ಸಿಂಚನ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ
Sinchan Kavya award ceremony
ಸಿಂಚನ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ
ಹೂವಿನಹಡಗಲಿ 16: ಅರ್ಹತೆಯಿಂದ ಪ್ರಶಸ್ತಿ ಪಡೆಯುವುದಕ್ಕಿಂತ ಗೀಲೀಟು, ಮೋಸ ಮತ್ತು ಶಿಫಾರಸಿನಿಂದ ಪ್ರಶಸ್ತಿ ಪಡೆಯುವ ಪ್ರವತ್ತಿ ಹೆಚ್ಚುತ್ತಿದೆ. ಜಾತಿ, ಧರ್ಮ ಮತ್ತು ಸ್ವಜನಪಕ್ಷಪಾತ ಮೇಲುಗೈ ಸಾಧಿಸುತ್ತಿವೆ ಎಂದು ಹಾವೇರಿಯ ಕವಿ, ಕತೆಗಾರ ಲಿಂಗರಾಜ ಸೊಟ್ಟಪ್ಪನವರ ವಿಷಾದ ವ್ಯಕ್ತಪಡಿಸಿದರು. ಇಲ್ಲಿನ ಸರಕಾರಿ ನೌಕರರ ಭವನದಲ್ಲಿ ಸಿಂಚನ ಪ್ರಕಾಶನ, ಮೇ ಸಾಹಿತ್ಯ ಮೇಳದ ಸಹಯೋಗದಿಂದ ಏರಿ್ಡಸಿದ್ದ 2021ಮತ್ತು 2022 ಸಿಂಚನ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.ಈಚೆಗೆ ವರ್ತಮಾನದ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಶಸ್ತಿಗಳು ಮಹತ್ವ ಕಳೆದುಕೊಳ್ಳುತ್ತಿರುವುದು ವಿಷಾದದ ಸಂಗತಿ ಎಂದರು. ಕೊಪ್ಪಳದ ಕವಿ ಅಕ್ಟರ್ ಸಿ. ಕಾಲಿಮಿರ್ಚಿ, ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ.ಪ್ರಕಾಶ ಈ ಭಾಗದಲ್ಲಿ ಕಲೆ, ಸಾಹಿತ್ಯ, ರಂಗಭೂಮಿ ಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಸಿಂಚನ ಕಾವ್ಯ ಪ್ರಶಸ್ತಿ ಪ್ರದಾನ2021 ಮತ್ತು 2022ರ ಸಿಂಚನ ಕಾವ್ಯ ಪ್ರಶಸ್ತಿಯನ್ನು ಕೊಪ್ಪಳದ ಕವಿ ಅಕ್ಟರ್ ಸಿ. ಕಾಲಿಮಿರ್ಚಿ, ಹಾವೇರಿಯ ಕವಿ ಲಿಂಗರಾಜ ಸೊಟ್ಟಪ್ಪನವರವರಿಗೆ ತಲಾ 5ಸಾವಿರ ರೂ. ಹಾಗೂ 2ಸಾವಿರ ಮೌಲ್ಯದ ಪುಸ್ತಕ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರೌಢಶಾಲೆಯ ಎನ್‌ಎಂಎಂಎಸ್ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.ಕೃತಿ ಬಿಡುಗಡೆ: ಸಾಹಿತಿ ತೋ.ಮ.ಶಂಕ್ರಯ್ಯಇಂಗ್ಲಿಷ್ ಕವಯಿತ್ರಿ ಗೀತಾಂಜಲಿ ಪೈ. ಅವರ ಗೀತಾಂಜಲಿ ಕವಿತೆಗಳು ಕಾವ್ಯ ಕೃತಿ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಹಿತಿ ಪ್ರಕಾಶ ಮಲ್ಟಿ ಒಡೆಯರ್ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಗೆ ಪ್ರಕಾಶನದ ಖಾದರ್ಬಾಷಾ, ಭಾರತೀಯ ಸರ್ವಧರ್ಮ ರಕ್ಷಣಾ ವೇದಿಕೆಯ ಅಧ್ಯಕ್ಷ ಬಿ.ಖಾಜಾ ಹುಸೇನ್ ಮಾತನಾಡಿದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಸರಕಾರಿ ನೌಕರರ ಸಂಘದ ನಿರ್ದೇಶಕ ಮಂಜುನಾಥ ಭೋವಿ, ಸಿಂಚನ ಪ್ರಕಾಶನದ ಸವಿತಾ ಅಂಗಡಿ ಇದ್ದರು. ಎಎಂಪಿ.ಪ್ರಶಾಂತ್, ಎಂ.ದಯಾನಂದ, ಸುರೇಶ ಅಂಗಡಿ, ನಾಗರಾಜ ಮಲ್ಟಿಒಡೆಯರ್, ಹಡಗಲಿ ಬಸವರಾಜ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 