ಶಬ್ದ ಗಾರುಡಿಗ ಬೇಂದ್ರೆ ಸಾಹಿತ್ಯ ಬರಹದಲ್ಲಿ ಜೀವನ ಮೌಲ್ಯಗಳಡಗಿವೆ: ಸಚಿವ ತಿಮ್ಮಾಪೂರ

Shabda Garudiga Bendre's literary writings contain life values: Minister Thimmapur

ಶಬ್ದ ಗಾರುಡಿಗ ಬೇಂದ್ರೆ ಸಾಹಿತ್ಯ ಬರಹದಲ್ಲಿ ಜೀವನ ಮೌಲ್ಯಗಳಡಗಿವೆ: ಸಚಿವ ತಿಮ್ಮಾಪೂರ 

ರನ್ನ ಬೆಳಗಲಿ 11: ಶಬ್ದ ಗಾರುಡಿಗ ಬೇಂದ್ರೆ ನೀಡಿದ, ಸಾಹಿತ್ಯ ಬರಹದಲ್ಲಿ ಜೀವನ ಮೌಲ್ಯಗಳು ಅಡಗಿವೆ ಅವರ ಬದುಕೆ ಒಂದು ಸ್ಪೂರ್ತಿದಾಯಕ ಮೈಲುಗಳನ್ನು  ಒಳಗೊಂಡಿದೆ ಎಂದು ಹೇಳುವುದರ ಜೊತೆಗೆ ಸಹೃದಯದ ಮಹಿಳೆಯರೇ ಸೇರಿ ಕಟ್ಟಿಕೊಂಡ ಸಪ್ತ ಸ್ವರ ಸಂಗೀತ ನೃತ್ಯ ಸಾಂಸ್ಕೃತಿಕ ಸಂಸ್ಥೆಯು ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ, ಜಾನಪದ ಸಾಹಿತ್ಯ, ಕಲೆಯನ್ನು ಪೋಷಣೆ ಮಾಡುತ್ತಿದೆ ಎಂದು ಅಬಕಾರಿ ಸಚಿವ ಆರಿ​‍್ಬ. ತಿಮ್ಮಾಪೂರ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.  

ನಗರದ ರನ್ನ ಸಾಂಸ್ಕೃತಿಕ ಭವನದಲ್ಲಿ ಶನಿವಾರದಂದು ಸಾಯಂಕಾಲ ಸಪ್ತ ಸ್ವರ ಸಂಗೀತ ನೃತ್ಯ ಸಾಂಸ್ಕೃತಿಕ ಸಂಸ್ಥೆ ಹಾಗೂ ಧಾರವಾಡದ ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಬೇಂದ್ರೆ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬೇಂದ್ರೆ ಕಾರ್ಯಕ್ರಮಕ್ಕೆ ಐವತ್ತು ಸಾವಿರ ರೂ. ನೀಡಿದ್ದೇನೆ. ಸಂಸ್ಥೆಗೆ ಉಚಿತವಾಗಿ ಜಾಗ ನೀಡಿ ಅದರ ಸೇವೆ ಎಲ್ಲೆಡೆ ಪಸರಿಸುವ ಕಾರ್ಯಕ್ಕೆ ಅಳಿಲು ಸೇವೆ ಮಾಡುವೆ ಎಂದು ಭರವಸೆ ನೀಡಿದರು. 

ಸಾಹಿತಿ ಡಾ.ಸಂಗಮನಾಥ ಲೋಕಾಪುರ ಮಾತನಾಡಿ ಬೇಂದ್ರೆ ಭಾವುಕ ಮನಸ್ಸಿನ, ಮಾನವೀಯ ಮೌಲ್ಯ ಹೊಂದಿದ ಕವಿ. ಹದಿನಾಲ್ಕು ನಾಟಕ ಬರೆದಿದ್ದು, ಜನರ ಬದುಕನ್ನು ನೈಜವಾಗಿ ಚಿತ್ರಿಸಿದ್ದಾರೆ. ಬೇಂದ್ರೆ ಅವರ ನಾಟಕ ಸಾಹಿತ್ಯವನ್ನು ಹೆಚ್ಚಾಗಿ ಪ್ರಚಾರ ಮಾಡುವ ಅಗತ್ಯ ಇದೆ. ಈ ಕುರಿತು ಬೇಂದ್ರೆ ವೇದಿಕೆ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕು. ಬೇಂದ್ರೆ ಅವರು ಸಾಹಿತ್ಯದ ವಿವಿಧ ಮಜಲುಗಳಲ್ಲಿ ಕೃಷಿ ಮಾಡಿದ್ದರೂ ಅವರು ಪ್ರಸಿದ್ಧಿಗೆ ಬಂದಿದ್ದು ಕಾವ್ಯಗಳಿಂದ ಅವರ ಕವಿತೆಗಳಲ್ಲಿನ ಜಾನಪದ ಶೈಲಿ ಅವರನ್ನು ಉತ್ತುಂಗಕ್ಕೆ ಏರಿಸಿತು ಎಂದರು. 

 ಸಂಸ್ಥೆ ಅಧ್ಯಕ್ಷೆ ಜ್ಯೋತಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುತ್ತ ಸಪ್ತ ಸ್ವರ ಸಂಗೀತ ನೃತ್ಯ ಸಾಂಸ್ಕೃತಿಕ ಸಂಸ್ಥೆಯು ನಡೆದು ಬಂದ ಪ್ರಮುಖ ಘಟ್ಟಗಳ ಕುರಿತು ಮಾತನಾಡುತ್ತಾ ಭಾರತೀಯ ಸಂಸ್ಕೃತಿ ಆಚಾರ, ವಿಚಾರ, ಸಂಪ್ರದಾಯ, ನಾಡು ನುಡಿಯ  ಬಗ್ಗೆ, ಅತೀವವಾದ ಆಸಕ್ತಿ ಉಳ್ಳ ನಮ್ಮ ಸಂಘವು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತ ಮುಂದುವರೆದು ಬರುತ್ತಿದೆ ಎಂದು ತಿಳಿಸಿದರು. 

ದ ರಾ ಬೇಂದ್ರೆ ಅವರನ್ನೇ ಹೋಲುವ ಅನಂತ ದೇಶಪಾಂಡೆ ಬೇಂದ್ರೆಯವರ ಜನಪ್ರಿಯ ಕವಿತೆಗಳನ್ನು ಗಾಯನ ಮಾಡುತ್ತಾ, ಪ್ರಮುಖ ಬೇಂದ್ರೆ ಜೀವನದ ಘಟನಾವಳಿಗಳನ್ನು ಬೇಂದ್ರೆಯವರೇ ಬಂದು ಮಾತನಾಡಿದ ಹಾಗೆ ದರ್ಶನ ಮಾಡಿಸಿದರು. ಕಲಾವಿದರಾದ ನಾಗರಾಜ ಪತ್ತಾರ ಹಾಗೂ ಬಸವರಾಜ ಕಲೆಗಾರ ತಮ್ಮ ಕಲೆಯನ್ನು ಬೇಂದ್ರೆಯವರ ಭಾವಚಿತ್ರದ ರೇಖಾಚಿತ್ರವನ್ನು ಬಿಡಿಸುವ ಮೂಲಕ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. 

ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಡಾ.ಡಿ.ಎಂ. ಹಿರೇಮಠ, ಮಲ್ಲಿಕಾರ್ಜುನ ಸೋಲಗಿ ಕಲಾವಿದರಾದ ಅನಂತ ದೇಶಪಾಂಡೆ, ನಾಗರತ್ನ ಹಡಗಲಿ, ಗಂಗಾಧರ ಗಾಣಿಗೇರ, ಕಲ್ಲಪಣ್ಣ ಸಬರದ, ಡಾ. ಶಿವಾನಂದ ಕುಬಸದ, ಎಂ.ಜಿ.ದಾಸರ, ಪ್ರಕಾಶ ವಸ್ತ್ರದ, ಚಂದ್ರಶೇಖರ ದೇಸಾಯಿ, ಸಂಗಮೇಶ ನೀಲಗುಂದ, ಆನಂದ ಪೂಜಾರಿ, ಪ್ರವೀಣ ಗಂಗಣ್ಣವರ, ಪ್ರಕಾಶ ಬೆಳಗಲಿ, ಎಸ್‌.ಕೆ. ಸತ್ತಿಗೇರಿ, ಬಸವರಾಜ ಬಳ್ಳಾರಿ, ಸದುಗೌಡ ಪಾಟೀಲ, ಮುದಕಣ್ಣ ಅಂಬಿಗೇರ, ಶ್ರವಣ ಸೊಕನಾದಗಿ, ಗುರುನಾಥ ಬೇವಿನಗಿಡದ ,ನಾಗರಾಜ ಬಟಾಟೆಪ್ಪಗೋಳ, ಮಹೇಶ ದಿವಾನ, ರಾಘವೇಂದ್ರ ನೀಲಣ್ಣವರ ಇದ್ದರು. ಶ್ರೀಶೈಲ ಹುನ್ನೂರ ನಿರೂಪಿಸಿದರು. ಅನಿತಾ ಪಾಟೀಲ ಸಾಹಿತಿ ಸ್ವಾಗತಿಸಿ ವಂದಿಸಿದರು.