ಸಿದ್ದುಮತಿ ನೆಲವಿಗಿ : ಕಲ್ಪನಾ ಲಹರಿ ಬಿಡುಗಡೆ

Siddumathi Nelavigi: Kalpana Lahari release

ಸಿದ್ದುಮತಿ ನೆಲವಿಗಿ : ಕಲ್ಪನಾ ಲಹರಿ ಬಿಡುಗಡೆ  

ಹಾವೇರಿ 15:  ಇಲ್ಲಿನ ತಾಲೂಕಾ ಕಸ್ತೂರಿ ಸಿರಿಗನ್ನಡ ವೇದಿಕೆ ಆಶ್ರಯದಲ್ಲಿ ಕಲ್ಪನಾ ಲಹರಿ ಕವನ ಸಂಕಲನವನ್ನು ಸಾಹಿತಿ ಸಿದ್ದುಮತಿ ನೆಲವಿಗಿ ಅವರು ಲೋಕಾರೆ​‍್ಣಗೊಳಿಸಿದರು. , ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಧಾನ ಸಭೆ ಉಪಸಭಾಪತಿ ರುದ್ರ​‍್ಪ ಲಮಾಣಿ,ಅವರು ಮಾತನಾಡಿ, ಸಾಹಿತಿಗಳು, ಕಲಾವಿದರು, ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ತಿದ್ದುವುದರ ಮೂಲಕ ಸ್ವಾಸ್ಥ ಸಮಾಜದ ನಿರ್ಮಾಣಕ್ಕೆ ಕಾರಣಿಭೂತರಾಗಿದ್ದಾರೆ.  

 ಸಾಹಿತ್ಯ ಮತ್ತು ಸಂಸ್ಕೃತಿ ಎರಡು ಮುಖದ ಒಂದು ನಾಣ್ಯ ಇದ್ದ ಹಾಗೆ. ಮಾನವನ ವಿಕಾಸತೆಗೆ ಸಾಹಿತ್ಯದ ಜ್ಞಾನ ಅಗತ್ಯವಿದ್ದು,ಸಾಹಿತಿಗಳನ್ನು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದರು.  ಕಾರ್ಯಕ್ರಮದಲ್ಲಿ ಸಾಹಿತಿ  ಸಂಕಮ್ಮ ಸಂಕಮ್ಮನವರ, ಶೈಲಜಾ,ಎಂ, ಎಸ್‌. ಕೋರಿ ಶೆಟ್ಟರ, ಶಿಕ್ಷಕರಾದ ಹನುಮಂತಗೌಡ ಗೊಲ್ಲರ,ಸಿ. ಎಸ್‌. ಮರಳಿ ಹಳ್ಳಿ ಸೇರಿದಂತೆ ಮತ್ತಿ ತರರು ಉಪಸ್ಥಿತರಿದ್ದರು.