ವಾಲ್ಮಿ ಸಂಸ್ಥೆಗೆ ಶ್ರೀ ಕೆ. ಜೈಪ್ರಕಾಶ, ಉಪ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರು ಭೇಟಿ
Shri K. Jaiprakash, Technical Advisor to Deputy Chief Minister, visits Valmi Institute
ವಾಲ್ಮಿ ಸಂಸ್ಥೆಗೆ ಶ್ರೀ ಕೆ. ಜೈಪ್ರಕಾಶ, ಉಪ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರು ಭೇಟಿ
ಧಾರವಾಡ, 04 ; ಮಾನ್ಯ ಶ್ರೀ ಕೆ. ಜೈಪ್ರಕಾಶ, ಸನ್ಮಾನ್ಯ ಉಪ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರು, ಇವರು ಇತ್ತಿಚೆಗೆ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಗೆ ಭೇಟಿ ನೀಡಿದರು. ಸಂಸ್ಥೆಯ ನಿರ್ದೇಶಕರಾದ ಡಾ. ಗೀರೀಶ್ ಎನ್. ಮರಡ್ಡಿ ರವರು ಜೈಪ್ರಕಾಶರವರನ್ನು ಆತ್ಮೀಯವಾಗಿ ಸ್ವಾಗತಿಸುತ್ತಾ, ಸಂಸ್ಥೆಯು ನಡೆದುಬಂದ ದಾರಿ, ಕಾರ್ಯಚಟುವಟಿಕೆಗಳು ಹಾಗೂ ಸಾಧಿಸಿದ ಪ್ರಗತಿ ಕುರಿತು ತಿಳಿಸದರು. ಸಂಸ್ಥೆಯ ವಿವಿಧ ಚಟುವಟಿಕೆಗಳ ಬಗ್ಗೆ ಮಾತನಾಡಿದರು.
ವಾಲ್ಮಿ ಸಂಸ್ಥೆಯಲ್ಲಿ ನಡೆಯುವ ಪ್ರತಿಯೊಂದು ತರಬೇತಿಗಳ ಬಗ್ಗೆ ವಿವರವಾದ ಮಾಹಿತಿ ಪಡೆದುಕೊಂಡರು. ಸಂಸ್ಥೆಯಿಂದ 1000 ಹೊಸದಾಗಿ ನೇಮಕಗೊಂಡ ಅಭಿಯಂತರರು ತರಬೇತಿ ಪಡೆದಿದ್ದು, 2024-25ನೇ ಸಾಲಿನಲ್ಲಿ ರೈತರು, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳನ್ನೊಳಗೊಂಡು ಒಟ್ಟು 15,500 ಜನ ತರಬೇತಿ ಪಡೆದಿರುತ್ತಾರೆ ಎಂದು ತಿಳಿಸಿದರು. ಜೈಪ್ರಕಾಶರವರು ಸರ್ಕಾರಕ್ಕೆ ಇದೊಂದು ಹೆಮ್ಮೆಯ ವಿಷಯ ಎಂದರು.
ವಾಲ್ಮಿ ಸಂಸ್ಥೆಯ ವಿವಿಧ ಬೆಳೆಯ ಪ್ರ್ರಾತ್ಯಕ್ಷಿಕೆ ತಾಕುಗಳನ್ನು ವೀಕ್ಷಿಸಿದರು. ರೈತರಿಗೆ ಹಾಗೂ ಅಭಿಯಂತರರಿಗೆ ತಿಳುವಳಿಕೆ, ಮಹತ್ವ ತಿಳಿಸುವ ಉದ್ದೇಶದಿಂದ ವಾಲ್ಮಿ ಸಂಸ್ಥೆಯಲ್ಲಿನ ಸೂಕ್ಷ್ಮ ನೀರಾವರಿ ಘಟಕ, ಹೈಡ್ರಾಲಿಕ ಲ್ಯಾಬ್, ಹವಾಮಾನ ಕೇಂದ್ರ ಮತ್ತು ಮಳೆ ನೀರು ಕೊಯ್ಲಿನ ಘಟಕಗಳು, ಎರೆಹುಳು ಗೊಬ್ಬರ ಘಟಕ ಹಾಗೂ ಜಾನುವಾರು ಘಟಕಕ್ಕೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು. ಮಾನ್ಯರು ಸೋಯಾಬೀನ ಬೆಳೆ (ಆಖಃ-34, ಆಖಃ-2) ತಳಿಗಳು, ಆರ್.ಎನ್.ಆರ್ 15048 ತಳಿಯ ಭತ್ತದ ಬೆಳೆ, ಸೆಣಬು ಬಳೆಗಳನ್ನು ಕಡಿಮೆ ನೀರಿನಲ್ಲಿ ಬೆಳೆಯುವ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ತಾಕುಗಳಿಗೆ ಭೇಟಿ ನೀಡಿ ಪ್ರಶಂಸಿದರು. ಸಂಸ್ಥೆಯ ಮಾನ್ಯ ನಿರ್ದೇಶಕರಾದ ಡಾ. ಗೀರೀಶ ಎನ್ ಮರಡ್ಡಿ ಅವರೊಂದಿಗೆ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದ ನಂತರ ರೈತರ ತರಬೇತಿಗೆ ಭೇಟಿ ನೀಡಿ ಸಮಗ್ರ ಕೃಷಿ ಪದ್ಧತಿ ಬಗ್ಗೆ ರೈತರಿಗೆ ವಿವರಿಸಿದರು.
ವಾಲ್ಮಿ ಸಂಸ್ಥೆಯ ನಿರ್ದೇಶಕರಾದ ಡಾ. ಗೀರೀಶ್ ಎನ್. ಮರಡ್ಡಿ ಹಾಗೂ ಅಧಿಕಾರಿ/ಸಿಬ್ಬಂದಿಗಳು ಜೊತೆಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 