ಹಾವೇರಿ14: ಕಾಯಕಯೋಗಿ ಸಿದ್ಧರಾಮೇಶ್ವರರ ತತ್ವಾದರ್ಶಗಳು ಸಮಾಜದ ಎಲ್ಲ ಸಮುದಾಯಕ್ಕೂ ಆದರ್ಶವಾಗಿವೆ ಎಂದು ಹಾವೇರಿ ಉಪ ತಹಶೀಲ್ದಾರ ಪಿ.ಎಸ್.ಕುಂಬಾರ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾವೇರಿ ತಾಲೂಕು ಆಡಳಿತದ ಸಹಯೋಗದಲ್ಲಿ ಸೋಮವಾರ ನಗರದ ನಾಗೇಂದ್ರನಮಟ್ಟಿ ಬಡಾವಣೆಯ ಸಿದ್ಧರಾಮೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಿದ ಸಿದ್ಧರಾಮೇಶ್ವರ ಅವರ 847ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸದಾನಂದ ದೊಡ್ಡಮನಿ ಅವರು ಮಾತನಾಡಿ, ಸಮಾಜದ ಸುಧಾರಣೆಗಾಗಿ ದ್ವೇಷವನ್ನು ತೊರೆದು ಪ್ರೀತಿಯಿಂದ ಒಗ್ಗೂಡಬೇಕು. ಶರಣರ ಹಾದಿಯಲ್ಲಿ ಸಮಾಜವನ್ನು ಮುನ್ನೆಡಸಲು ನಾವೆಲ್ಲ ಬದ್ಧರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಕೆರೆಮತ್ತಿಹಳ್ಳಿ ಕನರ್ಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಡಾ.ವಿರೇಶ ಪೂಜಾರ ಅವರು ಮಾತನಾಡಿ, ಕಾಯಕಯೋಗಿ ಸಿದ್ಧರಾಮೇಶ್ವರರು ಬಸವಾದಿ ಶರಣರ ಹಾದಿಯಲ್ಲಿ ನಡೆದು ಸಮ ಸಮಾಜದ ಸುಧಾರಣೆಗೆ ಶ್ರಮಿಸಿದವರು. ಇವರ ಜೀವನ ಹಾಗೂ ಆದರ್ಶಗಳು ಎಲ್ಲ ಸಮಾಜಕ್ಕೂ ಸ್ಪೂತರ್ಿದಾಯಕವಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ವೆಂಕಟೇಶ ಬಿಜಾಪುರ, ಸತೀಶ ಹಾವೇರಿ, ಹನುಮಂತಪ್ಪ ದೇವಗಿರಿ, ಜಗದೀಶ ಹಾಗೂ ಶಾಂತಪ್ಪ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಸಿದ್ಧರಾಮೇಶ್ವರ ಭಾವಚಿತ್ರವನ್ನು ದೇವಸ್ಥಾನದಿಂದ ಕಾರ್ಯಕ್ರಮದ ಸಭಾಂಗಣವರೆಗೆ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ ಶಿವಕುಮಾರ, ನಗರಸಭೆ ಸದಸ್ಯ ಐ.ಯು.ಪಠಾಣ ಇತರರು ಉಪಸ್ಥಿತರಿದ್ದರು.