ಉತ್ತರ ಕನ್ನಡದಲ್ಲಿ ಶಿವರಾತ್ರಿ ಸಂಭ್ರಮ : ಎಲ್ಲೆಡೆ ಭಕ್ತರ ಮಹಾಪೂರ - ಬಿಸಿಲಿಗೆ ಓರ್ವನ ಸಾವು
Shivaratri celebrations in Uttara Kannada:
ಕಾರವಾರ 15 : ಉತ್ತರ ಕನ್ನಡದಲ್ಲಿ ಶಿವರಾತ್ರಿ ಸಂಭ್ರಮ ಮುಗಿಲು ಮುಟ್ಟಿತ್ತು. ಕಾರವಾರದ ಸಜ್ಜೇಶ್ವರ, ಧಾರೇಶ್ವರದ ಶಿವಲಿಂಗ ದೇವಸ್ಥಾನ, ಗುಣವಂತೆಯ ಗುಣವಂತೇಶ್ವರ, ಮುರುಡೇಶ್ವರಗಳಲ್ಲಿ ಶಿವನ ದೇವಾಲಯಗಳು ಭಕ್ತರಿಂದ ತುಂಬಿ ಹೋಗಿದ್ದವು. ಕವಳಾ ಗುಹೆಯ ಶಿವಲಿಂಗ, ಶಿರಸಿ ಸನಿಹದ ಸಹಸ್ರ ಲಿಂಗ , ಯಾಣದ ಶಿವದೇವಸ್ಥಾನ ಸೇರಿದಂತೆ ಶಿವನ ಆಲಯಗಳು ಎಲ್ಲೆಡೆ ಭಕ್ತರ ಮಹಾಪೂರದಿಂದ ತುಂಬಿದ್ದವು.
ಜನರು ಭಕ್ತಿ ಶ್ರದ್ಧೆ ಯಿಂದ ಶಿವಲಿಂಗವನ್ನು ಆರಾಧಿಸಿದರು. ಭಕ್ತರು ಸಾಲುಗಟ್ಟಿ ಬಿಸಿಲಿನಲ್ಲಿಯೂ ಭಕ್ತಿ ಮೆರೆದರು. ಗೋಕರ್ಣದಲ್ಲಿ , ಮುರುಡೇಶ್ವರದಲ್ಲಿ ಸಾಲುಗಟ್ಟಿ ನಿಂತು ಶಿವನ ಪೂಜೆ ಅಭಿಷೇಕದಲ್ಲಿ ಜನ ನಿರತರಾಗಿದ್ದರು. ಭಕ್ತರು ಹಾಲು ಹಾಗೂ ಎಳನೀರಿನಿಂದ ಲಿಂಗಕ್ಕೆ ಅಭಿಷೇಕ ಮಾಡಿ ಹರಕೆ ತೀರಿಸಿದರೆ, ಕೆಲವರು ಬಿಲ್ವಪತ್ರೆ ಅರ್ಿಸುವ ಮೂಲಕ ಭಕ್ತಿ ಮೆರೆದರು. ಜಿಲ್ಲೆಯ ಎಲ್ಲಾ ಶಿವ ಕ್ಷೇತ್ರಗಳು ಶಿವ ಭಕ್ತರಿಂದ ತುಂಬಿ ತುಳುಕಿದವು.ಜೊಯಿಡಾದ ಕವಳ ಕೇವ್ಸ ಶಿವಲಿಂಗಕ್ಕೆ ಜನ ಹೊರ ಜಿಲ್ಲೆಯಿಂದ ಆಗಮಿಸಿ ,ದಟ್ಟ ಕಾನನದಲ್ಲಿ ಸಾಲುಗಟ್ಟಿ ಹನ್ನೆರಡು ತಾಸು ಕಾದು ಲಿಂಗದ ಮುಖ ನೋಡಿ, ಹೂ ಹಣ್ಣು ಕಾಯಿ ಅರ್ಿಸಿ ಧನ್ಯರಾದರು.
ದೇವಸ್ಥಾನಗಳ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತನಲ್ಲಿ ಅವಘಡ ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಗೋಕರ್ಣದಲ್ಲಿ ಬಿಸಿಲಿಗೆ ಓರ್ವ ವ್ಯಕ್ತಿಯು ಸಾವು ಕಂಡಿದ್ದು, ಆತ ಉತ್ತರ ಗೋವಾದ ರತ್ನಾಕರ ಎಂದು ತಿಳಿದು ಬಂದಿದೆ. ಆತ ಹೃದಯ ಕಾಯಿಲೆಯ ವ್ಯಕ್ತಿ ಆಗಿದ್ದು, ಬಿಸಲಲ್ಲಿ ಸರತಿ ಸಾಲಲ್ಲಿ ನಿಂತು ದೇವರ ದರ್ಶನ ಪಡೆದಿದ್ದ. ಲಿಂಗ ಪೂಜೆ ಮುಗಿಸಿ ಹೊರಬಂದ ನಂತರ ಕುಸಿದು ಬಿದ್ದು ಮೃತಪಟ್ಟ ಎಂದು ಪೊಲೀಸ್ ವರದಿಗಳು ಹೇಳಿವೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 