ಶಾರದಾ ಚಿಟ್ ಫಂಡ್: ರಾಜೀವ್ ಕುಮಾರ ಕಸ್ಟಡಿ ವಿಚಾರಣೆಯ ಅಗತ್ಯ ಪ್ರಶ್ನಿಸಿದ ಸುಪ್ರೀಂಕೋರ್ಟ್


ನವದೆಹಲಿ, ಏ 30  ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಕೋಲ್ಕತ್ತಾ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ಕಸ್ಟಡಿ ವಿಚಾರಣೆಯ ಅಗತ್ಯವೇನು ಎಂದು ಸುಪ್ರೀಂಕೋರ್ಟ್  ಪ್ರಶ್ನಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್  ಗೊಗೋಯ್ ಅವರ ನೇತೃತ್ವದ ಮೂವರುನ್ಯಾಯಮೂರ್ತಿಗಳ ಪೀಠ, ಕುಮಾರ್ ಅವರ ಕಸ್ಟಡಿ ವಿಚಾರಣೆ ಅಗತ್ಯ ಇರುವುದಕ್ಕೆ ಸಂಬಂಧಿಸಿದ ದಾಖಲೆ ಒದಗಿಸಿ ಎಂದು ಸಿಬಿಐಗೆ ಸೂಚಿಸಿದೆ. ಸಾಲಿಸಿಟರ್ ಜನರಲ್ ತಶೂರ್ ಮೆಹ್ತಾ ಅವರು ದಾಖಲೆ ಒದಗಿಸಲು ನಾಳೆಯವರೆಗೆ ಸಮಯಾವಕಾಶ ನೀಡುವಂತೆ ಕೋರಿದರು. ವಿಚಾರಣೆಯನ್ನು ನಾಳೆಗೆ ಮುಂದೂಡಲಾಯಿತು. ಕಳೆದ ವಾರ, ರಾಜೀವ್ ಕುಮಾರ್ ಅವರು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿ, ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಸಿಬಿಐನೊಂದಿಗೆ ವಿಚಾರಣೆಗೆ ಸಹಕರಿಸುತ್ತಿದ್ದು, ಹೀಗಿರುವಾಗ ಕಸ್ಟಡಿ ವಿಚಾರಣೆಯ ಅಗತ್ಯವಿಲ್ಲ ಎಂದು ತಿಳಿಸಿದ್ದರು.