ಹುಬ್ಬಳ್ಳಿ 11: ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಮುಂಬೈ ಪ್ರೆಸಿಡೆನ್ಸಿಯಲ್ಲಿ ಹಲವಾರು ಖಾತೆಗಳಲ್ಲಿ ಸಚಿವರಾಗಿದ್ದ ಅದರಲ್ಲೂ ಶಿಕ್ಷಣ ಖಾತೆ ಸಚಿವರಾಗಿದ್ದಾಗ ಉತ್ತರ ಕನರ್ಾಟಕದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಮರೆಯಲಾಗದ ಕೊಡುಗೆ ನೀಡಿದ ಸರ್ ಸಿದ್ಧಪ್ಪ ಕಂಬಳಿ ಅವರ 137 ನೇ ಜನ್ಮದಿನೋತ್ಸವದ ನಿಮಿತ್ತ ಪಾಲಿಕೆ ಎದುರಿಗೆ ಇರುವ ಸರ್ ಸಿದ್ಧಪ್ಪ ಕಂಬಳಿ ಅವರ ಮೂತರ್ಿಗೆ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರ್ಪಣೆ ಮಾಡಿ ಗೌರವ ಅರ್ಪಣೆ ಮಾಡಿ, ನಮನಗಳನ್ನು ಸಲ್ಲಿಸಲಾಯಿತು ಹಾಗೂ ಸರ್ ಸಿದ್ಧಪ್ಪ ಕಂಬಳಿ ಅವರು ಮಾಡಿದ ಸೇವಾ ಕಾರ್ಯಗಳನ್ನು ಸ್ಮರಿಸಲಾಯಿತು.
ಮುಖ್ಯ ಅತಿಥಿಗಳಾಗಿ ವಾಕರಸಾ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ, ಬಿಡಿಕೆ ವೇರ್ನ ಆರೋಗ್ಯ ಅಧಿಕಾರಿ ಡಾ.ವಿ.ಬಿ.ನಿಟಾಲಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷ, ಸಾಹಿತಿ ಪ್ರೊ ಎಸ್.ವಿ.ಪಟ್ಟಣಶೆಟ್ಟಿ, ಕಾರ್ಯದಶರ್ಿ ಸುರೇಶ ಡಿ. ಹೊರಕೇರಿ, ರೋಟರಿ ಕ್ಲಬ್ ಹುಬ್ಬಳ್ಳಿ-ಉತ್ತರ ವಲಯದ ಅಧ್ಯಕ್ಷ ಗಿರೀಶ ನಲವಡಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಕಾರ್ಯದಶರ್ಿ ಮೃತ್ಯುಂಜಯ ಮಟ್ಟಿ, ಶಿವರುದ್ರ ಟ್ರಸ್ಟನ ನಿದರ್ೇಶಕ, ವೈದ್ಯ ಡಾ. ಬಸವಕುಮಾರ ತಲವಾಯಿ, ಆನಂದ ಘಟಪನದಿ, ಮೊಹಮ್ಮದ ಶರೀಫ್, ವಿನಾಯಕ, ಮುಂತಾದವರು ಇದ್ದರು.