ಲೋಕದರ್ಶನ ವರದಿ
ಶಿರಹಟ್ಟಿ 04: ವಿದ್ಯಾ ದೇವತೆ ಕಠಿಣ ತಪಸ್ಸಿಗೆ ಮಾತ್ರ ಒಲಿಯುತ್ತಾಳೆ ಅಲ್ಲದೆ ಆಡಂಬರಕ್ಕಲ್ಲ. ಅವಳಿಗೆ ಬಡವ ಬಲ್ಲಿದ, ಹಳ್ಳಿ ಪಟ್ಟಣವೆಂಬ ಬೇಧ ಭಾವವಿಲ್ಲ. ಅದಕ್ಕೆ ಪಟ್ಟಣದ ಸಾನಿಯಾ ಢಾಲಾಯತ ಒಂದೊಳ್ಳೆ ಉದಾಹರಣೆಯಾಗಿದ್ದಾಳೆ.
ಪಟ್ಟಣದ ಮ್ಯಾಗೇರಿ ಓಣಿಯ ಸಾನಿಯಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.96ರಷ್ಟು ಅಂಕಗಳನ್ನು ಪಡೆದು ಶಿಕ್ಷಣಕ್ಕೆ ಬಡತನ ಅಡ್ಡಿಯಾಗಲಾರದು ಎಂದು ಉಳಿದವರಿಗೆ ಮಾದರಿಯಾಗುವ ಹಾಗೆ ತಮ್ಮ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಸರಕಾರಿ ನೌಕರಿಯಲ್ಲಿದ್ದರೂ ಜೀವನ ಸಾಗಿಸಲು ಕಷ್ಠವಿರುವ ಇಂದಿನ ದುಬಾರಿ ಕಾಲದಲ್ಲಿ ವೃತ್ತಿಯಲ್ಲಿ ಟೇಲರ್ ಆಗಿರುವ ಮೊಹಮ್ಮದಲಿ ಢಾಲಾಯತ ಬಡತನದ ಬದುಕಿನಲ್ಲಿ ತಾವು ಕಲೆತಿದ್ದು 7 ತರಗತಿವರೆಗೆ ಆದರೂ ತನ್ನಂತೆ ತಮ್ಮ ಮಕ್ಕಳು ಕೂಲಿ ನಾಲಿ ಮಾಡುವದು ಬೇಡ ಅಕ್ಷರಗಳನ್ನು ಕಲೆತು ನಾಲ್ಕಾರು ಜನರಿಗೆ ದಾರಿ ದೀಪವಾಗ ಬೇಕೆಂದು ಪಟ್ಟಣದ ಪ್ರತಿಷ್ಠಿತ ಸಿ.ಸಿ.ಎನ್ ಶಾಲೆಯಲ್ಲಿ ಮಗಳಿಗೆ ವಿದ್ಯಾಭ್ಯಾಸ ದೊರಕಿಸಿ ಕೊಟ್ಟಿದ್ದಾರೆ. ಇನ್ನೂ ಮಗಳು ಅಪ್ಪನ ಆಸೆಯಂತೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ