ಸಿರುಗುಪ್ಪ:-ಹಳೆಕೋಟೆ ವೀರಭದ್ರೇಶ್ವರ ಜಾತ್ರೆಯಲ್ಲಿ ಭಕ್ತರ ಅಗ್ನಿಕುಂಡ ಹರಕೆ-ತೀರಿಕೆ

ಸಿರುಗುಪ್ಪ:-ಹಳೆಕೋಟೆ ವೀರಭದ್ರೇಶ್ವರ ಜಾತ್ರೆಯಲ್ಲಿ ಭಕ್ತರ ಅಗ್ನಿಕುಂಡ ಹರಕೆ-ತೀರಿಕೆ Siruguppa:- Devotees offer offerings at the fire pit at the Halekote Veerabhadreshwara fair

ಸಿರುಗುಪ್ಪ 03: ತಾಲೂಕು ಹಳೆಕೋಟೆ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿ ಜರುಗಿದ ಜಾತ್ರೆಯ ಅಂಗವಾಗಿ ಅಗ್ನಿಕುಂಡ ನಿರ್ಮಾಣ ಮಾಡಲಾದ ಉದ್ಯೋಗ ಸಂತಾನ ಸಂಪತ್ತು ಆರೋಗ್ಯ ಸೇರಿದಂತೆ ಮುಂತಾದ ಇಷ್ಟಾರ್ಥ ಈಡೇರಿಸುವಂತೆ ಕೋರಿ ಭಕ್ತಾದಿಗಳು ಅಗ್ನಿ ಕುಂಡ ತುಂಬಿದ ಕೆಂಡದಲ್ಲಿ ಹಾಯುವ ಮೂಲಕ ತಮ್ಮ ಹರಕೆಯನ್ನು ತಿರಿಸಿದರು  

ಮಹಿಳೆಯರು ಮಕ್ಕಳು ಯುವಕರು ವೃದ್ಧರು ಸೇರಿದಂತೆ ಎಲ್ಲಾ ವಯೋಮಾನದವರು ಹರ ಹರ ಮಹಾದೇವ ಜಯ ಘೋಷದೊಂದಿಗೆ ಅಗ್ನಿಕುಂಡದಲ್ಲಿ ಹೆಜ್ಜೆ ಹಾಕುವ ಮೂಲಕ ತಮ್ಮ ಇಷ್ಟಾರ್ಥ ತೀರಿಸಿದರು  ಹಲವರು ಪುಟ್ಟ ಕಂದಮ್ಮಗಳನ್ನು ಎತ್ತಿಕೊಂಡು ಅಗ್ನಿಕುಂಡದಲ್ಲಿ ಸಾಗುವ ಮೂಲಕ ನೋಡುಗರನ್ನು ಗಮನ ಸೆಳೆದರು  

ಸಕಲ ಮಂಗಳ ವಾದ್ಯಗಳು ಪುರವಂತರ ಸಮ್ಮಾಳ ಭಕ್ತ ಸಮೂಹದ ಜಯ ಘೋಷಗಳು ಮುಗಿಲು ಮುಟ್ಟಿತು ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ವೀರಭದ್ರೇಶ್ವರ ದೇವರ ದರ್ಶನ ಪಡೆದ ಭಕ್ತರು ಹಣ್ಣು ಕಾಯಿ ಸಮರ​‍್ಿಸಿದರು ಹಳೆಕೋಟೆ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೆ ಏರಿ​‍್ಡಸಿದ ವೀರಭದ್ರೇಶ್ವರೊಂದಿಗೆ ಅದ್ದೂರಿಯಾಗಿ ವಿಜೃಂಭಣೆಯಿಂದ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು.