ಅಧ್ಯಕ್ಷರಾಗಿ ಶರಣಬಸವೇಶ್ವರ ಬಸವರಾಜ ಚನ್ನೂರ ಉಪಾಧ್ಯಕ್ಷರಾಗಿ ರವಿ ಬಸವರಡ್ಡಿ ದುನ್ನೂರ ಆಯ್ಕೆ

ಅಧ್ಯಕ್ಷರಾಗಿ ಶರಣಬಸವೇಶ್ವರ ಬಸವರಾಜ ಚನ್ನೂರ ಉಪಾಧ್ಯಕ್ಷರಾಗಿ ರವಿ ಬಸವರಡ್ಡಿ ದುನ್ನೂರ ಆಯ್ಕೆ Sharanabasaveshwara Basavaraja Channur elected as President, Ravi Basavaradi Dunnur elected as Vice

ಶಿರಹಟ್ಟಿ 11 : ತಾಲೂಕಿನ ಕೋಗನೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸಂಘಕ್ಕೆ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಶರಣಬಸವೇಶ್ವರ ಬಸವರಾಜ ಚನ್ನೂರ ಉಪಾಧ್ಯಕ್ಷರಾಗಿ ರವಿ ಬಸವರಡ್ಡಿ ದುನ್ನೂರ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ವಾಸಪ್ಪ ಮಲ್ಲಪ್ಪ ಕೂರಗುಂದ,ಬಸವರಾಜ ಗಂಗಪ್ಪ ಬೆಳಗಟ್ಟಿ, ಬಸವರಾಜ ಬಸವಣ್ಣೆಪ್ಪ ಡೊಳ್ಳಿನ, ವೀರಭದ್ರಗೌಡ ಧರ್ಮಗೌಡ ಪಾಟೀಲ, ಫಕ್ಕೀರೇಶ ನಾಗಪ್ಪ ಬೂದನೂರ, ಹನಮಂತ ನಾಗಪ್ಪ ಮೇಲಿನಮನಿ,ಮರಬಸಪ್ಪ ಫಕ್ಕೀರ​‍್ಪ ದೊಡ್ಡಮನಿ, ಹನಮಪ್ಪ ಬಸವರಾಜ ಭರಮಣ್ಣವರ, ಈರವ್ವ ನಾಗಪ್ಪ ಬ್ಯಾಲಹುಣಸಿ, ಕಾಶವ್ವ ಚನ್ನಪ್ಪ ಚನ್ನೂರ ಈ ಅಭ್ಯರ್ಥಿಗಳು ಕ್ರಮಬದ್ದವಾಗಿ ಮತದಾನದ ಮೂಲಕ ಚುನಾಯಿತರಾಗಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.