ನವದೆಹಲಿ, ಡಿ 4- ಎನ್ಸಿಪಿ ನಾಯಕರಾದ ಫರೂಕ್ ಅಬ್ದುಲ್ಲ ,ಒಮರ್ ಅಬ್ದುಲ್ಲಾ ಮತ್ತು ಪಿಡಿಪಿಯ ಮೆಹಬೂಬಾ ಮುಫ್ತಿ ಮತ್ತಿತರೆ ರಾಜಕೀಯ ನಾಯಕರ ಬಂಧನದ ಕ್ರಮವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಬಲವಾಗಿ ಖಂಡಿಸಿದ್ದಾರೆ.
ಜೊತೆಗೆ ಕಾಶ್ಮಿರ ಕುರಿತ ಸರಕಾರದ ನೀತಿ ,ನಿಲುವುಗಳನ್ನು ಅವರು ಲೋಕಸಭೆಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಗೃಹ ಸಚಿವ ಅಮಿತ್ ಷಾ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆ ಮಂಡಿಸಿ ಸುಮಾರು ನಾಲ್ಕು ತಿಂಗಳು ಕಳೆದಿವೆ ಆ ಸಮಯದಿಂದಲೂ ಕೆಲವೂ , ರಾಜಕೀಯ ಮುಖಂಡರು ಮತ್ತು ಸರಕಾರದ ಹಿಡಿತದಲ್ಲಿದ್ದಾರೆ ಎಂದು ಪೂರಕ ಬಜೆಟ್ ಮೇಲಿನ ಚರ್ಚೆಯ ಸಮಯಲ್ಲಿ ಸರಕಾರ ನಿಲುವನ್ನು ಟೀಕಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿಗೆ ಮರಳುವ ಮುನ್ನವೆ 2019-20ರ ಆರ್ಥಿಕ ಪೂರಕ ಬೇಡಿಕೆಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿರುವ ಹಂಚಿಕೆ ಬಹಳ ಕಡಿಮೆ ಎಂದು ಅವರು ಅಸಮಾಧಾನ ಹೊರ ಹಾಕಿದರು. 30 ರಾಜಕೀಯ ಮುಖಂಡರನ್ನು ಬಂಧನದಲ್ಲಿಡಲಾಗಿದೆ ಮತ್ತು ಅವರಲ್ಲಿ ಕೆಲವರನ್ನು 'ಏಕಾಂತದಲ್ಲಿ ಇರಿಸಲಾಗಿದೆ ಎಂದು ಅವರು ಸದನದ ಗಮನಸೆಳೆದರು.
ಪಿಡಿಪಿಯ ಮೆಹಬೂಬಾ ಮುಫ್ತಿ ಮತ್ತುಎನ್ ಸಿಪಿ ನಾಯಕರಾದ ಒಮರ್ ಅಬ್ದುಲ್ಲಾ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಮೇಲಿಂದ ಮೇಲೆ ಒಂದು ಸ್ಥಳದಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸಲಾಗುತ್ತಿದೆ ಎಂದೂ ಶಶಿ ತರೂರ್ ದೂರಿದರು.