ಬ್ಯಾಂಕ್ ಅಭಿವೃದ್ಧಿಗೆ ಶೇರುದಾರರ ಸಹಕಾರ ಮುಖ್ಯ: ಮನ್ಸೂರ್
Shareholder cooperation is important for bank development: Mansoor
ಬ್ಯಾಂಕ್ ಅಭಿವೃದ್ಧಿಗೆ ಶೇರುದಾರರ ಸಹಕಾರ ಮುಖ್ಯ: ಮನ್ಸೂರ್
ತಾಳಿಕೋಟಿ: ಕಳೆದ 89 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸಮುದಾಯದ ಪ್ರತಿಷ್ಠಿತ ಈ ಬ್ಯಾಂಕು ಇಂದು ಹೆಮ್ಮರವಾಗಿ ಬೆಳೆದಿದೆ ಇದಕ್ಕೆ ಶೇರುದಾರರ ಸಹಕಾರವೇ ಕಾರಣ ನಿಮ್ಮ ಸಹಕಾರ ಇದ್ದರೆ ಮಾತ್ರ ಸಹಕಾರಿ ಸಂಸ್ಥೆಗಳು ಬೆಳವಣಿಗೆಯಾಗಲು ಸಾಧ್ಯ ಎಂದು ಆಡಳಿತ ಮಂಡಳಿ ನಿರ್ದೇಶಕ ಇಬ್ರಾಹಿಂ ಮನ್ಸೂರ್ ಹೇಳಿದರು.
ಪಟ್ಟಣದ ಈದ್ಗಾ ಶಾದಿ ಹಾಲ್ ದಲ್ಲಿ ರವಿವಾರ ಹಮ್ಮಿಕೊಂಡ ಬ್ಯಾಂಕನ 89ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಈ ಬ್ಯಾಂಕನ್ನು ಕಟ್ಟಿ ಬೆಳೆಸುವಲ್ಲಿ ನಮ್ಮ ಹಿರಿಯರ ಪರಿಶ್ರಮ ಹಾಗೂ ತ್ಯಾಗ ಬಹಳಷ್ಟು ಇದೆ ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ನಿರ್ದೇಶಕ ಅರ್ಜುಣಗಿ ಮುನ್ನಾ ಮಾತನಾಡಿ ಬ್ಯಾಂಕಿನಿಂದ ಸಾಲ ಪಡೆದ ಸಾಲಗಾರರು ತಮ್ಮ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು ಇದು ಬ್ಯಾಂಕಿನ ಅಭಿವೃದ್ಧಿಗೆ ಅತಿ ಅಗತ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಬ್ಯಾಂಕಿನ ಅಧ್ಯಕ್ಷ ಚಂದಾಹುಸೇನ ಖಾಂಜಾದೆ ಮಾತನಾಡಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ.42.45 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ. ಇದಕ್ಕೆ ಆಡಳಿತ ಮಂಡಳಿ ನಿರ್ದೇಶಕರ ಕಳಕಳಿ ಗ್ರಾಹಕರ ಸಹಕಾರ ಮತ್ತು ಬ್ಯಾಂಕ್ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಪ್ರಮುಖ ಕಾರಣವಾಗಿದೆ ಎಂದ ಅವರು ಈ ಬ್ಯಾಂಕು ಕೇವಲ ಒಂದು ಹಣಕಾಸಿನ ಸಂಸ್ಥೆಯಾಗಿರದೆ ಸಮುದಾಯದ ಆಧಾರ ಸ್ತಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಬ್ಯಾಂಕಿನ ಶೇರು ಬಂಡವಾಳ, ಸದಸ್ಯರ ಸಂಖ್ಯೆ, ಠೇವುಗಳ ಸಂಗ್ರಹ, ಸಾಲ ಹಾಗೂ ಮುಂಗಡಗಳು ವಿಸ್ತರಿಸಿದ್ದು ಅನುತ್ಪಾದಕ ಆಸ್ತಿಗಳ ಪ್ರಮಾಣ ಕೇವಲ ಶೇ.2 ರಷ್ಟಿದೆ, ಶೇರುದಾರರ ಪ್ರೋತ್ಸಾಹ ದೊಂದಿಗೆ ಲಾಭದಲ್ಲಿ ಸಾಗುತ್ತಿರುವ ಈ ಬ್ಯಾಂಕ್ ಭವಿಷ್ಯದಲ್ಲಿ ಇನ್ನೂ ಹಲವಾರು ಸೌಲಭ್ಯಗಳನ್ನು ತನ್ನ ಗ್ರಾಹಕರಿಗೆ ಕೊಡಲು ಯೋಜನೆ ರೂಪಿಸಿದೆ ಎಂದರು.
ವ್ಯವಸ್ಥಾಪಕ ಎಲ್.ಆರ್ ನಾಗೂರ ಮಾತನಾಡಿ 2025-26 ನೇ ಸಾಲಿನ ಅಂದಾಜು ಆಯವ್ಯಯದ ಮುಂಗಡ ಪತ್ರ, ನಿವ್ವಳ ಲಾಭದ ವಿಲೇವಾರಿ ಮತ್ತು ಸನ್ನದು ಲೆಕ್ಕಪರಿಶೋಧಕರ ನೇಮಕಾತಿಗಾಗಿ ಸಭೆಗೆ ವಿಷಯ ಮಂಡಿಸಿ ಅನುಮೋದನೆಯನ್ನು ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಶೇರುದಾರರಿಗೆ, ನಿವೃತ್ತ ಸಿಬ್ಬಂದಿಗಳಿಗೆ ಸನ್ಮಾನಿಸಿ, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಶೇರುದಾರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಉಪಾಧ್ಯಕ್ಷ ರಫೀಕ್ ಬೇಪಾರಿ, ನಿರ್ದೇಶಕರಾದ ಮೆಹಬೂಬ ಕೆಂಭಾವಿ, ಫಯಾಜ್ ಉತ್ನಾಳ, ಮಹಮ್ಮದ್ ಇಸ್ಮಾಯಿಲ್ ಮನಗೂಳಿ, ಸಿಕಂದರಬಾಷಾ ಡೋಣಿ, ದಾದಾಪೀರ ಚೌದ್ರಿ, ಮೊಹಮ್ಮದ್ ಶಫೀಕ ಇನಾಮದಾರ,ಎಂ.ಎ.ಅರ್ಜುಣಗಿ, ಮಹಮ್ಮದ್ ಆದಮ ಅತ್ತಾರ,ಸಕೀನಾಬಿ ಲಾಹೋರಿ, ಮಾಜಾನಬಿ ಚೆನ್ನೂರ, ಸಿಬ್ಬಂದಿಗಳಾದ ಎಚ್.ಎಮ್. ಹಂಡೆಬಾಗ,ಟಿ.ಎ.ನಮಾಜಕಟ್ಟಿ, ಆರ್.ಕೆ. ನಡುವಿನಮನಿ,ಎಸ್.ಡಿ.ರಂಜಣಗಿ, ಎಸ್. ಎಮ್.ನಮಾಜಕಟ್ಟಿ ಎಂ.ಜೆ.ಪಟೇಲ,ಬಿ.ಎ.ಬೀಳಗಿ, ಶಮ್ಮು ಮಕಾಂದಾರ ಪಿಗ್ಮಿ ಏಜೆಂಟರಾದ ಎಂ.ಎ.ಮುಲ್ಲಾ, ಎಂ.ಝಡ್ ಲಾಹೋರಿ ಹಾಗೂ ಶೇರುದಾರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 