ನವದೆಹಲಿ, ಮೇ 6- ಸುಪ್ರೀಂ ಕೋರ್ಟ್ ಮಾಜಿ ಮಹಿಳಾ ಸಿಬ್ಬಂದಿಯೊಬ್ಬರು, ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಅವರ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳ ಆರೋಪದಲ್ಲಿ ಯಾವುದೇ ಸಾಕ್ಷ್ಯಾಧಾರ ಗಳಿಲ್ಲ ಎಂದು ನ್ಯಾಯಮೂರ್ತಿ ಎಸ್ .ಎ. ಬೊಬ್ಡೆ ನೇತೃತ್ವದ ಮೂವರು ಸದಸ್ಯರ ಆಂತರಿಕ ವಿಚಾರಣಾ ಸಮಿತಿ ವರದಿ ಸಲ್ಲಿಸುವ ಮೂಲಕ ಸಿಜೆಐ ಗೋಗೊಯ್ ಅವರನ್ನು ದೋಷಮುಕ್ತಗೊಳಿಸಿದೆ.
ಸುಪ್ರೀಂ ಕೋರ್ಟ್ ನ ಮಾಜಿ ಮಹಿಳಾ ಸಿಬ್ಬಂದಿ ನೀಡಿದ್ದ ದೂರನ್ನು ವಜಾಗೊಳಿಸಿರುವ ಅಂತರಿಕ ವಿಚಾರಣಾ ಸಮಿತಿ, ಆರೋಪಗಳನ್ನು ರುಜುವಾತುಪಡಿಸುವಂತಹ ಯಾವುದೇ ಅಂಶಗಳು ತನಿಖೆಯಲ್ಲಿ ಕಂಡುಬರಲಿಲ್ಲ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಕೆಲವು ದಿನಗಳ ಹಿಂದೆ ಸಿಜೆಐ ಗೋಗೋಯ್ ವಿರುದ್ದ ಮಾಜಿ ಮಹಿಳಾ ಸಿಬ್ಬಂದಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಆದರೆ, ಸಿಜೆಐ ಈ ಆರೋಪವನ್ನು ತಿರಸ್ಕರಿಸಿದ್ದರು. ಆದರೂ ನ್ಯಾಯಾಂಗ ಘನತೆ, ಪ್ರತಿಷ್ಟೆಯನ್ನು ಎತ್ತಿಹಿಡಿಯಲು ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಮೂವರು ನ್ಯಾಯಮೂರ್ತಿ ಗಳ ಅಂತರಿಕ ಸಮಿತಿಯ ಮೂಲಕ ಆರೋಪದ ಬಗ್ಗೆ ತನಿಖೆಗೆ ಆದೇಶಿಸಿದ್ದರು. ತನಿಖೆ ಪೂರ್ಣಗೊಳಿಸಿದ ಸಮಿತಿ ಮುಖ್ಯನ್ಯಾಯಮೂತರ್ಿಗಳ ವಿರುದ್ಧ ಆರೋಪಗಳಿಗೆ ಯಾವುದೇ ಸಾಕ್ಷ್ಯಧಾರಗಳಿಲ್ಲ ಎಂದು ಅವರನ್ನು ಆರೋಪದಿಂದ ಖುಲಾಸೆಗೊಳಿಸಿದೆ