ರಾಚೋಟಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರವಚನ
Shravan month sermon at Rachoti temple
ರಾಚೋಟಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರವಚನ
ಗದಗ 02: ಸಾವಿರಾರು ವರ್ಷದ ಇತಿಹಾಸದಲ್ಲಿ ಕೋಟ್ಯಾಂತರ ಜನರು ಹುಟ್ಟಿತೀರಿಕೊಂಡಿದ್ದಾರೆ ಆದರೆ ಮಹಾತ್ಮರುಅಲ್ಲೊಬ್ಬರು, ಇಲ್ಲೊಬ್ಬರು ಹುಟ್ಟಿರುವರು. ಆಯಾಯಕಾಲದಲ್ಲಿ ಒಬ್ಬೊಬ್ಬ ಮಹಾತ್ಮರು ಉದಯವಾಗಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿರುವರು ಎಂದು ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಡಾ.ನೀಲಮ್ಮತಾಯಿಅವರು ಹೇಳಿದರು.
ನಗರದ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಶ್ರಾವಣ ಚರಿತಾಮ್ರತ ಪ್ರವಚನದಲ್ಲಿ ಮಾತನಾಡಿದರು.
ಶತಶತಮಾನದಲ್ಲಿ ಅವತರಿಸಿ ಬಂದಿದ್ದರಿಂದಲೇ ನಮ್ಮ ಸಂಸ್ಥಾರ ಉಳಿದಿದೆ. ಪಶುಪಕ್ಷಿಯ ಹಾಗೆ ನಮ್ಮ್‌ಜೀವನವಲ್ಲ. ಪರಮಾತ್ಮನನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮನಸ್ಸು, ದೇಹ, ಶುದ್ಧವಾಗಿರಬೇಕು. ಮನೆಯ ಮುಂದೆ ಕಸ ತುಂಬಿದ್ದರೆ, ಹೇಗೆ ಹೊಲಸು ಕಾಣುವುದೋಅದನ್ನೇ ಕಸ ಗೂಡಿಸಿ ರಂಗೋಲಿ ಹಾಕಿದರೆ, ಎಷ್ಟು ಸುಂದರವಾಗಿ ಕಾಣುವುದೋ, ಅದೇ ರೀತಿ ನಮ್ಮ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಂಡರೆ, ನಮ್ಮ ಮನೆ, ನಮ್ಮ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಭಗವಂತನು ಎಲ್ಲಿ ಸ್ವಚ್ಛ ಮನಸ್ಸು, ಒಳ್ಳೆಯ ವಿಚಾರಗಳು ಇರುವವೋ ಅಲ್ಲಿ ಭಗವಂತನು ನೆಲೆಸುವನು ಎಂದುಅವರು ಹೇಳಿದರು.
ಮನುಷ್ಯನಿಗೆ ಇದ್ದರೂ ಚಿಂತೆ, ಇಲ್ಲದಿದ್ದರೂಚಿಂತೆ. ಜೀವನವೆಂಬುದುಒಂದುಚಿಂತನೆಯ ಸಂತೆ. ಸೊಲ್ಲಾಪುರದ ಸಿದ್ಧರಾಮನ ತಂದೆ-ತಾಯಿಗಳಿಗೆ ಮಕ್ಕಳಾಗಿದ್ದಿಲ್ಲ. ತಂದೆಗೆ 80 ವರ್ಷ, ತಾಯಿಗೆ 70 ವರ್ಷವಾದರೂಅವರಿಗೆ ಮಕ್ಕಳಾಗಿದ್ದಿಲ್ಲ. ಮಕ್ಕಳಿರದ ದಂಪತಿಗಳಿಗೆ ಚಿಂತೆಯಾಗಿತ್ತು. ಸಿದ್ದರಾಮನ ತಂದೆ-ತಾಯಿಗಳು ಶಿವನನ್ನು ಒಲಿಸಿಕೊಂಡು ಪುತ್ರನನ್ನು ಪಡೆದರು. ಶಿವನ ಆಶೀರ್ವಾದದಿಂದ ಸೊಲ್ಲಾಪುರದ ಸಿದ್ದರಾಮನು ಹುಟ್ಟಿ, ಸಮಾಜಕ್ಕೆದಾರೀದೀಪವಾದರು. ಹೆಣ್ಣು, ಹೊನ್ನು, ಮಣ್ಣಿಗಾಗಿ ಸತ್ತವರು ಬಹಳ. ಸಮಾಜಕ್ಕಾಗಿ ಬದುಕಿಆದರ್ಶಪ್ರೀಯರಾದವರು. ಬೆರಳೆಣಿಕೆಯಷ್ಟು ಮಾತ್ರ. ಅಂತಹ ಶರಣರಲ್ಲಿ ಸೊಲ್ಲಾಪುರದ ಸಿದ್ದರಾಮರೂ ಒಬ್ಬರುಎಂದುಅವರು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯರಾದ ಎಂ.ಎಂ. ಹಿರೇಮಠ ವಕೀಲರು, ಪುರಾಣ ಪ್ರವಚನ ಸಮಿತಿಅಧ್ಯಕ್ಷರಾದ ಶೇಖಪ್ಪ ಹೊಂಬಳ, ಸಿದ್ದಣ್ಣ ಅರಳಿ, ಗಂಗಾಧರ ಮೇಲಗಿರಿ, ಗಂಗಾಧರ ನಂದಿಕೋಲಮಠ, ಶ್ರಿಶೈಲಪ್ಪ ಪಟ್ಟಣಶೆಟ್ಟಿ, ವಿರುಪಾಕ್ಷಪ್ಪಅಂಗಡಿ, ಮಲ್ಲಿಕಾರ್ಜುನ ಹಿರೇಮಠ, ಶಂಕರ ನೀರಲಕೇರಿ, ಪಂಚಾಕ್ಷರಅಂಗಡಿ, ನವೀನ ನಾಲ್ವಾಡ, ಪ್ರಕಾಶಜಂತ್ಲಿ, ಸತ್ಸಂಗದ ಸದಸ್ಯರಾದ ಸುನಂದಾ ಜೋಬಾಳೆ, ಬೀನಾ ಮಾನ್ವಿ, ಉಮಾ ಪಟ್ಟಣಶೆಟ್ಟಿ, ಜಯಶ್ರೀ ನಿಲೂಗಲ್, ಕಸ್ತೂರಕ್ಕ ಮಾನ್ವಿ, ಅನಸಕ್ಕ ಮೇಲಗಿರಿ, ಕಲ್ಪನಾ ಹಿರೇಮಠ, ಸರಸ್ವತಿ ನಂದಿಕೋಲಮಠ, ಶೈಲಾ ಮಾನ್ವಿ ಮುತಾದವರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 