ಮೌನತಪಸ್ವಿ ಶ್ರೀ ಗುಹೇಶ್ವರ ಶಿವಾಚಾರ್ಯ ಪುಣ್ಯಸ್ಮರಣೋತ್ಸವ ಸಮಾರಂಭ

ಮೌನತಪಸ್ವಿ ಶ್ರೀ ಗುಹೇಶ್ವರ ಶಿವಾಚಾರ್ಯ ಪುಣ್ಯಸ್ಮರಣೋತ್ಸವ ಸಮಾರಂಭ Silent Celebration of Shri Guheshwar Shivacharya's Commemoration Ceremony

ಮೌನತಪಸ್ವಿ ಶ್ರೀ ಗುಹೇಶ್ವರ ಶಿವಾಚಾರ್ಯ ಪುಣ್ಯಸ್ಮರಣೋತ್ಸವ ಸಮಾರಂಭ 

ವಿಜಯಪುರ 08:  ಕನ್ನೂರ ಗ್ರಾಮದ ಗುರುಮಠದ ಲಿಂಗೈಕ್ಯ ಶ್ರೀ ಗುಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪುಣ್ಯಸ್ಮರಣೋತ್ಸವ ಮತ್ತು ಲಿಂಗಾಂಗ ಸಾಮರಸ್ಯ ನೂಲ ಹುಣ್ಣುಮೆದಿನಂದು ಪ್ರತಿವರ್ಷದಂತೆ ಧಾರ್ಮಿಕ ಕಾರ್ಯಕ್ರಮ ದಿನಾಂಕ: 09-08-2025 ರಂದು ಬೆಳಿಗ್ಗೆ 8 ಗಂಟೆಗೆ ಹಮ್ಮಿಕೊಳ್ಳಲಾಗಿದೆ. 

ವಿಜಯಪುರ ಜಿಲ್ಲೆಯ ಮತ್ತು  ಸುತ್ತಮುತ್ತಲಿನ ಗ್ರಾಮಗಳಿಗೆ ಪಾದಯಾತ್ರೆಯ ಮುಖಾಂತರ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಸ್ಕಾರ ನೀಡದರು. ಕಾಶಿಪಂಡಿತರಾದ ಪೂಜ್ಯರು ಸಕಲ ಶಾಸ್ತ್ರೀಗಳು ಸರಳಭಾಷಯಲ್ಲಿ ಭಕ್ತರಿಗೆ ಪುರಾಣ ಪ್ರವಚನಗಳ ಮುಖಾಂತರ ಅರುವಿನ ಜ್ಞಾನವನ್ನು ನೀಡಿದರು. ಸ್ವಯಂ ಕೃಷಿಕಾಯಕವನ್ನು ಮಾಡುವ ಮುಖಾಂತರ ಸಾಕಷ್ಟು ರೈತಾಪಿ ಜನರಿಗೆ ಮಾರ್ಗದರ್ಶನವನ್ನು ನೀಡಿದರು ಶ್ರೀಮಠವನ್ನು ಪುನರುತ್ಥಾನದ ಮಖ್ಯನೇ ಕಾಯಕಲ್ಪ ನೀಡದರು. 

ಧಾರ್ಮಿಕ ಕಾರ್ಯಕ್ರಮ ಉದಯದಲ್ಲಿ ಕರ್ತೃಗದ್ದುಗೆ ಶ್ರೀ ರುದ್ರಾಭೀಷಕ ಪೂಜಾ ಮತ್ತು ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರುತಿ ಜರಗುತ್ತದೆ ನಂತರ ಗುಡ್ಡಾಪುರ ಸಂಸ್ಥಾನ ಹಿರೇಮಠದ ಶ್ರೀ ಗುರುಪಾದ ಶಿವಾಚಾರ್ಯ ಸ್ವಾಮಿಗಳು ಪಾದಪೂಜೆಯೊಂದಿಗೆ ಆಶೀರ್ವಚನ ನೀಡಲಿದ್ದಾರೆ ನೇತೃತ್ವವನ್ನು ಆಲಮೇಲ ಪಶುಪತಿಮಠ ಶ್ರೀ ಗುರುಶಾಂತಸ್ವಾಮಿಗಳು ವಹಿಸಲಿದ್ದಾರೆ ವೈದಿಕವನ್ನು ಶ್ರೀ ವಿರೇಶ ಶಾಸ್ತ್ರೀಗಳು ಹಿರೇಮಠ ಹುಬನೂರು ಪ್ರಾಚಾರ್ಯರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಮತ್ತು ಶ್ರೀ ಹಂಜಗಿ ಹಿರೇಮಠದ ಚಿದಾನಂದ ಶಾಸ್ತ್ರೀಗಳು ಹಾಗೂ ಪುರೋಹಿತ ಬಳಗದವರು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿಲಿದ್ದಾರೆ. ಸಂಕಲ್ಪವನ್ನು ಗುರುಮಠ ಪೂಜ್ಯರಾದ ಶ್ರೀ ಸೋಮನಾಥ ಶಿವಾಚಾರ್ಯ ನೆರವೇರಿಸಲಿದ್ದಾರೆ. ಹೆಚ್ಚಿನ ಭಕ್ತಾದಿಗಳು ಆಗಮಿಸಿ ಗುರುವಿನ ದರ್ಶನ ಮತ್ತು ಮಹಾಪ್ರಸಾದವನ್ನು ಸ್ವೀಕರಿಸಿಬೇಕಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.