ಶರಣ ಸಂಸ್ಕೃತಿ ಸಮಾರೋಪ ಸಮಾರಂಭ

ಲೋಕದರ್ಶನ ವರದಿ

ಹಾವೇರಿ03: ಬಸವಾದಿ ಶಿವಶರಣರು, ಸಮ ಸಮಾಜ ನಿಮರ್ಾಣಕೆ, ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರು. ನಾವು ಹೋರಾಟ ಮಾಡದಿದ್ದರೆ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ, ಸಮಕಾಲಿನ ಜಿಜ್ಞಾಸೆಯ ಸಮಸ್ಯೆಗಳಿಗೆ ಹೋರಾಟ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕೆಂದು ಚಿತ್ರದುರ್ಗದ ಡಾ.ಶಿವಮೂತರ್ಿ ಮುರುಘಾ ಶರಣರು ಹೇಳಿದರು.

 ಭಾನುವಾರ ನಗರದ ಹೊಸಮಠದ ಬಸವ ಕೇಂದ್ರದಲ್ಲಿ ಲಿಂ.ಜಗದ್ಗುರು .ನೈಘಂಟಿನ ಸಿದ್ದಬಸವ ಮುರುಘ ರಾಜೇಂದ್ರ ಶ್ರೀಗಳ ಹಾಗೂ ಅಥಣಿ ಶ್ರೀಮುರುಘೇಂದ್ರ ಶಿವಯೋಗಿಗಳವರ ಸ್ಮರಣೋತ್ಸವ ನಿಮಿತ್ಯ ಮೂರು ದಿನಗಳ ಕಾಲ ಜರುಗಿದ ಶರಣ ಸಂಸೃತಿ ಉತ್ಸವ-2018ರ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.

    ಧಾರವಾಡದ ಮೃತ್ಯುಂಜಯಶ್ರೀಗಳು ಹಡರ್ೇಕರ ಮಂಜಪ್ಪನವರಿಗೆ ಲಿಂಗ ದೀಕ್ಷೆ ನೀಡುವಂತೆ ಅಥಣಿ ಮುರುಘೇಂದ್ರ ಶಿವಯೋಗಿಗಳನ್ನು ಕೇಳಿಕೊಂಡ ಸಂದರ್ಭದಲ್ಲಿ ಅವರೂ ಸಹ ಒಂದು ಹಂತದಲ್ಲಿ ಹಿಂದೆ ಸರಿದಿದ್ದರೂ ಆದರೆ ನೀವು ದೀಕ್ಷೆಯನ್ನು ನೀಡಲೇ ಬೇಕು ಎಂದು ಒತ್ತಾಯ ಮಾಡಿದ ಸಂದರ್ಭದಲ್ಲಿ ಹಡರ್ೇಕರ ಅವರಿಗೆ ಮಧ್ಯರಾತ್ರಿಯಲ್ಲಿ ಲಿಂಗ ದೀಕ್ಷೆಯನ್ನು ನೀಡಲಾಗಿತ್ತು ಎಂದರೆ ಹಲವು ದಶಕಗಳ ಹಿಂದೆನೇ ಈ ಮಹಾನ್ ಪುರುಷರಿಗೂ ಸಹ ಸಮಾಜವನ್ನು ಎದಿರು ಹಾಕಿಕೊಳ್ಳುವ ಧೈರ್ಯವನ್ನು ಮಾಡಿದ್ದಿಲ್ಲ ಎನ್ನುವುದು ತಿಳಿಯುತ್ತದೆ. ಆದ್ದರಿಂದ ಇಂದು ಪರಿವರ್ತನಾಪರ ಹೋರಾಟಗಳ ಅವಶ್ಯಕತೆ ಇದೆ ಎಂದರು.

      ಸ್ವಾತಂತ್ರ್ಯವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ರೀತಿಯಿಂದ ಬದುಕಬೇಕಾಗಿದೆಯೇ ಹೊರತು, ಸ್ವಾತ್ಯಂತ್ರ್ಯವನ್ನು ಸ್ವೇಚ್ಛಾಚಾರವೆಂದು ಭಾವಿಸಿ ಮನಸ್ಸಿಗೆ ತಿಳಿದಂತೆ ಬದುಕಬಾರದು ಎಂದರು.

    ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದ ಧಾರವಾಡದ ಸಾಹಿತಿ ಡಾ.ಮಲ್ಲಿಕಾಜರ್ುನ ಗುಮ್ಮಗೋಳ, ತಿಥಿ, ಮಹೂರ್ತ, ಹೋಮ, ಹವನಗಳನ್ನು ತಿರಸ್ಕರಿಸಿ ಅಮವಾಸ್ಯೆ, ಹುಣ್ಣಿಮೆ, ಗ್ರಹಣ ದಿನಗಳಂದು ಶುಭ ಕಾರ್ಯಗಳನ್ನು ಆಯೋಜಿಸುವ ಮುರುಘಾ ಶರಣರು ಮೂಲಕ ಮೌಡ್ಯಗಳನ್ನು ತೊಡೆಯುವ ಕೆಲಸ ಮಾಡಿದರು ಎಂದರು.

    ಬಸವಣ್ಣನವರ ಸಮಾನತೆ, ಸಮಾಜವಾದ ಮೌಲ್ಯಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ವಿರೋಧಿಸಿದರು.

         ಧಾಮರ್ಿಕ ಸಾಮ್ರಾಜ್ಯ ಶಾಹಿಗಳು ಧರ್ಮವನ್ನು ತುಂಡರಿಸಲು ಯತ್ನಿಸಿದರೆ ಮುರುಘಾ ಶರಣರುಧರ್ಮ ನಿರಪೇಕ್ಷತೆಯಿಂದ ಸಣ್ಣ ಪುಟ್ಟ ಧರ್ಮಗಳೆಲ್ಲವನ್ನು ಒಳಗೊಳ್ಳುವಂತೆ ಮಾಡಿದರು.  ಓದು ಧ್ಯಾನವಾದರೆ, ಬರಹಯೋಗ ಮನುಷ್ಯನ ಅಂತಃಶಕ್ತಿಯನ್ನು ಹೊರ ಹಾಕುವ ಮೂಲಕ ಧರ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸವನ್ನು ಮುರುಘಾ ಶರಣರು ಮಾಡತ್ತಿದ್ದಾರೆ ಎಂದರು.

           ಶಾಸಕ ನೆಹರು ಓಲೇಕಾರ ಮಾತನಾಡಿ, ಶಕ್ತರು ಅಶಕ್ತರನ್ನು ಅನಾದಿ ಕಾಲದಿಂದಲೂ ತುಳಿದು ಶೋಷಣೆಯನ್ನು ಮಾಡುತ್ತಾ ಬಂದಿದ್ದಾರೆ.ದಾಮರ್ಿಕ, ಸಾಹಿತ್ಯ, ರಂಗ ಕಲೆ ಸೇರಿದಂತೆಎಲ್ಲಾ ರಂಗಗಳಲ್ಲಿಯೂ ಹೋರಾಟವನ್ನು ಮಾಡಿತಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಿದೆ ಎಂದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, 12 ನೇ ಶತಮಾನದಲ್ಲಿ ಜಾತಿ ಬೇಧಎಲ್ಲವನ್ನು ಮೀರಿ ಬಸವಣ್ಣನವರು ಸಮಾನತೆತರಲು ಹೋರಾಟ ಮಾಡಿದರು.ಬಸವಣ್ಣನವರ ತತ್ವದ ಹಾದಿಯಲ್ಲಿ ಮುರುಘಾ ಶರಣರು ನಡೆಯುತ್ತಿದ್ದು, ಮೌಡ್ಯತೆಯ ವಿರುದ್ಧ ದಿಟ್ಟತನದ ಹೋರಾಟ ಪ್ರದರ್ಶನ ಮಾಡುತ್ತಾ, ಸಮಾಜಕ್ಕೆ ಸತ್ಯದದರ್ಶನ ಮಾಡಿಸುತ್ತಿದ್ದಾರೆ ಎಂದರು.

   ಸವಣೂರಿನ ದೊಡ್ಡ ಹುಣಸೆಕಲ್ಮಠದ ಚನ್ನಬಸವ ಸ್ವಾಮಿಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮಿಜಿ, ಡಾ.ಶಿಮೂಶ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಸತೀಶಕುಲಕಣರ್ಿ ಮಾತನಾಡಿದರು.