ಪುಣ್ಯಕ್ಷೇತ್ರ ಸವದತ್ತಿಯಲ್ಲಿ ಸೇವಿ ಸಲ್ಲಿಸುವುದೇ ಒಂದು ಭಾಗ್ಯ: ಪಿಐ ಧರ್ಮಟ್ಟಿ
Serving in the holy field is a privilege: PI Dharmatti
ಸವದತ್ತಿ 23: ಸವದತ್ತಿ ಕ್ಷೇತ್ರ ಬಹಳ ಪವಿತ್ರವಾದ ಪುಣ್ಯಕ್ಷೇತ್ರ ಸರ್ಕಾರಿ ನೌಕರರಿಗೆ ಅಷ್ಟೇ ಅಲ್ಲ ಎಲ್ಲರಿಗೂ ಕೂಡ ಬಹಳ ಪವಿತ್ರವಾದ ಕ್ಷೇತ್ರ ಇಂತಹ ಪವಿತ್ರದಲ್ಲಿ ಸರ್ಕಾರಿ ನೌಕರಿ ಮಾಡುವುದರೊಂದಿಗೆ ದೇವಿಯರ ಸೇವೆ ಸಲ್ಲಿಸುವುದು ಕೂಡ ಬಹಳ ಮುಖ್ಯವಾದ ಕೆಲಸವಾಗಿದೆ ಸವದತ್ತಿ ಯಲ್ಲಮ್ಮ ಶಿರಸಂಗಿ ಕಾಳಿಕಾದೇವಿಯ ದೇವಸ್ಥಾನ, ಮುನವಳ್ಳಿಯ ಪಂಚಲಿಂಗೇಶ್ವರ ದೇವಸ್ಥಾನ, ಸೇರಿದಂತೆ ಬಹಳಷ್ಟು ಐತಿಹಾಸಿಕ ದೇವಸ್ಥಾನಗಳನ್ನು ಹೊಂದಿರುವ ತಾಲೂಕು ಇಂತಹ ಪುಣ್ಯ ಕ್ಷೇತ್ರ ಸವದತ್ತಿಯಲ್ಲಿ ಸೇವಿ ಸಲ್ಲಿಸುವುದೇ ಒಂದು ಭಾಗ್ಯ ಎಂದು ಸವದತ್ತಿ ಪೊಲೀಸ್ ಠಾಣೆಯ ಪಿಐ ಧರ್ಮಾಕರ ಧರ್ಮಟ್ಟಿ ಹೇಳಿದರು.
ಸವದತ್ತಿ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಕಾರಣ ಅವರಿಗೆ ಗುರುಭವನದಲ್ಲಿ ಪೋಲಿಸ್ ಇಲಾಖೆಯ ವತಿಯಿಂದ ಆಯೋಜಿಸಿದ ಬೀಳ್ಕೊಡುವ ಹಾಗೂ ಅಭಿನಂದನ ಸಮಾರಂಭದಲ್ಲಿ ಪೊಲೀಸ್ ಇಲಾಖೆಯ ಮತ್ತು ಸಾರ್ವಜನಿಕರ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸವದತ್ತಿ ತಾಲೂಕಿನ ಜನತೆ ಬಹಳಷ್ಟು ಮುಗ್ಧವಾದ ಜನತೆ ಸರ್ಕಾರಿ ನೌಕರರಿಗೆ ಗೌರವ ಕೊಡುವ ಮತ್ತು ಶಾಂತಿ ಸುವ್ಯವಸ್ಥೆಗೆ ಹೆಸರುವಾಸಿಯಾದ ತಾಲೂಕು ಎರಡು ವರ್ಷಗಳ ಅವಧಿಯಲ್ಲಿ ಉತ್ತಮವಾಗಿ ಸೇವಿಸಲಿಸಬೇಕಾದರೆ ಅದಕ್ಕೆ ನಮ್ಮ ಪೊಲೀಸ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನನಗೆ ಸಹಕಾರ ನೀಡಿದ್ದಕ್ಕಾಗಿ ನಾನು ಉತ್ತಮವಾಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು ಮತ್ತು ತಾಲೂಕಾ ಮಟ್ಟದ ಎಲ್ಲಾ ಅಧಿಕಾರಿಗಳು ನನಗೆ ಎರಡು ವರ್ಷಗಳ ಕಾಲ ಸಹಕಾರ ನೀಡಿದರು.
ಸವದತ್ತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 65 ಗ್ರಾಮಗಳು ನವಿಲು ತೀರ್ಥ ಡ್ಯಾಮ್ 2 ಓಪಿ ಗಳು ಹೊಂದಿರುವ ಅತಿ ದೊಡ್ಡ ಠಾಣೆಯಾಗಿದ್ದು ನಮಗೆ ದಿನದ 24 ಗಂಟೆಗಳ ಕಾಲ ಕೆಲಸ ಮಾಡಿದರು ಕೂಡ ಬೇಸರ ಎಂಬುದು ಆಗುತ್ತಿರಲಿಲ್ಲ ಎಂದು ಮಾತನಾಡಿದರು. ನಂತರ ಸವದತ್ತಿ ಪಟ್ಟಣದ ಹಾಗೂ ತಾಲೂಕಿನ ಸಾರ್ವಜನಿಕರು, ಮತ್ತು ಕರವೇ, ಮತ್ತು ಸಂಘ ಸಂಸ್ಥೆಗಳ, ವತಿಯಿಂದ ಧರ್ಮಾಕರ್ ಧರ್ಮಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಿ ಬಿಳ್ಕೊಟ್ಟರು. ನಂತರ ಸವದತ್ತಿ ಪೊಲೀಸ್ ಠಾಣೆಗೆ ಪಿಐ ಆಗಮಿಸಿದ ಸುರೇಶ್ ಬೆಂಡೆಗುಂಬಳ ಅವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸವದತ್ತಿ ಪೊಲೀಸ್ ಠಾಣೆ ನೂತನ ಪಿಐ ಸುರೇಶ್ ಗಂಡೆಗುಂಬಳ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಪರಾಧ ವಿಭಾಗದ ಪಿಎಸ್‌ಐ ಲಕ್ಷ್ಮಣ ಗೌಡಿ, ಮಂಜುನಾಥ ನಡುವಿನಮನಿ, ವೆಂಕಟೇಶ ಮೇಟಿ, ಉದ್ದಪ್ಪ ಪೂಜೇರ, ಮೋಹನ ಪಾಟೀಲ್, ಯಲ್ಲಪ್ಪ ಅಜ್ಜನವರ, ಶಿವಾನಂದ ಕೊರ್ಪಕೊಪ್ಪ, ಉಮೇಶ ಗಾಣಗಿ, ಸವಿತಾ ಹೊಸೂರ, ಎಫ್. ವೈ.ಗಾಜಿ, ಕೆ.ಕೆ.ಪುಣೇದ, ಶ್ರೀಧರ ಆಸಂಗಿಹಾಳ, ಮಕ್ತುಮಹುಸೇನ ತಹಶೀಲ್ದಾರ, ಗೆದಿಗ್ಯಪ್ಪ ಕುರಿ, ಶಿವಕುಮಾರ್ ರಾಠೋಡ್, ಮತ್ತು ಯುವಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 