ಘಮಘಮಿಸಿದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳು
Sizzling cereals and forgotten dishes
ಗದಗ 07: ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ವಾಣಿಜ್ಯ ಮೇಳ 2025-26 ರ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ “ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ (ಐಚಿಟಿಜ ಖಚಿಛಿ ಕಡಿಠಣಛಿ) ಪಾಕ ಸ್ಪರ್ಧೆ”ಯನ್ನು ಕೃಷಿ ಇಲಾಖೆ ಹಾಗೂ ಕೆ.ಹೆಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಸಹಯೋಗದೊಂದಿಗೆ ದಿನಾಂಕ: 06-01-2026 ರಂದು ಬೆಳಿಗ್ಗೆ 11.00 ಗಂಟೆಗೆ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಅವರು ರಾಗಿ ಕೇಕ್‌ನ್ನು ಕತ್ತರಿಸುವ ಮುಖಾಂತರ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಸಿರಿಧಾನ್ಯಗಳು ಕಡಿಮೆ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಬೆಳೆಯುತ್ತಿದ್ದು, ಪೌಷ್ಟಿಕಾಂಶಗಳ ಆಗರವಾಗಿರುತ್ತವೆ. ಇವುಗಳ ನಿಯಮಿತವಾದ ಸೇವನೆಯಿಂದ, ಈಗಿನ ಜೀವನ ಶೈಲಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಕ್ಕರೆ ರೋಗ, ರಕ್ತದೊತ್ತಡ, ಬೊಜ್ಜು ಇತ್ಯಾದಿಗಳನ್ನು ಯಶಸ್ವಿಯಾಗಿ ನಿರ್ವಹಿಸಬಹುದಾಗಿದೆ. ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚಾಗಿ ಬಳಸಿ ಆರೋಗ್ಯಕರವಾದ ಜೀವನವನ್ನು ನಡೆಸುವಂತೆ ಕರೆ ನೀಡಿದರು. ಪ್ರದರ್ಶನದಲ್ಲಿದ್ದ ಎಲ್ಲಾ ಖಾದ್ಯಗಳನ್ನು ವೀಕ್ಷಿಸಿ, ರುಚಿ ಸವಿದು, ಸಾಂಪ್ರದಾಯಕವಾಗಿ ಸಿರಿಧಾನ್ಯಗಳನ್ನು ಬಳಸಿ ಹಲವು ಖಾದ್ಯಗಳನ್ನು ತಯಾರಿಸುವುದು ಕ್ಲಿಷ್ಟಕರ ಮತ್ತು ಶ್ರಮದಾಯಕವಾಗಿದ್ದು, ಆಸಕ್ತಿಯಿಂದ ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳನ್ನು ಶ್ಲಾಘಿಸಿದರು.
ಸದರಿ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ವಿವಿಧ ತಾಲ್ಲೂಕು ಹಾಗೂ ಗ್ರಾಮಗಳಿಂದ ಒಟ್ಟು 73 ಸ್ಪರ್ಧಾರ್ಥಿಗಳು ವೈವಿಧ್ಯಮಯ ಹಾಗೂ ರುಚಿಕರವಾದ ವಿವಿಧ ಸಿರಿಧಾನ್ಯದ ಹಾಗೂ ಮರೆತು ಹೋದ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಿಕೊಂಡು ಬಂದು ಪ್ರದರ್ಶಿಸಿದ್ದರು. ಸಿರಿಧಾನ್ಯದ ಸಿಹಿ ಖಾದ್ಯಗಳಲ್ಲಿ ವಿವಿಧ ಪಾಯಸಗಳು, ಹೋಳಿಗೆಗಳು, ಲಾಡುಗಳು, ಹಲ್ವಾ, ಕೇಕ್, ಪುಡ್ಡಿಂಗ್, ಸಿರಿಧಾನ್ಯ ಗಾರಿಗೆ, ಸಜ್ಜೆ ಉಂಡೆ ಮತ್ತು ಮಾಲ್ದಿ ಇತ್ಯಾದಿಗಳನ್ನು ರುಚಿಕರವಾಗಿ ತಯಾರಿಸಿ, ಆಕರ್ಷಕವಾಗಿ ಪ್ರದರ್ಶಿಸಿದ್ದರು. ಹಾಗೆಯೇ ಸಿರಿಧಾನ್ಯದ ಖಾರದ ಖಾದ್ಯಗಳಲ್ಲಿ ರುಚಿಕರವಾದ ವಡೆಗಳು, ನುಚ್ಚು, ಅಂಬಲಿ, ಹಪ್ಪಳ, ಚಕ್ಕುಲಿ, ಕಿಚಡಿ, ರೊಟ್ಟಿಗಳು, ಜೋಳದ ಮುಟುಗಿ, ಎಣ್ಣೆಗಡುಬು, ಪಲಾವ್, ದೋಸೆ, ಮಾಲ್ಟ್, ಸಾವಿ ಮೊಸರನ್ನ, ಉಂಡಗಡುಬು, ಜೋಳದ ಕಿಚಡಿ, ಜೋಳದ ಮಸಾಲೆ ರೊಟ್ಟಿ, ಬಾರಿ್ಲ ಪೊಂಗಲ್, ಸಿರಿಧಾನ್ಯ ನಿಪ್ಪಟ್ಟು ನೋಡುಗರನ್ನು ಸವಿಯಲು ಕೈ ಬೀಸಿ ಕರೆಯುತ್ತಿದ್ದವು. ಇವುಗಳಲ್ಲದೇ, ಮರೆತು ಹೋದ ಖಾದ್ಯಗಳ ವಿಭಾಗದಲ್ಲಿ ಪೌಷ್ಟಿಕವಾದ ಕೊರಲೆ ಅಕ್ಕಿ ಸಂಡಿಗೆ, ಕೋಡಬೇಳೆ, ಗೋದಿ ಗಾರಿಗೆ, ಆಣಿಕಲ್ಲು ಹುಗ್ಗಿ, ಹುರುಳಿ ಪಾಯಸ, ಗುಳ್ಳಡಿಕೆ ಉಂಡಿ,
ಬೆಲ್ಲದ ಹೋಳಿಗೆ, ಅಗಸೆ ಉಂಡೆ, ಕೆಂಪು ಗೋಧಿ ಹಲ್ವ, ಇತ್ಯಾದಿಗಳು ಬಾಯಲ್ಲಿ ನೀರೂರಿಸುವಂತಿದ್ದವು. ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಅವರು ಮಾತನಾಡಿ ಸ್ಪರ್ಧೆಯಲ್ಲಿ ಎಲ್ಲರೂ ಅತಿ ಉತ್ಸಾಹದಿಂದ ಭಾಗವಹಿಸಿರುವುದು ತುಂಬಾ ಸಂತೋಷಕರವಾಗಿದೆ ಎಂದು, ಎಲ್ಲಾ ಖಾದ್ಯಗಳು ಅತ್ಯುತ್ತಮವಾಗಿ ಮೂಡಿ ಬಂದಿದ್ದು, ಬಹುಮಾನ ಪಡೆಯಲು ಅರ್ಹತೆ ಹೊಂದಿರುತ್ತವೆ ಎಂದು ಅಭಿಪ್ರಾಯಪಟ್ಟರು. ಸುಧಾ ಮಂಕಣಿ, ಮುಖ್ಯಸ್ಥರು(ಪ್ರಭಾರಿ), ಕೆ.ಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ, ಸಾವಿತ್ರಿ ಬ್ಯಾಡಗಿ, ಆರ್.ಡಿ.ಪಿ.ಆರ್. ಯುನಿವರಿ್ಸಟಿ, ಹಾಗೂ ಸ್ಫೂರ್ತಿ ಜಿ.ಎಸ್., ಉಪ ಕೃಷಿ ನಿರ್ದೇಶಕರು, ಗದಗ ಇವರು ನಿರ್ಣಾಯಕರಾಗಿ ಭಾಗವಹಿಸಿದ್ದರು.
ಸಿರಿಧಾನ್ಯದ ಸಿಹಿ ಖಾದ್ಯಗಳು, ಸಿರಿಧಾನ್ಯದ ಖಾರದ ಖಾದ್ಯಗಳು ಹಾಗೂ ಮರೆತು ಹೋದ ಖಾದ್ಯಗಳ ಮೂರೂ ವಿಭಾಗಗಳಲ್ಲಿ ತಲಾ ಮೂರು ಬಹುಮಾನಗಳನ್ನು ಪ್ರಮಾಣಪತ್ರಗಳೊಂದಿಗೆ ವಿತರಿಸಲಾಯಿತು. ಮೂರೂ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದವರು ಬರುವ ದಿನಗಳಲ್ಲಿ ಏರಿ್ಡಸುವ ರಾಜ್ಯಮಟ್ಟದ ಸಿರಿಧಾನ್ಯದ ಪಾಕ ಸ್ಪರ್ಧೆಯಲ್ಲಿ ಕಡ್ಡಾಯವಾಗಿ ಭಾಗವಹಿಸಲು ತಿಳಿಸಲಾಯಿತು. ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಅಭಿನಂದನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಉಪವಿಭಾಗಾಧಿಕಾರಿ ಗಂಗಪ್ಪ ಇವರು ಭಾಗವಹಿಸಿ ವೀಕ್ಷಿಸಿದರು. ಸದರಿ ಕಾರ್ಯಕ್ರಮದಲ್ಲಿ ಕೃಷಿ ಇಲಾಖಾ ಅಧಿಕಾರಿಗಳು/ಸಿಬ್ಬಂದಿಗಳು, ಮಂಜುನಾಥ ಭರಮಗೌಡರ, ಉಪ ಯೋಜನಾ ನಿರ್ದೇಶಕರು(ಆತ್ಮಾ), ಆತ್ಮಾ ಸಿಬ್ಬಂದಿ ಹಾಗೂ ಕೆ.ಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಕೃಷಿ ಅಧಿಕಾರಿಗಳು/ಸಿಬ್ಬಂದಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಸೀಮಾ ಸವಣೂರ, ಸಕೃನಿ (ರೈಮ) ಇವರು ಕಾರ್ಯಕ್ರಮ ನಿರ್ವಹಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 