ಮಹಿಳೆಯರ ಸ್ವಾಲಂಬಿ ಬದುಕಿಗೆ ಹೊಲಿಗೆ ಯಂತ್ರ ಮಷೀನ್ ವಿತರಣೆ

Sewing machines distributed for women's self-reliance

ಮಹಿಳೆಯರ ಸ್ವಾಲಂಬಿ ಬದುಕಿಗೆ ಹೊಲಿಗೆ ಯಂತ್ರ ಮಷೀನ್ ವಿತರಣೆ  

ಕೊಪ್ಪಳ 11:  ಮಹಿಳೆಯರ ಆರ್ಥಿಕವಾಗಿ ಸ್ವಾಲಂಬಿ ಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂಬ ಸದುದ್ದೇಶದಿಂದ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ಮಷೀನ್  ವಿತರಣೆ ಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಇನ್ನರ್ ವೀಲ್ ಕ್ಲಬ್ ಚೇರ್ಮನ್ ರಾದ ಸುಷ್ಮಾ ಪತಂಗೆ ಹೇಳಿದರು, ಅವರು ಕೊಪ್ಪಳ ಇನ್ನರ್ ವೀಲ್ ಕ್ಲಬ್ ವತಿಯಿಂದ ಏರಿ​‍್ಡಸಿದ ಬಡ ಮಹಿಳೆಯರ ಸ್ವಾಲಂಬಿ ಬದುಕಿಗಾಗಿ ಹೊಲಿಗೆ ಯಂತ್ರ ಮಷೀನ್ ವಿತರಣೆ ಸಮಾರಂಭ ದ ಉದ್ಘಾಟನೆಯನ್ನು ಮಹಿಳೆಯರಿಗೆ ಹೊಲಿಗೆ ಯಂತ್ರ ಮಷೀನ್ ವಿತರಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ರವರು ತಮ್ಮ ವೈಯಕ್ತಿಕ ಸ್ವಂತ ಹಣದಿಂದ 10 ಮಷೀನು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ನೀತಾ ತಂಬ್ರಳ್ಳಿ ರವರು ಒಂದು ಮಷೀನ್ ಅನ್ನು ದೇಣಿಗೆಯಾಗಿ ಬಡ ಮಹಿಳೆಯರಿಗೆ ನೀಡಿರುವ ಈ ಸಮಾಜ ಸೇವಾ ಕಾರ್ಯ ಅತ್ಯಂತ ಮೆಚ್ಚುಗೆ ಯ ಕೆಲಸವಾಗಿದೆ ಎಂದು ಜಿಲ್ಲಾ ಚೇರ್ಮೆನ್ ಸುಷ್ಮಾ, ಪತಂಗೆ ಹೇಳಿದರು, ಹೊಲಿಗೆ ಯಂತ್ರ ಮಷೀನ್ ವಿತರಣೆ ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ಇನ್ನರ್ವಿಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ವಹಿಸಿದ್ದರು, ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ಬಿನ ಉಪಾಧ್ಯಕ್ಷರಾದ ಮಧು ಶೆಟ್ಟರ್, ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ, ಖಜಾಂಚಿ ಆಶಾ ಕೌಲೂರ್ ,ಐ ಎಸ್ ಓ ಮಧು ನಿಲೋಗಲ್ ,ಎಡಿಟರ್ ನಾಗವೇಣಿ ಗರುರ್ ,ಸೇರಿದಂತೆ ಹಿರಿಯ ಸದಸ್ಯರಾದ ಡಾ, ರಾಧಾ ಕುಲಕರ್ಣಿ ಮತ್ತು ನೀತಾ ತಂಬ್ರಳ್ಳಿ, ಸುಜಾತ ಪಟ್ಟಣಶೆಟ್ಟಿ, ತ್ರಿಶಾಲಾ ಪಾಟೀಲ್, ಪದ್ಮ ಜೈನ್, ಪಾರ್ವತಿ ಪಾಟೀಲ್ ಸೇರಿದಂತೆ ಇತರ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.