ರಾಷ್ಟ್ರೀಯ ನಾಟಕೋತ್ಸವಕ್ಕೆ ಶಿವಾಚಾರ್ಯ ಶ್ರೀಗಳು ಚಾಲನೆ
ಸಾಣೇಹಳ್ಳಿ04: ಸಳ್ಥೀಯ ಶಿವಕುಮಾರ ಕಲಾಸಂಘ ಆಯೋಜಿಸಿಲಾಗಿದ್ದ ರಾಷ್ಟ್ರೀಯ ನಾಟಕೋತ್ಸವಕ್ಕೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿಗಳವರು ಶ್ರೀಮಠದ ಮುಂಭಾಗದಲ್ಲಿ ಶಿವಧ್ವಜಾರೋಹಣ ನೆರೆವೇರಿಸುವ ಮೂಲಕ ಚಾಲನೆ ನೀಡಿದರು. ನಂತರ ಶಾಲಾ ಅಂಗಳದಲ್ಲಿ ಹೊಸದುರ್ಗದ ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂತರ್ಿ ಹೆಚ್ ಬಿಲ್ಲಪ್ಪನವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಆಯೋಜನೆಗೊಂಡಿದ್ದ ಪ್ರಾರ್ಥನಾ ಸಭೆಯ ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ `ಶಿವ' ಒಂದು ಧರ್ಮದ, ರಾಜ್ಯದ, ಸಂಘಟನೆಯ, ದೇಶದ ಸಂಕೇತವಲ್ಲ; ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವಂಥದ್ದು. ಶಿವ ಎಂದರೆ ಮಂಗಳ, ಒಳಿತು, ಲೇಸು, ಅಭ್ಯುದಯ, ಕಲ್ಯಾಣ ಎಂದರ್ಥ. ಈ ಹಿನ್ನೆಲೆಯಲ್ಲಿಯೇ ಇಂದು ಶಿವಧ್ವಜಾರೋಹಣದ ಮೂಲಕ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ನೀಡಲಾಯಿತು.
ನಾವೆಲ್ಲರೂ ಕನ್ನಡಿಗರಾದ ಕಾರಣ ನಮಗೆ ಕನ್ನಡ ಭಾಷೆಯ ಮೂಲಕವೇ ಜ್ಞಾನ, ತಿಳುವಳಿಕೆ ಬಂದಿರುವ ಕಾರಣ ನಾವು ಮೊದಲು ಗೌರವಿಸಬೇಕಾದುದು ನಮ್ಮ ನಾಡು, ನುಡಿಯನ್ನು. ಈ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಕನ್ನಡ ಧ್ವಜಾರೋಹಣವನ್ನು ನ್ಯಾಯಮೂತರ್ಿ ಬಿಲ್ಲಪ್ಪನವರು ನೆರವೇರಿಸಿದ್ದಾರೆ. ಪ್ರಾರ್ಥನೆ ಹೊರನೋಟವನ್ನು ಕಡಿಮೆ ಮಾಡಿ ಒಳ ನೋಟದ ಕಡೆ ಗಮನಹರಿಸುವಂತೆ ಮಾಡುತ್ತದೆ ಈ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಗ್ಗೆ ಪ್ರಾರ್ಥನೆ, ಧ್ಯಾನ, ಮೌನ ಮತ್ತು ಚಿಂತನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಂವಿಧಾನದ ಮೂಲ ಆಶಯ ಸ್ವಾತಂತ್ರ್ಯ, ಸಮಾನತೆ, ಸವರ್ೋದಯ. ವಿಶ್ವದ ಎಲ್ಲ ಸಂವಿಧಾನಕ್ಕಿಂತ ಮಿಗಿಲಾದುದು 12 ನೆಯ ಶತಮಾನದ ಬಸವಾದಿ ಶಿವ ಶರಣರು ನೀಡಿದ ಸಂವಿಧಾನ. `ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂದು ಜ್ಞಾನಕ್ಕೆ ಮೊದಲ ಆದ್ಯತೆ ನೀಡಿದರು. `ಇವ ನಮ್ಮವ, ಇವ ನಮ್ಮವ' ಎನ್ನುವ ಮೂಲಕ ಮನುಕುಲವೇ ಒಂದು ಎನ್ನುವ ಕರೆಕೊಟ್ಟರು. `ಕರ್ಣದೊಳಗೆ ಜನಸಿದವರುಂಟೆ' ಎನ್ನುವ ಮೂಲಕ ವರ್ಣ, ಜಾತಿ, ಸ್ಥಳ ಮುಂತಾದ ಅಸಮಾನತೆಗಳನ್ನು ದೂರಗೊಳಿಸಲು ಎಲ್ಲರ ಹುಟ್ಟಿನ ಗುಟ್ಟು ಒಂದೇ ಎಂದರು. `ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ಎನ್ನುವ ಮೂಲಕ ಲಿಂಗ ತಾರತಮ್ಯವನ್ನು ಹೋಗಲಾಡಿಸಿದರು. ಪ್ರಜಾಪ್ರಭುತ್ವಕ್ಕೆ ಧರ್ಮ ಮತ್ತು ನೈತಿಕ ನೆಲೆಗಟ್ಟು ಇರಬೇಕು ಎಂದರು.
ಹೊಸದುರ್ಗದ ವಿಶ್ರಾಂತ ನ್ಯಾಯಮೂತರ್ಿ ಹೆಚ್ ಬಿಲ್ಲಪ್ಪನವರು ಮಾತನಾಡಿ ಸಂವಿಧಾನ ನಮ್ಮ ರಾಷ್ಟ್ರೀಯ ಧರ್ಮ. ಜನರ ಸವರ್ಾಂಗೀಣ ಬೆಳವಣಿಗೆಯೇ ಸಂವಿಧಾನದ ಧ್ಯೇಯ. ಅದರ ಪೀಠಿಕೆಯಲ್ಲಿ ಭಾರತವನ್ನು ಜಾತ್ಯತೀತ ಪ್ರಜಾರಾಜ್ಯವನ್ನಾಗಿ ಪರಿಗಣಿಸಿದ್ದೇವೆ ಎನ್ನುವ ಘೋಷವಾಕ್ಯವಿದೆ. ಭಾರತ ಬಹು ಸಂಸ್ಕೃತಿ, ಧರ್ಮ, ಭಾಷೆ, ವೇಷಭೂಷಣ, ಕಟ್ಟುಪಾಡುಗಳ ವೈವಿಧ್ಯಮಯ ರಾಷ್ಟ್ರ. ಇಂಥ ರಾಷ್ಟ್ರವನ್ನು ಜಗತ್ತಿನ ಬೇರೆಡೆ ಕಾಣಲು ಸಾಧ್ಯವಿಲ್ಲ.
ಜಾತ್ಯತೀತ ಅಂದರೆ ಧರ್ಮರಹಿತ ಮತ್ತು ಯಾವುದೋ ಒಂದು ಧರ್ಮಕ್ಕೆ ಮಾತ್ರ ಮಾನ್ಯತೆ ನೀಡುವಂಥದ್ದು ಎನ್ನುವ ಅರ್ಥವಲ್ಲ. ಎಲ್ಲ ಧರ್ಮದ ಜನರನ್ನು ಸಮಾನವಾಗಿ ಗೌರವಿಸುವುದು ಎಂದರ್ಥ. ಬಡತನ ನಮ್ಮ ಸಮಾಜದ ಶತೃವಾಗಿದೆ. ಪ್ರಾಕೃತಿಕ ಸಂಪತ್ತು ಸಮಾನವಾಗಿ ಹಂಚಿಕೆಯಾಗಿಲ್ಲ. ಅನಕ್ಷರತೆಯಿಂದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗದು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಒದಗಿಸಬೇಕೆಂಬುದು ಸಂವಿಧಾನದ ಆಶಯವಾಗಿದೆ. ಶಬರಿಮಲೈ ದೇವಸ್ಥಾನದ ಪ್ರವೇಶ ಕುರಿತಂತೆ ಎದ್ದಿರುವ ವಿಷಯ ಚಚರ್ೆಯ ವಿಷಯವೇ ಅಲ್ಲ. ಇದೊಂದು ಮೌಢ್ಯದ ಪರಮಾವಧಿ. ನೈತಿಕ ಶಿಕ್ಷಣವಿಲ್ಲದ ಕೇವಲ ವಿಷಯಾಧಾರಿತ ಶಿಕ್ಷಣದ ವ್ಯಕ್ತಿಯಲ್ಲಿ ಮೌಲ್ಯಗಳು ಉಳಿಯುವುದಿಲ್ಲ. ವ್ಯಕ್ತಿತ್ವ ನಿಮರ್ಾಣವೇ ಶಿಕ್ಷಣದ ಉದ್ದೇಶವಾಗಿರಬೇಕು ಎಂದರು.
ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯರಾದ ಹೊನ್ನೇಶಪ್ಪ, ಸಂಗಾಪುರ್, ಶಿವಕುಮಾರ್ ಮೊದಲಾದ ಅಧ್ಯಾಪಕರಿದ್ದರು. ಶಾಲಾ ಕಾಲೇಜಿನ ವಿದ್ಯಾಥರ್ಿಗಳು, ನೌಕರರು, ಗ್ರಾಮಸ್ಥರು, ಕಲಾವಿದರು ಮುಂತಾದವರು ಸಾಮೂಹಿಕ ಪ್ರಾರ್ಥನೆ, ಶಿವಮಂತ್ರಲೇಖನ, ಧ್ಯಾನ, ಮೌನದಲ್ಲಿ ಭಾಗವಹಿಸಿದ್ದರು. ಹೆಚ್ ಎಸ್ ನಾಗರಾಜ್ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ವಿದ್ಯಾಥರ್ಿಗಳು ಕಾರ್ಯಕ್ರಮ ನಿರ್ವಹಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 