51 ವರ್ಷಗಳ ಬಳಿಕ ವಕ್ಫ ಬೋರ್ಡನಿಂದ ಮುಕ್ತಗೊಂಡ ಸಿಂದಗಿ ವಿರಕ್ತಮಠ
Sindagi Viraktamath freed from Waqf Board after 51 years
ಸಿಂದಗಿ 04: ಸತತ 51 ವರ್ಷಗಳ ಹೋರಾಟಕ್ಕೆ ನ್ಯಾಯ ದೊರಕಿದೆ. ಪರಿಣಾಮ ನಮ್ಮ ಸಿಂದಗಿಯ ಗುರುಬಸವ ವಿರಕ್ತಮಠದ ಆಸ್ತಿಯು ಮರಳಿ ಮಠದ ಹೆಸರಿಗಾಗಿದೆ ಎಂದು ಸಂತೋಷವನ್ನು ಪತ್ರಕರ್ತರೊಂದಿಗೆ ಗುರುಬಸವ ವಿರಕ್ತಮಠದ ಸೇವಾ ಸಮಿತಿಯ ಕಾರ್ಯದರ್ಶಿ ನಿಂಗಪ್ಪ ತಂ. ಗುರುಬಸಪ್ಪ ಪಟ್ಟಣಶೆಟ್ಟಿ ಇವರು ಹಂಚಿಕೊಂಡರು.
ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಗುರುಬಸವ ವಿರಕ್ತಮಠದ ಆಸ್ತಿಯನ್ನು ಸನ್ 1974 ರಲ್ಲಿ ಅನಧಿಕೃತವಾಗಿ ವಕ್ಫ ಬೋರ್ಡ ತನ್ನಹೆಸರಿಗೆ ಮಾಡಿಕೊಂಡಿತ್ತು. ಇದರ ಬಗ್ಗೆ ಸಾಕಷ್ಟು ಹೋರಾಟ ಮಾಡಲಾಗಿ ಕಳೆದ 2024 ರಲ್ಲಿ ರಾಜ್ಯಾದ್ಯಾಂತ ವಕ್ಫ್ ಬೋರ್ಡ ವಿರುದ್ಧ ಸಾಕಷ್ಟು ಹೋರಾಟಗಳು ನಡೆದವು ಆ ಸಂದರ್ಭದಲ್ಲಿ ನಮ್ಮ ಮಠದ 600 ವರ್ಷಗಳ ಇತಿಹಾಸದ ದಾಖಲೆಗಳನ್ನು ನಾವು ಸರ್ಕಾರದ ಮುಂದಿಟ್ಟಾಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲೆಯ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳು ಇಂಡಿ ಇವರ ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ವ್ಯಾಜ್ಯ ನಡೆಸಲಾಯಿತು.
ಸದರಿ ಪ್ರಕರಣದಲ್ಲಿ ಪಕ್ಷಗಾರರಾಗಿ ಶ್ರೀ ಮ.ನಿ.ಪ್ರ.ಗುರುಬಸವ ಚನ್ನಬಸವ ಮಹಾಸ್ವಾಮಿಗಳು, ವಿರಕ್ತಮಠ ಸಿಂದಗಿ (ಬಿಳೂರ) ಗೌರವಾಧ್ಯಕ್ಷರು, ವಿರಕ್ತಮಠ ಸೇವಾ ಸಮಿತಿ ಸಿಂದಗಿ. ಮತ್ತು ಪ್ರಕರಣದಲ್ಲಿ ಪಾರ್ಟಿಗಳಾಗಿ 1) ತಹಸೀಲ್ದಾರ ಸಿಂದಗಿ, 2) ಕಂದಾಯ ನೀರೀಕ್ಷಕರು ಸಿಂದಗಿ 3) ಗ್ರಾಮ ಆಡಳಿತ ಅಧಿಕಾರಿ ಸಿಂದಗಿ 4) ಜಿಲ್ಲಾ ವಕ್ಫ್ ಬೋರ್ಡ ವಿಜಯಪುರ ಆಗಿದ್ದರು. ಈ ಪ್ರಕರಣ ದಿ. 19ರಂದು ದಾಖಲಾಗಿತ್ತು ಪ್ರಕರಣ ಸಂ: ಆರ್‌ಟಿಎಸ್:ಎಪಿ:122/2024-25 ಅಂತ ಇರುತ್ತದೆ. ಸದರಿ ಪ್ರಕರಣ ಸತತ 11 ತಿಂಗಳಿನಿಂದ ವಾದಿ ಪ್ರತಿವಾದಗಳು ನಡೆದು ಕೊನೆಗೆ ದಿ. 28/11/2025 ರಂದು ಸದರಿ ವಿರಕ್ತಮಠದ ಆಸ್ತಿಯನ್ನು ವಕ್ಫಬೋರ್ಡನಿಂದ ಮುಕ್ತಗೊಳಿಸಿ ನಮ್ಮ ಮಠದ ಆಸ್ತಿಯನ್ನು ಮರಳಿ ನಮ್ಮ ಮಠಕ್ಕೆ ಸಂಬಂಧಿಸಿದ ಆಸ್ತಿ ಈ ಆಸ್ತಿಗೂ ವಕ್ಫಬೋರ್ಡಗೂ ಯಾವುದೇ ಸಂಬಂಧವಿಲ್ಲ ಎಂದು ಮಾನ್ಯ ನ್ಯಾಯಾಲಯ ಆದೇಶಿಸಿದೆ (ಆದೇಶ ಸಂಖ್ಯೆ: ಖಆ005000684286). ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 