ಛತ್ರಪತಿ ಶಿವಾಜಿ ಮಹಾರಾಜರ ಕುರಿತ ಕವನ ಸ್ಪರ್ಧೆಯಲ್ಲಿ ಶಂಕರ ಪಾಗೋಜಿಗೆ ಪ್ರಥಮ ಬಹುಮಾನ

ಛತ್ರಪತಿ ಶಿವಾಜಿ ಮಹಾರಾಜರ ಕುರಿತ ಕವನ ಸ್ಪರ್ಧೆಯಲ್ಲಿ ಶಂಕರ ಪಾಗೋಜಿಗೆ ಪ್ರಥಮ ಬಹುಮಾನ Shankar Pagoji wins first prize in poetry competition on Chhatrapati Shivaji Maharaj

         ಧಾರವಾಡ 20:  ಛತ್ರಪತಿ ಶಿವಾಜಿ ಮಹಾರಾಜರ 399 ನೇ ಜಯಂತಿ ಹಿನ್ನೆಲೆಯಲ್ಲಿ ಧಾರವಾಡದ ಗಣಕ ರಂಗ ಸಂಸ್ಥೆ ಏರಿ​‍್ಡಸಿದ್ದ ಕಥಾ ಕವನ ಸ್ಪರ್ಧೆಯಲ್ಲಿ ಹಿರಿಯ ಪತ್ರಕರ್ತ ಶಂಕರ ಪಾಗೋಜಿ ಅವರ  ಕರುನಾಡ ಶಿವರಾಯ ಕವನಕ್ಕೆ ಪ್ರಥಮ ಬಹುಮಾನ ದೊರೆತಿದೆ ಎಂದು ಗಣಕರಂಗ ಸ್ಪರ್ಧಾ ಸಮಿತಿ ಅಧ್ಯಕ್ಷ ಸಿದ್ದರಾಮ ಹಿಪ್ಪರಗಿ ತಿಳಿಸಿದ್ದಾರೆ.  ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಗಣಕರಂಗ ಸಂಸ್ಥೆಯ ಕರ್ನಾಟಕದೊಂದಿಗೆ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಮರಾಠರ ಸೌಹಾರ್ದ ಸಂಬಂಧದ ಕುರಿತು ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಕರ್ನಾಟಕ ಎಂಬ ವಿಷಯದ ಮೇಲೆ ಕಥನ ಕವನ ಸ್ಪರ್ಧೆಯನ್ನು ಗೂಗಲ್ ಮೀಟ್ ಮೂಲಕ ಶಿವಾಜಿ ಜಯಂತಿ ದಿನ (ಪೆ-19) ಏರಿ​‍್ಡಸಲಾಗಿತ್ತು.  ರಾಜ್ಯದ ವಿವಿಧ ಭಾಗಗಳಿಂದ ಕವನ ಸ್ಪರ್ಧೆಗೆ 34 ಕವಿಗಳು ಪಾಲ್ಗೊಂಡು ಕವನ ವಾಚನ ಮಾಡಿದರು.

         ಕಥಾ ಕವನ ಸ್ಪರ್ಧೆಯ ತೀಪುಗಾರರಾಗಿ ಡಾ. ಹನುಮಾಕ್ಷಿ ಗೋಗಿ, ವೈ.ಜಿ ಭಗವತಿಯವರು ಪಾಲ್ಗೊಂಡು, ಸ್ಪರ್ಧಾ ವಿಜೇತರನ್ನು ಆಯ್ಕೆ ಮಾಡಿದ್ದಾರೆ. ಹಿರಿಯ ಪತ್ರಕರ್ತ ಶಂಕರ ಪಾಗೋಜಿ ಅವರ ಕರುನಾಡ ಶಿವರಾಯ ಕವನ ಪ್ರಥಮ ಸ್ಥಾನ ಪಡೆದಿದ್ದು, ದ್ವಿತಿಯ ಬಹುಮಾನವನ್ನು ಉತ್ತೂರಿನ ಡಾ. ವೆಂಕಟೇಶ್ ಗುಡೆಪ್ಪನವರ್, ತೃತಿಯ ಬಹುಮಾನವನ್ನು ಧಾರವಾಡದ ಅಶೋಕ ಹೊನಕೇರಿ ಪಡೆದುಕೊಂಡಿದ್ದಾರೆ. ಮೂವರು ವಿಜೇತರಿಗೆ ನಗದು ಬಹುಮಾನ ಪುಸ್ತಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದ್ಧಾರೆ.  ಇದೇ ಸಂದರ್ಭದಲ್ಲಿ ತೀಪುಗಾರರ ಮೆಚ್ಚುಗೆ ಪಡೆದ ಏಳು ಜನ ಕವಿಗಳು ಬಾಗಲಕೋಟೆಯ ಶಂಕ್ರಮ್ಮ ಗಾಡದ, ಕೊಡಗಿನ ಚರಿತ್ರ ಎಂ.ಆರ್‌., ಹುಬ್ಬಳ್ಲೀಯ ಧನಲಕ್ಷ್ಮೀ ಎ.ಆರ್, ಸಂಕ್ಲಾಪುರದ ಜಿ.ಯರಿಸ್ವಾಮಿ, ವಿಜಯನಗರದ ಪಂಡಿತ ಚಂದ್ರಕಾಂತ ಇನಾಮದಾರ, ದಾಂಡೇಲಿಯ ಆನಂದ ಬಿ.ಎನ್‌., ಕಂಕಣವಾಡಿಯ ಪ್ರೀತಿ ಹನುಮಂತ ಕಂಬಾರ ಅವರು ಭಾಜನರಾಗಿದ್ದಾರೆ. ಅವರಿಗೆ ಪುಸ್ತಕ, ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು ಎಂದು ತಿಳಿಸಿದ್ದಾರೆ.