ಶರಣರ ವಚನಗಳು ಸರ್ವಕಾಲಕ್ಕೂ ದಾರೀದೀಪ - ಶಿಡ್ಲಾಪುರ
ರಾಣೇಬೆನ್ನೂರು 03: ಅಂಗದ ಮೇಲೆ ಲಿಂಗವ ಧರಿಸಿಲಿಂಗವಂತರೆನಿಸಿಕೊಂಬ ಮಹಾಲಿಂಗವಂತರು ನೀವು ಕೇಳಿರೊ.ಮನೆಗೊಂದು ದೈವ, ನಿಮಗೊಂದು ದೈವ.ನಿಮ್ಮಂಗನೆ ಅನ್ಯದೈವಕ್ಕೆಂದು ನಿಯಾಮಿಸಿ ಮಾಡಿದ ಪಾಕವ,ನಿಮ್ಮ ಇಷ್ಟಲಿಂಗಕ್ಕೆ ಕೊಟ್ಟು ಭುಂಜಿಸುತ್ತಿರ್ದು,ಮತ್ತೆ ಮರಳಿ ಲಿಂಗವಂತರೆನಿಸಿಕೊಂಬ ಲಿಂಗದ್ರೋಹಿಗಳಿಗೆಕುಂಭೀಪಾತಕ, ನಾಯಕನರಕ ತಪ್ಪದೆಂದ ಕಲಿದೇವಯ್ಯ. ಎಂಬ ಶರಣರ ವಾಣಿಯನ್ನು ಉವಾಚಿಸಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾರುತಿ ಶಿಡ್ಲಾಪುರ ಹೇಳಿದರು. ಅವರು ಇಲ್ಲಿನ ನಾಗ ಶಾಂತಿ ಕಾಲೇಜು ಭಾವನದಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ,ಶರಣ ಮಡಿವಾಳ ಮಾಚಿದೇವರ ಜಯಂತೋತ್ಸವ ದಲ್ಲಿ ಪಾಲ್ಗೊಂಡು ಮಾತನಾಡಿದರು. ಅಂದಿನ ಶರಣರು ಹಾಕಿಕೊಟ್ಟ ಸರ್ವ ಸಮಾನತೆಯ ಜೀವನ ಬದುಕು ನಮ್ಮದಾಗ ಬೇಕಾಗಿದೆ ಅದಕ್ಕೆ ಅಂದು ಶರಣರ ಜೀವನ ನಮಗೆ ಅನುಕರಣಿಯ. ದಾರೀದೀಪಗಳಾಗಿವೆ, ನುಡಿದಂತೆ ನಡೆದು ನಮ್ಮ ಜೀವನಕ್ಕೆ ಸಾಕ್ಷಿಯಾಗಿದ್ದಾರೆ. ಎಂದರು. ಶರಣ ಮಡಿವಾಳ ಮಾಚಿದೇವರು ರಚಿಸಿದ ವಚನಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ ನಡೆ ಮತ್ತು ನುಡಿ ಒಂದಾದಾಗ ಸಮಾನತೆಯ ಬದುಕು ನಮ್ಮದಾಗುತ್ತದೆ ಎಂದರು.
ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜೇಶ್ವರಿ ಪಾಟೀಲ್, ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎಸ್. ಕೆ. ನೆಸ್ವಿ, ಕದಳಿ ವೇದಿಕೆಯ ಅಧ್ಯಕ್ಷ ಗಾಯತ್ರಮ್ಮ ಕುರುವತ್ತಿ, ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ , ಕಸಾಪ ತಾಲೂಕ ಅಧ್ಯಕ್ಷ ಪ್ರಭಾಕರ ಶಿಗ್ಲಿ , ಗೌರವ ಕಾರ್ಯದರ್ಶಿ ಜಗದೀಶ ಮಳಿಮಠ , ನಿರ್ಮಲ ದ್ಯಾವಳಗಿ, ವಿದ್ಯಾವತಿ ಮಳಿಮಠ, ವೀಣಾ ಸೂರಣಗಿ, ಪೂರ್ಣಿಮಾ ಬೆನ್ನೂರ, ನಾಗರತ್ನ ಗುಡಿಹಳ್ಳಿ, ದಾನಮ್ಮ ಪಾಟೀಲ, ಲೀಲಾ ಪಟ್ಟಣಶೆಟ್ಟಿ, ಪ್ರೇಮ ಬಾರಿಗಿಡದ, ಜಿ.ಸುಂದ್ರಾ ರಾಮಚಂದ್ರ, ಮಲ್ಲಿಕಾರ್ಜುನ ಸಾವಕ್ಕಳವರ,ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.