಿ ಅಪೂರ್ವ ಸಾಧನೆ ಗಮಿಸಿದ ಆಯ್ಕೆದಾರರು ಕನರ್ಾಟಕದ ಕೈಗಾ ಸ್ಕೇಟಿಂಗ್ ಹಾಕಿ ಪಟುಗಳ ಪೈಕಿ ಕೀತರ್ಿಯನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಜೂನ್ 10 ರಿಂದ ಸ್ಕೇಟಿಂಗ್ ಹಾಕಿ ತರಬೇತಿ ಚಂಡಿಗಡದಲ್ಲಿ ನಡೆಯುತ್ತಿದ್ದು, ಅಲ್ಲಿನ ಪಂದ್ಯಗಳಿಗೆ ಕೀತರ್ಿ ಹಾಜರಾಗಲಿದ್ದಾಳೆ ಎಂದು ತರಬೇತುದಾರ ದಿಲೀಪ್ ಹಣಬರ ವಿವರಿಸಿದರು.
ಹಲವರ ಸಂತಸ:
ಕೀತರ್ಿ ಯಲ್ಲಪ್ಪ ಹುಕ್ಕೇರಿ ಸ್ಕೇಟಿಂಗ್ ಹಾಕಿಯ ಭಾರತ ತಂಡದಲ್ಲಿ ಸ್ಥಾನ ಪಡೆದಿರುವುದಕ್ಕೆ ಕೈಗಾ ಅಣುಸ್ಥಾವರ ನಿದರ್ೇಶಕ ಸತ್ಯ ನಾರಾಯಣ, ಸ್ಥಾನಿಕ ನಿದರ್ೇಶಕರಾದ ಜಿ.ಪಿ.ರೆಡ್ಡಿ, ಜಿ.ಆರ್. ದೇಶಪಾಂಡೆ , ಕೇಂದ್ರೀಯ ಶಾಲೆಯ ಪ್ರಿನ್ಸಿಪಾಲರಾದ ಶ್ರೀನಿವಾಸರಾವ್, ಯಲ್ಲಪ್ಪ ಹುಕ್ಕೇರಿ ದಂಪತಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸ್ಪೇನ್ ದೇಶದ ಬಾಸರ್ಿಲೋನಾದಲ್ಲಿ ಕೈಗಾ ಅಣುಸ್ಥಾವರ ಕೇಂದ್ರದ ವಿದ್ಯಾಥರ್ಿನಿ ಸ್ಕೇಟಿಂಗ್ ಹಾಕಿಯಲ್ಲಿ ಹೆಸರು ಮಾಡುತ್ತಿರುವುದು ಹಾಗೂ ಭಾರತ ತಂಡದಲ್ಲಿ ಸ್ಥಾನ ಪಡೆದಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಕನರ್ಾಟಕ ಮತ್ತು ಕೈಗಾದ ಹೆಸರು ಉಳಿಸುವಲ್ಲಿ ಸ್ಕೇಟಿಂಗ್ ಪಟುಗಳು ಆಗಾಗ ಹೆಸರು ಮಾಡುತ್ತಲೇ ಇದ್ದಾರೆ. ಈಚೆಗೆ ಕೈಗಾ ಬಾಲಕ ಮೊಹಮ್ಮದ್ ಸಾಖಿಬ್
ಲಿಂಬೋ ಸ್ಪಿನ್ನಿಂಗ್ ಸ್ಕೇಟಿಂಗ್ನಲ್ಲಿ ವಿಶ್ವ ದಾಖಲೆ ಬರೆದಿದ್ದ. ಕಳೆದ ಎಪ್ರಿಲ್ 28 ರಂದು ಕಾರವಾರದಲ್ಲಿ ರೆಕಾರ್ಡ ಬುಕ್ ಆಫ್ ಇಂಡಿಯಾದ ಅಧಿಕಾರಿಗಳ ಸಮ್ಮುಖದಲ್ಲಿ ಸತತ 25 ನಿಮಿಷ 180 ಡಿಗ್ರಿಯಲ್ಲಿ ಸ್ಪಿನ್ನಿಂಗ್ ಮಾಡಿದ್ದ ಬಾಲಕ ಮೊಹಮ್ಮದ್ ಸಾಖಿಬ್ ಕನರ್ಾಟಕದ ಹಾಗೂ ವಿವಿಧ ದೇಶಗಳ ಸ್ಕೇಟಿಂಗ್ ಪಟುಗಳ ಗಮನ
ಸೆಳೆದಿದ್ದ.