7ನೇ ಕನ್ನಡ ಸಾಹಿತ್ಯ ಸಮ್ಮೇಳಕ್ಕೆ ಸಿದ್ದುಮತಿ ಆಯ್ಕೆ
ಲೋಕದರ್ಶನ ವರದಿ
ಹಾವೇರಿ10 : ನಗರದಲ್ಲಿ ಡಿ. 8 ರಂದು ಜರಗುವ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿ ನಗರದ ಖ್ಯಾತ ಸಾಹಿತಿ ಸಿದ್ದುಮತಿ ನೆಲವಿಗಿ ಸವರ್ಾನುಮತದಿಂದ ಆಯ್ಕೆಯಾಗಿದ್ದಾರೆ. ತಾಲೂಕಾ ಕಸಾಪದ ಪದಾಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಅಧಿಕೃತ ಆಹ್ವಾನ ನೀಡಿದರು.
ಸಿದ್ದುಮತಿ ನೆಲವಿಗಿ ಅವರು ಕಳೆದ 40 ವರ್ಷಗಳಿಂದ ಸಾಹಿತ್ಯ ಕೃಷಿ ಮಾಡುತ್ತಿದ್ದು, ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಕಿತ್ತೂರ ಚೆನ್ನಮ್ಮ ಮಹಾಕಾವ್ಯವನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದು ಅವರ ಹೆಗ್ಗಳಿಕೆ.
ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಅಕ್ಕನ ಬಳಗ ಮುಂತಾದ ಸಂಘಟನೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ. ಸಂಗೀತ ವಿದ್ವಾಂಸರಾದ ಅವರು ಈಗ 83 ರ ವಯೋಮಾನದಲ್ಲಯೋ ಕ್ರಿಯಾಶೀಲರಾಗಿರಾಗಿದ್ದಾರೆ.
ಆಹ್ವಾನ ನೀಡುವುದಕ್ಕಾಗಿ ತಾಲೂಕಾ ಕಸಾಪ ಅಧ್ಯಕ್ಷ ವಾಯ್.ಬಿ ಆಲದಕಟ್ಟಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಎಸ್ಎನ್ ದೊಡ್ಡಗೌಡರ, ಸಾಹಿತಿಗಳಾದ ಸತೀಶ ಕುಲಕಣರ್ಿ, ವಿರೂಪಾಕ್ಷಪ್ಪ ಕೋರಗಲ್ಲ, ಎಸ್ಆರ್ ಹಿರೇಮಠ. ಬಿಎಂ ಮಠ, ಶಿವಯೋಗಿ ಚರಂತಿಮಠ, ಸಿಎಸ್ ಮರಳಿಹಳ್ಳಿ, ಅಮೃತಮ್ಮ ಶೀಲವಂತರ, ಲಲಿತಕ್ಕ ಹೊರಡಿ, ದಾಕ್ಷಾಯಣಿ ಗಾಣಗೇರ, ನೀಲಮ್ಮ ಹೇರೂರ ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 