ಚಕೋರ ವೇದಿಕೆ ಜಿಲ್ಲಾ ಸಂಚಾಲಕರಾಗಿ ಶಾಸ್ತ್ರಿ ಮತ್ತು ನಾಯಕ ನೇಮಕ
ಬೆಳಗಾವಿ 12: ಕರ್ನಾಟಕ ಸಾಹಿತ್ಯ ಅಕಾಡೆಮಿ ಆರಂಭಿಸುತ್ತಿರುವ "ಚಕೋರ ಸಾಹಿತ್ಯ ವೇದಿಕೆ" ಯ ಬೆಳಗಾವಿ ಜಿಲ್ಲಾ ಸಂಚಾಲಕರನ್ನಾಗಿ ಹಿರಿಯ ಸಾಹಿತಿ, ಪತ್ರಕರ್ತ ಎಲ್. ಎಸ್. ಶಾಸ್ತ್ರಿ ಮತ್ತು ಸವದತ್ತಿಯ ಕವಿ, ವಿಮರ್ಶಕ ನಾಗೇಶ ಜೆ. ನಾಯಕ ಅವರನ್ನು ಅಕಾಡೆಮಿ ಅಧ್ಯಕ್ಷ ಶ್ರೀ ಎಲ್. ಎನ್. ಮುಕುಂದರಾಜ ಅವರು ನೇಮಕ ಮಾಡಿರುತ್ತಾರೆ.
ಚಕೋರ ವೇದಿಕೆ ಜಿಲ್ಲಾ ಘಟಕ ಇದೇ ದಿ. 14 ಶನಿವಾರ 4 ಗಂಟೆಗೆ ಚೆನ್ನಮ್ಮನ ಕಿತ್ತೂರಿನಲ್ಲಿ ಉದ್ಘಾಟನೆಯಾಗಲಿದೆ ಎಂದು ಅಕಾಡೆಮಿಯ ಸದಸ್ಯೆ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.