ಹೆಚ್.ಐ.ವ್ಹಿ. ಸೋಂಕು ಹರಡುವಿಕೆಯಲ್ಲಿ ಗಣನೀಯ ಇಳಿಕೆ: ಬಾವ್ಡೇಕರ್
Significant reduction in HIV infection transmission: Bawdekar
ಬೆಳಗಾವಿ 10: ಹೆಚ್.ಐ.ವ್ಹಿ. ಹರಡುವ ಕಾರಣಗಳನ್ನು ವಿವರಿಸುತ್ತಾ ಸೋಂಕು ಗಣನೀಯವಾಗಿ ಇಳಿಕೆ ಕಂಡಿದ್ದು, ಇತ್ತೀಚಿಗೆ ಯುವಕರಲ್ಲಿ ಸೋಂಕು ಹೆಚ್ಚುತ್ತಿರುವುದು ಕಂಡು ಬರುತ್ತಿರುವ ಕುರಿತು ಅತಂಕ ವ್ಯಕ್ತಪಡಿಸಿದರು ಇಂತಹ ಜಾಗೃತಿ ಕಾರ್ಯಕ್ರಮಗಳು ಯುವಕರು ಜಾಗೃತರಾಗುವುದರೊಂದಿಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಪ್ರಶಿಕ್ಷಣಾರ್ಥಿಗಳ ಪಾತ್ರ ಬಹಳ ಪ್ರಮುಖವಾದದು ಎಂದು ಎಫ್.ಪಿ.ಎ.ಐ. ಬೆಳಗಾವಿ ಶಾಖೆ ಅಧ್ಯಕ್ಷ ಡಾ. ವಿ.ಸಿ. ಬಾವ್ಡೇಕರ್ ಅಭಿಪ್ರಾಯಪಟ್ಟರು.
ಅವರು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ, ಬೆಳಗಾವಿ ಶಾಖೆ ಹಾಗೂ ಎಸ.ಬಿ.ಪಾಟಲ ಮಹಿಳಾ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ದಿ. 4ರಂದು ಎಸ. ಬಿ. ಪಾಟೀಲ ಮಹಿಳಾ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಏಡ್ಸ್ ದಿನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಹೆಚ್.ಐ.ವ್ಹಿ. ಏಡ್ಸ್ ರೋಗ್ ಇತಿಹಾಸವನ್ನು ವಿವರಿಸುತ್ತಾ ಹೆಚ್.ಐ.ವ್ಹಿ. ಸೋಂಕು ಹೇಗೆ ಬರುತ್ತದೆ, ಹೆಚ್.ಐ.ವ್ಹಿ. ಹರಡುವ ಪ್ರಮುಖ ವಿಧಾನಗಳಾದ ಅಸುರಕ್ಷಿತ ಲೈಂಗಿಕ ಸಂಪರ್ಕ, ಸಂಸ್ಕರಿಸದೆ ಇರುವ ಸಿರಿಂಜಗಳ ಬಳಕೆ, ಪರೀಕ್ಷೆಗೊಳಪಡದ ರಕ್ತ ಪಡೆಯುವುದರಿಂದ ಗರ್ಭಿಣಿ ತಾಯಿಯಿಂದ ಮಗುವಿಗೆ ಹರಡುವ ಕುರಿತು ವಿವರಿಸಿದರು.
ಲೈಂಗಿಕವಾಗಿ ಹರಡುವ ಗುಪ್ತ ರೋಗಗಳು ಹರಡುವ ಬಗೆ ಮತ್ತು ಇವುಗಳನ್ನು ತಡೆಗಟ್ಟಲು ಯುವಕರ ಪಾತ್ರ ಕೂಡ ಮಹತ್ವವಾಗಿದೆ, ತಾರುಣ್ಯಾವಸ್ಥೆಯಲ್ಲಿ ಮೋಜು ಮಸ್ತಿಗಳಿಂದ ದುಷ್ಟಚಟಗಳಿಗೆ ಬಲಿಯಾಗದೆ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ಚಿಕಿತ್ಸೆಗೆ ಇರುವ ವಿವಿಧ ಕೇಂದ್ರಗಳ ಬಗ್ಗೆ ವಿವರಿಸಿದ್ದರು.
ಹೆಚ್.ಐ.ವ್ಹಿ., ಏಡ್ಸ್ ತಡೆಗಟ್ಟಲು ಜಾಗೃತಿ ಮೂಡಿಸುವಲ್ಲಿ ಯುವಜನತೆಯ ಪಾತ್ರ ಎಂಬ ವಿಷಯವಾಗಿ ಎಫ್.ಪಿ.ಎಐ. ಬೆಳಗಾವಿ ಶಾಖೆಯ ವತಿಯಿಂದ ಭಾಷಣ ಸ್ಪರ್ಧೆಯನ್ನು ಏರಿ್ಡಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಉಪ ಪ್ರಾಂಶುಪಾಲ ಎಸ್. ಎಸ್. ಹಿರೇಮಠ ಇವರು ಮಾತನಾಡುತ್ತಾ ಪ್ರಶಿಕ್ಷಣಾರ್ಥಿಗಳಿಗೆ ಪಠ್ಯ ಚಟುವಟಿಕೆಗಳೊಂದಿಗೆ ಇಂತಹ ಜಾಗೃತಿ ಕಾರ್ಯಕ್ರಮಗಳು ಕೂಡ ಅಷ್ಟೇ ಆವಶ್ಯಕ. ಹೆಚ್.ಐ.ವ್ಹಿ., ಏಡ್ಸ್‌ನಂತ ಮಾರಕ ರೋಗಕ್ಕೆ ಬಲಿಯಾದ ರೋಗಿಗಳು ಸಾಮಾಜಿಕ ಕಳಂಕಕ್ಕೆ ಒಳಗಾಗುತ್ತಿದ್ದು ಹೆಚ್.ಐ.ವ್ಹಿ. ಪೀಡಿತರನ್ನು ಪ್ರೀತಿಯಿಂದ ಕಾಣುವುದರೊಂದಿಗೆ ಹೆಚ್.ಐ.ವ್ಹಿ. ರೋಗ ನಿರ್ಮೂಲನೆಗೆ ಪ್ರಶಿಕ್ಷಣಾರ್ಥಿ ಪಾತ್ರ ಬಹು ದೊಡ್ಡದು ಹೆಚ್.ಐ.ವ್ಹಿ. ಮುಕ್ತ ಸಮಾಜವನ್ನು ನಿರ್ಮಿಸೋಣ ಎಂದು ಅಭಿಪ್ರಾಯಪಟ್ಟರು. ಎಸ್.ಬಿ.ಪಾಟೀಲ ಕಾಲೇಜಿನ ಸಿಬ್ಬಂದಿ, ಎಫ್.ಪಿ.ಎ.ಐ. ಸಿಬ್ಬಂದಿ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 