ಹೊಳಗುಂದಿ ಗ್ರಾಮದಲ್ಲಿ ಜ. 02 ರಂದು ಸಿದ್ದೇಶ್ವರ ಸ್ವಾಮಿ ರಥೋತ್ಸವ. 03 ರಂದು ಅಗ್ನಿ ಕಾರ್ಯ ಕ್ರಮ

ಹೊಳಗುಂದಿ ಗ್ರಾಮದಲ್ಲಿ ಜ. 02 ರಂದು  ಸಿದ್ದೇಶ್ವರ ಸ್ವಾಮಿ ರಥೋತ್ಸವ. 03 ರಂದು ಅಗ್ನಿ ಕಾರ್ಯ ಕ್ರಮ Siddeshwara Swamy chariot festival on 02nd in Holagundi village. Fire ceremony on 03rd

            ಹೂವಿನಹಡಗಲಿ 01:   ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಜ. 02 ರಂದು  ಸಿದ್ದೇಶ್ವರ ಸ್ವಾಮಿ ರಥೋತ್ಸವ. 03 ರಂದು ಅಗ್ನಿ ಕಾರ್ಯ ಕ್ರಮ ನಿಮಿತ್ತ ಲೇಖನ "ಮುದೇಗೌಡ್ರ ಅಶೋಕ  ಹೂವಿನಹಡಗಲಿ 1-  ತಾಲ್ಲೂಕಿನ ಹೊಳಗುಂದಿ ಗ್ರಾಮದ ಬೆಟ್ಟದ ಮೇಲೆ ತಲೆ ಎತ್ತಿರುವ ಶ್ರೀ ಸಿದ್ದೇಶ್ವರ ಸುಕ್ಷೇತ್ರ ಗತಕಾಲದ ವೈಭವ ಸಾರುವುದರ  ಜೊತೆಗೆ ಕಲೆ. ಸಂಸ್ಕೃತಿ, ಸಾಹಿತ್ಯ, ರಂಗಭೂಮಿ ಸರ್ವಧರ್ಮವನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಬಿಂಬಿಸುತ್ತದೆಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ ಹರಿದಿನ ಗಳನ್ನು ಊರಿನ ಹಬ್ಬವನ್ನಾಗಿ ಆಚರಿಸುವುದಕ್ಕೆ ಪ್ರತಿ ವರ್ಷ ಹೊಳಗುಂದಿಯಲ್ಲಿ ನಡೆಯುವ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಿದರ್ಶನವೆನಿಸಿದೆ. ಹೂವಿನಹಡಗಲಿಯಿ0ದ ಹೊಸಪೇಟೆ ಮಾರ್ಗದಲ್ಲಿ 9ಕಿ.ಮೀ. ದೂರದಲ್ಲಿರುವ ಹೊಳಗುಂದಿ ಬಾವಿಹಳ್ಳಿ ಎಂಬ ಅವಳಿ ಗ್ರಾಮಗಳಿವೆ. ಪುರಾತನ ಕಾಲದಲ್ಲಿ ವೀರಾಪುರ, ಸಿದ್ದಾಪುರ, ಜೈರಾಪುರ, ಗಿರಿಯಾಪುರ, ಸೋಮಾಪುರ, ಅರಿಕೇರಿ, ಸನಗಟ್ಟಿ, ಈ ಏಳು ಹಳ್ಳಿಗೆ ಳನ್ನೊಳಗೊಂಡ ಎಳುಗುಂದಿ ಹೆಸರಿನಲ್ಲಿ ಗುರುತಿಸಲ್ಪಟ್ಟಿತ್ತು.ಈ ಗ್ರಾಮದ ಬೆಟ್ಟದ ಮೇಲೆ ಶ್ರೀ ಸಿದ್ದೇಶ್ವರ ಸ್ವಾಮಿ ಉದ್ಭವ ಮೂರ್ತಿ ಇದೆ. ಸುತ್ತ ಮುತ್ತಲಿನ ಹಾವಿನ ಮತ್ತು ಗಿಡ, ಬಳ್ಳಿಗಳು.  

ಬೆಳೆದು ಗವಿಯಂತಿದ್ದು,ಬೆಟ್ಟದಲ್ಲಿ ಮೇಯಲು ಹೋಗುತ್ತಿದ್ದ ಜಾನುವಾರುಗಳ ಪೈಕಿ ಗೌರಿ ಎಂಬ ಗೋವು ಪ್ರತಿನಿತ್ಯ ಲಿಂಗದ ಮೇಲೆ ಹಾಲನ್ನು ಕರೆಯುತ್ತಿತ್ತೆಂಬ ಕಥೆ ಇದನ್ನ ಕಂಡ ಗ್ರಾಮದ ಹಿರಿಯರಿಗೆ ಕನ್ನಸಿನಲ್ಲಿ ಬಂದಶ್ರೀ ಸಿದ್ದೇಶ್ವರ ಸ್ವಾಮಿಯು ತನ್ನ ದೇವಸ್ಥಾನ ನಿರ್ಮಿಸು ವಂತೆ ತಿಳಿಸಿದೆ. ಅದೇ ಸ್ಥಳದಲ್ಲಿ ಸಿದ್ದೇಶ್ವರ ದೇವಸ್ಥಾನ ನಿರ್ಮಿಸಿರುವುದಾಗಿ ಪ್ರತೀತಿ ಈ ದೇವಸ್ಥಾನದಲ್ಲಿ ಸಿದ್ದೇಶ್ವರ ಸ್ವಾಮಿಯ ಉದ್ಭವ ಲಿಂಗದ ಹಿಂಭಾಗದಲ್ಲಿ ರೇಣುಕಾಚಾರ್ಯರ ಪ್ರತಿಮೆ, ಗರ್ಭಗುಡಿಯ ಹೊರ ಭಾಗದಲ್ಲಿ ಅಶ್ವತ್ ವೃಕ್ಷಗಳು, ಬಳ್ಳಿ, ಕಣಿಗಿಲೆ. ಪುಷ್ಟ ವೃಕ್ಷಗಳು ಆಕರ್ಷಣೆಯ ಕೇಂದ್ರ ಬಿಂದುಗಳಾಗಿ ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ. ಜನವರಿ ಯಲ್ಲಿ ಹುಣ್ಣುಮೆ ನಂತರ ಸ್ವಾಮಿ ಯ ರಥೋತ್ಸವ. ಅಗ್ನಿ ಧಾರ್ಮಿಕ ಕಾರ್ಯ ಕ್ರಮಗಳು ನಡೆಯಲಿವೆ. ಜಾತ್ರೆ ನಿಮಿತ್ತ ಜಾನುವಾರು ಗಳು ಜಾತ್ರೆ. ಸ್ಥಳೀಯ ಕಲಾವಿದರಿಂದ ನಾಟಕಗಳು ನಡೆಯಲಿವೆ. ನೂಲ ಹುಣ್ಣುಮೆ ದಿನ ಪಲ್ಲಕ್ಕಿ ಉತ್ಸವ. ಗ್ರಾಮೀಣ ಆಟಗಳು ನಡೆಯಲಿವೆ.ಕಾರ್ತಿಕ ಮಾಸದ ಶ್ರಾವಣ ಮಾಸದಲ್ಲಿ ಒಂದು ತಿಂಗಳು  ಹೆಚ್‌.ಎಂ.ಬೆಟ್ಟಯ್ಯ .

ಕರಿಬಸವಯ್ಯ ನೇತೃತ್ವದಲ್ಲಿ ಅಭಿಷೇಕ ನಡೆಸುತ್ತಿತ್ತು. ಇದೀಗ ಹೆಚ್‌.ಎಂ.ಮಲ್ಲಿಕಾರ್ಜುನ ಯ್ಯ ಅವರು ನಡೆಸಿಕೊಂಡು ಹೋಗುತ್ತಿದ್ದಾರೆ. ನಡೆಯಲಿವೆ. ಸಿದ್ದೇಶ್ವರ ದೇಗುಲ ಕಮಿಟಿ ವಾಮದೇವಪ್ಪ ಅಧ್ಯಕ್ಷತೆಯಲ್ಲಿ  ಅವಧಿಯಲ್ಲಿ ಕಲ್ಯಾಣ ಮಂಟಪ .ಮಹಾ ದ್ವಾರ ನಿರ್ಮಿಸಿದೆ.ನವಗ್ರಹ ಮಂಟಪ. ಪ್ರತಿಮೆ ಇದೆ.ಕಲ್ಯಾಣ ಮಂಟಪ ದಲ್ಲಿ ಧಾರ್ಮಿಕ. ಮದುವೆ ಸಮಾರಂಭ ಗಳು ನಡೆಯಲಿವೆ.ಈಚೆಗೆ ಎಸ್‌.ಮಹೇಶ್ವರ​‍್ಪ ಅಧ್ಯಕ್ಷತೆಯಲ್ಲಿ ನೂತನ ರಥೋತ್ಸವ.ದೇವಾಲಯ ಸುಧಾರಣೆ ಕಂಡಿದೆ. ಹೊಳಗುಂದಿ ಗ್ರಾಮದಲ್ಲಿ ಇತಿಹಾಸ ಸಾರುವ ಶಾಸನಗಳಿರುವ ದೇವಾಲಯಗಳಿದ್ದು, ಪಂಚಲಿಂಗು ಗ್ರಾಮ ಎಬ ಹೆಗ್ಗಳಿಕೆ ಪಾತ್ರವಾದ ಹೊಳಗುಂದಿಯಲ್ಲಿ ಸಿದ್ದೇಶ್ವರ, ಬಿಲ್ಲೇಶ್ವರ, ಸೋಮೇಶ್ವರ, ಬಾಳೇಶ್ವರ, ಗುಡಿಗಳಲ್ಲಿ ಶಾಸನಗಳಿವೆ. ಶಾಸನ ಪ್ರಕಾರ ಚಾಲುಕ್ಯ ಅರಸ ತ್ರಿಭುದ ದೇವಾಲಯ ನಿರ್ಮಿಸಿರುವ ಉಲ್ಲೇಖವಿದೆ. ವೀರಭದ್ರೇಶ್ವರ ದೇಗುಲ ಕೂಡ ಇದ್ದು .ಇಲ್ಲಿ ಧಾರ್ಮಿಕ. ಮದುವೆ ಸಮಾರಂಭ ಗಳು ಕೂಡ ನಡೆಯಲಿವೆ.ಹಂಪಿ ಹುಣ್ಣಿಮೆಯ ದಿನ ಸ್ವಾಮಿಯ ಅಗ್ನಿ ಕಾರ್ಯಕ್ರಮ ಜರುಗಲಿದೆ.