ಶಿವಾಜಿ ಮಹಾರಾಜ ಕೋ-ಆಪ್‌. ಕ್ರೆಡಿಟ್ ಸೊಸಾಯಿಟಿಗೆ ರೂ. 1.04 ಕೋಟಿ ಲಾಭ

ಶಿವಾಜಿ ಮಹಾರಾಜ ಕೋ-ಆಪ್‌. ಕ್ರೆಡಿಟ್ ಸೊಸಾಯಿಟಿಗೆ ರೂ. 1.04 ಕೋಟಿ ಲಾಭ Shivaji Maharaja Co-op. Credit Society Rs. 1.04 crore profit

ಶಿವಾಜಿ ಮಹಾರಾಜ ಕೋ-ಆಪ್‌. ಕ್ರೆಡಿಟ್ ಸೊಸಾಯಿಟಿಗೆ ರೂ. 1.04 ಕೋಟಿ ಲಾಭ 


ವಿಜಯಪುರ 15: ಜಿಲ್ಲೆಯ ಪ್ರತಿಷ್ಠಿತ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಶಿವಾಜಿ ಮಹಾರಾಜ ಕೋ-ಆಪ್‌. ಕ್ರೆಡಿಟ್ ಸೊಸಾಯಿಟಿಯು ವರ್ಷದಿಂದ-ವರ್ಷಕ್ಕೆ ಲಾಭದಲ್ಲಿ ಮುನ್ನಡೆಯುತ್ತಾ ಸಾಧನೆ ಮಾಡುತ್ತಿದೆ. 2025 ಮಾರ್ಚ ಅಂತ್ಯಕ್ಕೆ ರೂ. 1.04 ಕೋಟಿ ನಿವ್ವಳ ಲಾಭಗಳಿಸಿ, ಸದಸ್ಯರಿಗೆ ಪ್ರತಿಶತ 12 ರಷ್ಟು ಲಾಭಾಂಶ ಘೋಷಣೆ ಮಾಡಿದೆ. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಶಂಕರ ಕನಸೆ ವಹಿಸಿದ್ದರು ಹಾಗೂ ಹಾಜರಿದ್ದ ಎಲ್ಲ ಸದಸ್ಯರಿಗೆ ಹಿರಿಯ ನಿರ್ದೇಶಕರಾದ ಶ್ರೀ ಬಾಬುರಾವ ತರಸೆ ಸ್ವಾಗತಿಸಿದರು. 

ದಿ. 14 ರಂದು ನಗರದ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಿದ ಸಂಘದ ಸನ್ 2024-25 ನೇ ಸಾಲಿನ 29ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಹಿರಿಯ ನಿರ್ದೇಶಕರಾದ ಡಾ. ಸದಾಶಿವ ಪವಾರ ನಮ್ಮ ಸಂಘವು 28 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿರುವುದು ನಮ್ಮ ಜಿಲ್ಲೆಯ ಎಲ್ಲ ಸಹಕಾರಿಗಳಿಗೆ ಸಂತಸದ ವಿಚಾರವಾಗಿದೆ. ಪತ್ತಿನ ವ್ಯವಹಾರ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ಪ್ರಮುಖ ಆದ್ಯತೆ ನೀಡಿ, ಸಂಘವು ತನ್ನ ಸದಸ್ಯರಿಗೆ ಆರ್ಥಿಕ ನೆರವು ನೀಡುತ್ತಾ ಜಿಲ್ಲೆಯ ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕುವಂತಾಗಲು ನಿರಂತರವಾಗಿ ಶ್ರಮಿಸುತ್ತ ಬಂದಿದೆ ಎಂದು ಹೇಳಿದರು. 

ಸಂಘದ ವಾರ್ಷಿಕ ವರದಿ ಹಾಗೂ ಅಹವಾಲು ಮಂಡನೆ ಮಾಡಿದ ಉಪಾಧ್ಯಕ್ಷರಾದ ಶ್ರೀ ಸಂಜಯ ಜಂಬೂರೆ ಮಾತನಾಡುತ್ತ ನಮ್ಮ ಸಂಘವು ಪ್ರತಿ ವರ್ಷ ಲಾಭದಲ್ಲಿ ಮುನ್ನಡೆಯುವದರ ಮೂಲಕ ಸದಸ್ಯರಲ್ಲಿ ನಂಬಿಕೆ, ವಿಶ್ವಾಸರ್ಹಾತೆಯನ್ನು ಹೆಚ್ಚಿಸಿದೆ, ಜಿಲ್ಲೆಯ ಜನರು “ನಮ್ಮ ಶಿವಾಜಿ ಬ್ಯಾಂಕ” ಎಂದು ಹೆಮ್ಮೆಯಿಂದ ಹೇಳುತ್ತಾರೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಒಳಗೊಂಡಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸದಸ್ಯರು ಸಂಘವನ್ನು ಉತ್ತುಂಗ ಸ್ಥಾನದಲ್ಲಿ ಇರಿಸಿದ್ದಾರೆ ಎಂದು ಹೇಳಿದರೆ ಅತೀಶೋಕ್ತಿಯಾಗಲಾರದು.  

 

ನಮ್ಮ ಸಂಘವು ಪ್ರಸಕ್ತ 2024-25 ನೇ ಸಾಲಿನಲ್ಲಿ 1.04 ಕೋಟಿ ನಿವ್ವಳ ಲಾಭ ಗಳಿಸುವ ಮೂಲಕ ಪ್ರಗತಿಯತ್ತ ಹೆಜ್ಜೆ ಹಾಕುತ್ತ ಸದಸ್ಯರಿಗೆ ಅವರವರ ಶೇರು ಹಣದ ಮೇಲೆ ಶೇ. 12ಅ ಲಾಭಾಂಶವನ್ನು ನೀಡಲು ಆಡಳಿತ ಮಂಡಳಿಯು ನಿರ್ಧರಿಸಿದೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ವೃತ್ತಿಪರ ಆಡಳಿತ ಸಂಘದ ವಿಶೇಷತೆಯಾಗಿದೆ. ನಮ್ಮ ಜಿಲ್ಲೆಯ ಸಹಕಾರಿ ಪತ್ತಿನ ಸಂಘಗಳಲ್ಲಿ ವಿನೂತನ ಯೋಜನೆಗಳ ಮೂಲಕ “ಉತ್ತಮ ಸಹಕಾರಿ ಸಂಘ” ಎಂಬ ಖ್ಯಾತಿ ಪಡೆದು, ದಕ್ಷತೆಯಿಂದ, ಬದ್ಧತೆಯಿಂದ ಸೇವೆ ಸಲ್ಲಿಸಿ ಸಮಾಜದ ಹಾಗೂ ಸದಸ್ಯರ ಪ್ರೀತಿ, ವಿಶ್ವಾಸ-ಗೌರವಗಳಿಗೆ ಪಾತ್ರವಾಗಿರುವದರೊಂದಿಗೆ ತನ್ನ ಬೆಳ್ಳಿ ಹಬ್ಬವನ್ನು ಅತೀ ವಿಜೃಂಭಣೆಯಿಂದ ಆಚರಿಸಿಕೊಂಡಿದೆ ಎಂದರು. 

ಸಂಘವು ಸಧ್ಯ 5,141 ಸದಸ್ಯರನ್ನು ಹೊಂದುವುದರ ಮೂಲಕ ಹೆಮ್ಮರವಾಗಿ ಬೆಳೆದು ನಿಂತಿದೆ.  

ರೂ. 3.23 ಕೋಟಿ ಶೇರು ಬಂಡವಾಳ, ರೂ. 71 ಕೋಟಿ ಠೇವುಗಳು, ರೂ. 3.75 ಕೋಟಿ ಕಾಯ್ದಿರಿಸಿದ ನಿಧಿ, ರೂ. 5.04 ಕೋಟಿ ಇತರೆ ನಿಧಿಗಳು, ರೂ. 61.01 ಕೋಟಿ ಸಾಲ ಹಾಗೂ ಮುಂಗಡಗಳು, ರೂ. 83.04 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ ಎಂದು ಹೇಳಿದರು. ಅದೇ ರೀತಿ ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ  

ರೂ. 19.06 ಕೋಟಿ ಸಾಲವನ್ನು ವಿತರಿಸಲಾಗಿದೆ. ಹಾಗೂ ಪ್ರಸಕ್ತ ಸಾಲಿನಲ್ಲಿ ರೂ. 11.96 ಕೋಟಿ ಸಾಲವನ್ನು ವಸೂಲ ಮಾಡಲಾಗಿದೆ ಎಂದು ತಿಳಿಸಿದರು.  

ಇದೇ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಸಂಘದ ಸದಸ್ಯರುಗಳಾದ ಜ್ಯೋತಿರಾಮ ಪವಾರ, ಮಾಯಾ ಲುಗಡೆ (ಜಮಾದಾರ), ಸುರೇಶ ಜತ್ತಿ ಹಾಗೂ ಮಲ್ಲಿಕಾರ್ಜುನ ಸೊಡ್ಡಿ ಇವರುಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಅದೇ ರೀತಿ 80 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಹಾಗೂ 10 ಜನ ಸಂಘದ ಹಿರಿಯ ಸದಸ್ಯರಿಗೆ ವಾಕಿಂಗ್ ಸ್ಟೀಕ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ಬಾಬುರಾವ ತರಸೆ, ಡಾ. ಸದಾಶಿವ ಪವಾರ,  

ಪ್ರವೀಣ ಬೋಡಕೆ, ರಾಮಚಂದ್ರ ಚವ್ಹಾಣ, ಸರೋಜನಿ ನಿಕ್ಕಂ, ಅಂಬುತಾಯಿ ಜಾಧವ, ಸುರೇಖಾ ಕದಂ, ರವಿ ಮದಭಾವಿ, ಭಾರತ ದೇವಕುಳೆ, ಪಾಂಡುರಂಗ, ರೋಹಿಟೆ, ಪ್ರಧಾನ ವ್ಯವಸ್ಥಾಪಕರಾದ ಸಂಜಯ ಜಾಧವ, ವ್ಯವಸ್ಥಾಪಕರುಗಳಾದ ಚಂದ್ರಕಾಂತ ಜಾಧವ,  

ಅಂಬಾದಾಸ ಚವ್ಹಾಣ ಹಾಗೂ ಸಂಘದ ಸಿಬ್ಬಂದಿಗಳು, ಪಿಗ್ಮಿ ಏಜೆಂಟರು ಹಾಗೂ ಬೃಹತ ಸಂಖ್ಯೆಯಲ್ಲಿ ಸಂಘದ ಸದಸ್ಯರು ಭಾಗವಹಿಸಿದ್ದರು. 

ಕಾರ್ಯಕ್ರಮದ ನಿರೂಪಣೆಯನ್ನು ವಿಠ್ಠಲ ಚವ್ಹಾಣ ಹಾಗೂ ವಂದನಾರೆ​‍್ಣಯನ್ನು ರಾಮಚಂದ್ರ ಚವ್ಹಾಣ ಮಾಡಿದರು.