ಸಿದ್ದಾಂತ ಶಿಖಾಮಣಿ ಗ್ರಂಥ: ಶಿವಾಗಮ ಆಧಾರಿತ ಕೃತಿ
Siddhanta Shikhamani Granth: A work based on Shivagam
ಲೋಕದರ್ಶನ ವರದಿ
ಹೂವಿನ ಹಡಗಲಿ 05 : ಸಿದ್ಧಾಂತ ಶಿಖಾಮಣಿ’ ಗ್ರಂಥವು ವೀರಶೈವ ಸಿದ್ದಾಂತದ ಆಚರಣೆಗಳು, ಧಾರ್ಮಿಕ ಪರಂಪರೆ, ಜೀವಾತ್ಮ ಪರಮಾತ್ಮರ ಅನುಸಂಧಾನ ಕುರಿತ ಶಿವಾಗಮ ಆಧಾರಿತ ಮಹತ್ವದ ಕೃತಿಯಾಗಿದೆ ಎಂದು ಸಾಹಿತಿ,ನಿವೃತ್ತ ಮುಖ್ಯಗುರುಗಳಾದ ಎಂ.ಪಿ.ಎಂ ಕೊಟ್ರಯ್ಯ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ತಾಲೂಕಿನ ಪುರ ಗ್ರಾಮದ ಸೋಗಿ ಪುರವರ್ಗ ಕಟ್ಟಿಮನಿ ಮಠದಲ್ಲಿ ಆಯೋಜಿಸಲಾಗಿದ್ದ ಶ್ರೀಷ.ಬ್ರ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಪೀಠಾರೋಹಣದ ರಜತ ಮಹೋತ್ಸವ ದತ್ತಿ, ಕಾಳಮ್ಮ ಸಿದ್ದಪ್ಪ ಕರಿಶೆಟ್ಟಿ ಸ್ಮಾರಕ ದತ್ತಿ, ಶ್ರೀಮತಿ ಸೊಪ್ಪಿನ ನೀಲಮ್ಮ ಹುಚ್ಚಮ್ಮ ಸ್ಮರಣಾರ್ಥ ದತ್ತಿ, ಅಂಗಡಿ ವೀರಭದ್ರ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ, 139ನೇ ಮಾಸಿಕ ಧರ್ಮಸಭೆ, ಜಗದ್ಗುರು ರೇಣುಕಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ’ಸಿದ್ದಾಂತ ಶಿಖಾಮಣಿ’ ಗ್ರಂಥದ ಕುರಿತು ಮಾತನಾಡಿದರು. ಶ್ರೀಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಾಲೂಕು ಜಂಗಮ ಪೌರೋಹಿತ್ಯ ಬಳಗದ ಅಧ್ಯಕ್ಷ ವೀರೇಶ್ ರ ನೇತೃತ್ವದಲ್ಲಿ ವೇದಘೋಷ ಮಾಡಲಾಯಿತು.ಕೋಗಳಿಯ ಸಂಗೀತ ಕಲಾವಿದ ಶಂಕರಯ್ಯಸ್ವಾಮಿಗಳು ಪ್ರಾರ್ಥಿಸಿದರು.
ದತ್ತಿದಾನಿ, ಗೌರೀಶ ಅಂಗಡಿ ಸ್ವಾಗತಿಸಿದರು. ಶ್ರೀಮಠದ ಧರ್ಮಕರ್ತರಾದ ಪಿ.ಕೆ.ಎಂ ವಿಶ್ವಾನಂದಸ್ವಾಮಿಗಳು, ಅಂಗೂರಿನ ಪೂಜ್ಯರು ಧ್ವಜಾರೋಹಣ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು, ವಿಶ್ರಾಂತ ಪ್ರಾಚಾರ್ಯರ ಡಾ.ಕೆ.ರುದ್ರ್ಪ ಮಾತನಾಡಿದರು. ವಿಶ್ರಾಂತ ಪ್ರಾಚಾರ್ಯರಾದ ಶಾಂತಮೂರ್ತಿ ಬಿ ಕುಲಕರ್ಣಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಎ.ಎಂ.ಹಾಲಯ್ಯ, ಹಿರಿಯರಾದ ವಿ.ಸಿ.ಪಾಟೀಲ್,ಓಲಿ ಈಶಪ್ಪ, ಗಡ್ಡಿಗುಡ್ಡಪ್ಪ ಇದ್ದರು. ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ವಹಿಸಿದ್ದರು. ಹಕ್ಕಂಡಿಯ ಮೈಲಾರಲಿಂಗೇಶ್ವರ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಶ್ರೀಮಠದ ಭಕ್ತರಿಗೆ,ಸೇವಾರ್ಥಿಗಳಿಗೆ ಗುರುರಕ್ಷೆ ನೀಡಲಾಯಿತು. ಸಾನಿಧ್ಯ ವಹಿಸಿದ್ದ ಶ್ರೀಷ.ಬ್ರ.ಶಿವಯೋಗಿಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಂಗೂರೇಶ್ವರ ಮಠ, ಅಂಗೂರು ಆಶೀರ್ವಚನ ನೀಡಿದರು. ದತ್ತಿದಾನಿಗಳು,ಶ್ರೀಮಠದ ಸೇವಾ ಸಮಿತಿಯ ಪ್ರಭು ಸೊಪ್ಪಿನ ಕಾರ್ಯಕ್ರಮ ನಿರ್ವಹಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 