ಬಾಕ್ಸಿಂಗ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಶಶಾಂಕ ಆಯ್ಕೆ
ಖಾನಾಪುರ 25: ತಾಲೂಕಿನ ಹಿರೇಮುನವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಶಶಾಂಕ ಸುರೇಶ ನಿಂಬಾಳಕರ ಕಳೆದ ನ.21ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಈ ವಿದ್ಯಾರ್ಥಿಗೆ ಶಾಲೆಯ ಕ್ರೀಡಾ ಶಿಕ್ಷಕ ಬಿ.ಕೆ.ಪಾಟೀಲ ಮಾರ್ಗದರ್ಶನ ನೀಡಿದ್ದರು. ಗ್ರಾಮೀಣ ಭಾಗದಿಂದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮೊದಲ ವಿದ್ಯಾರ್ಥಿ ಎಂಬ ಹಿರಿಮೆಗೆ ಶಶಾಂಕ ಪಾತ್ರನಾಗಿದ್ದು, ವಿದ್ಯಾರ್ಥಿಯ ಸಾಧನೆಗೆ ಶಾಸಕ ವಿಠ್ಠಲ ಹಲಗೇಕರ, ಬಿಆರ್‌ಸಿ ಸಮನ್ವಯ ಅಧಿಕಾರಿ ಎ.ಬಿ.ಅಂಬಗಿ, ಶಾಲೆಯ ಎಸ್.ಡಿ. ಎಂ.ಸಿ ಪದಾಧಿಕಾರಿಗಳು, ಮುಖ್ಯಾಧ್ಯಾಪಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.