ಕೊಳಗೇರಿ ಪ್ರದೇಶಗಳ ಅಭಿವೃಧ್ದಿಗೆ ನಗರಸಭೆ ಬಜೇಟನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು-ಇಮ್ತಿಯಾಜ ಮಾನ್ವಿ

ಕೊಳಗೇರಿ ಪ್ರದೇಶಗಳ ಅಭಿವೃಧ್ದಿಗೆ ನಗರಸಭೆ ಬಜೇಟನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು-ಇಮ್ತಿಯಾಜ ಮಾನ್ವಿ Separate funds should be allocated in the municipal budget for the development of slum areas - Imti

              ಗದಗ 12:  ಗದಗ-ಬೆಟಗೇರಿ ನಗರದ ಕೊಳಚೆ ಪ್ರದೇಶಗಳಲ್ಲಿ ಯಾವುದೇ ನಾಗರೀಕ ಸೌಲಭ್ಯಗಳು ಇಲ್ಲದೇ ಸ್ಥಳೀಯ ಸ್ಲಂ ನಿವಾಸಿಗಳು ಪ್ರತಿನಿತ್ಯ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ, ನಗರದ ಶೇ:90ರಷ್ಟು ಕೊಳಗೇರಿ ಜನರು ನಗರಸಭೆಗೆ ತಮ್ಮ ಆಸ್ತಿ ತೆರಿಗೆಯನ್ನು ಕಟ್ಟುತ್ತಾರೆ, ಆದರೆ ನಗರಸಭೆಯಿಂದ ಸ್ಲಂ ಪ್ರದೇಶಗಳ ಅಭಿವೃಧ್ದಿ ಮಾಡುವಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ, ಕಾರಣ ಈ ಬಾರಿ 2026-27 ಸಾಲಿನ ಬಜೇಟನಲ್ಲಿ ಗದಗ-ಬೆಟಗೇರಿ ಅವಳಿ ನಗರದ ಕೊಳಗೇರಿ ಪ್ರದೇಶಗಳ ಅಭಿವೃಧ್ದಿಗಾಗಿ ಪ್ರತ್ಯೇಕ ಅನುದಾನ ಮೀಸಲಿಡಬೇಕೆಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್‌.ಮಾನ್ವಿ ಒತ್ತಾಯಿಸಿದರು,

               ಅವರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆದ ನರಗಸಭೆಯ 2026-27 ಸಾಲಿನ ಬಜೇಟ್ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಬಜೇಟ ಪೂರ್ವಭಾವಿ ಸಭೆಯನ್ನು ಕರೆಯಲಾಗುತ್ತದೆ. ಸಭೆಯಲ್ಲಿ ಸಂಘ-ಸಂಸ್ಥೆಗಳ ಮುಖಂಡರು ನಗರದ ಅಭಿವೃಧ್ದಿಗಾಗಿ, ವಾರ್ಡಿನ ಅಭಿವೃಧ್ದಿಗಾಗಿ ನೀಡುವ ಸಲಹೆಗಳಿಗೆ ಆದ್ಯತೆ ನೀಡಬೇಕು. ಕೇವಲ ಕಾಟಾಚಾರಕ್ಕಾಗಿ ಬಜೇಟ್ ಪೂರ್ವಭಾವಿ ಸಭೆ ಆಗಬಾರದು. ಸರ್ವಾಂಗಿಣ ನಗರದ ಅಭಿವೃಧ್ದಿಗಾಗಿ ಬಜೇಟನಲ್ಲಿ ಆದ್ಯತೆ ನೀಡಬೇಕು, ಕೊಳಗೇರಿ ಪ್ರದೇಶಗಳ ಜನರ ಜ್ವಾಲಂತ ಸಮಸ್ಯಗಳಾದ ರಸ್ತೆ, ಚರಂಡಿ, ಶೌಚಾಲಯ ಹಾಗೂ ಕುಡಿಯುವ ನೀರಿನ ಫರ್ಯಾಯ ವ್ಯವಸ್ಥೆಗಾಗಿ ಅನುದಾನ ಮೀಸಲಿಡಬೇಕು. ನಗರಸಭೆಗೆ ಸ್ವಚ್ಚ್‌ ಭಾರತ ಯೋಜನೆಯಲ್ಲಿ ಪ್ರತ್ಯೇಕ ಶೌಚಾಲಯಕ್ಕಾಗಿ ಕೊಟ್ಯಾಂತರ ಅನುದಾನ ಮಂಜೂರಾಗಿದೆ,

               ಆದರೆ ನಿಜವಾದ ಫಲಾನುಭವಿಗಳಿಗೆ ಈ ಯೋಜನೆ ನೀಡದೇ ಇರುವುದ್ದರಿಂದ ಇವತ್ತು ನಗರದ ಅನೇಕ ಪ್ರದೇಶಗಳಲ್ಲಿ ಬೈಯಲು ಶೌಚಾಲಾಯವನ್ನು ಅವಲಂಬಿತರಾಗಿದ್ದು ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಸ್ಲಂ ಪ್ರದೇಶಗಳಿಗೆ ಆದ್ಯತೆ ನೀಡಬೇಕು. ಗದಗ-ಬೆಟಗೇರಿಯ ಮುಖ್ಯ ರಸ್ತೆ ಆಗಿರುವ ಪಾಲಾ-ಬದಾಮಿ ರಸ್ತೆಯ ಅಂಡರ್ ಬ್ರೀಜ್‌ನಲ್ಲಿ ಯಾವುದೇ ಒಂದು ದೊಡ್ಡ ವಾಹನ ಸಿಕ್ಕಿಹಾಕೊಂಡ್ರೆ ಟ್ರಾಫೀಕ್ ಜಾಮ್ ಆಗಿ ಗದಗ ಭಾಗದಿಂದ ಬೆಟಗೇರಿ ಭಾಗಕ್ಕೆ ಹೋಗುವ ಹಾಗೂ ಬೆಟಗೇರಿ ಭಾಗದಿಂದ ಗದಗ ಭಾಗಕ್ಕೆ ಹೋಗುವ ನೂರಾರು ಪ್ರಯಾಣಿಕರು ಪರದಾಡುವಂತ ಸ್ಥಿತಿ ಸಾಮಾನ್ಯವಾಗಿದೆ.

               ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗದಗದಿಂದ ಬೆಟಗೇರಿ ಕಡೆಗೆ ಹೋಗುವ ಅಂಡರ್ ಬ್ರೀಜ್ ಬದಲಾಗಿ ಮೇಲಸೇತುವೆ ರಸ್ತೆ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು. ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಕಾರ್ಯದರ್ಶಿ ಅಶೋಕ ಕುಸಬಿ, ಪರವೀನಬಾನು ಹವಾಲ್ದಾರ, ಮೌಲಾಸಾಬ ಗಚ್ಚಿ, ಇಬ್ರಾಹಿಂ ಮುಲ್ಲಾ, ಮಂಜುನಾಥ ಶ್ರೀಗಿರಿ, ಮೆಹಬೂಬಸಾಬ ಬಳ್ಳಾರಿ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಶರಣಪ್ಪ ಸೂಡಿ, ಮಕ್ತುಮಸಾನ ಮುಲ್ಲಾನವರ ಉಪಸ್ಥಿತರಿದ್ದರು.