ಹಿರಿಯ ನಾಗರಿಕರು ಹಾಗೂ ಸಾಮಾಜಿಕ ಸ್ಥಿತ್ಯಂತರ: ಡಾ. ವೈ.ಎಂ.ಜಯರಾಜ

ಹಿರಿಯ ನಾಗರಿಕರು ಹಾಗೂ ಸಾಮಾಜಿಕ ಸ್ಥಿತ್ಯಂತರ: ಡಾ. ವೈ.ಎಂ.ಜಯರಾಜ Senior Citizens and Social Transition: Dr. Y.M. Jayaraja

ಹಿರಿಯ ನಾಗರಿಕರು ಹಾಗೂ ಸಾಮಾಜಿಕ ಸ್ಥಿತ್ಯಂತರ: ಡಾ. ವೈ.ಎಂ.ಜಯರಾಜ 

         ಶಿರಹಟ್ಟಿ 14:  ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಆದರೆ ಬದುಕಿರುವಷ್ಟು ದಿನ ಪರಿಶುದ್ಧ-ಪ್ರಾಮಾಣಿಕ, ಸಾರ್ಥಕ ರೀತಿಯಲ್ಲಿ ಬದುಕಬೇಕು ಎನ್ನುವ ಸಾಮಾಜಿಕ ಪ್ರಜ್ಞೆ ಎಲ್ಲರಿಗೂ ಬೇಕು. ಹಳೆಯ ಸಂಪ್ರದಾಯ ರೀತಿ ನೀತಿಯಲ್ಲೇ ಎಲ್ಲರೂ ಬದುಕಬೇಕು, ತಾವು ಹೇಳಿದ್ದನ್ನೇ ಎಲ್ಲರೂ ಕೇಳಬೇಕೆಂಬ ವೃದ್ಧರ ಭಾವನೆ ಅವರನ್ನು ಮಾನಸಿಕ ಒತ್ತಡಕ್ಕೆ ತರುತ್ತದೆ ಎಂದು ಡಾ. ವೈ.ಎಂ.ಜಯರಾಜ ಸಮಕುಲಪತಿಗಳು ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯ ವಿಜಯಪುರ ಇವರು ಕರೆಯಿತ್ತರು. ಅವರು ಭಾನುವಾರ ನಗರದ ವೀರಶೈವ ಲಿಂಗಾಯತ ಸಭಾಭವನದಲ್ಲಿ ರೋಟರಿ ಪ್ರೋಬಸ್ ಕ್ಲಬ್‌ನ ಮಾಸಿಕ ಉಪನ್ಯಾಸ ಮಾಲೆಯಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. 

         ಮಾನವನ ವಿಕಾಸದಲ್ಲಿ ಕಾಡುಗಳಲ್ಲಿ ಪ್ರಾಣಿಗಳಂತೆ ಬಾಳುತ್ತಿದ್ದರು. ಮುಂದೆ ಕೃಷಿ ಹಾಗೂ ಪ್ರಾಣಿಗಳನ್ನು ಸಾಕುತ್ತ ಒಂದೆಡೆ ನೆಲೆ ನಿಂತು ಮನೆಗಳನ್ನು, ಊರುಗಳನ್ನು ನಿರ್ಮಿಸಿ ಸಾಮಾಜಿಕ ಕೌಟುಂಬಿಕ ಬದುಕಿನ್ನು ಆರಂಭಿಸಿದರು. ಕೈಗಾರಿಕೆ ಕ್ರಾಂತಿಯಾಗಿ ಪಟ್ಟಣ ನಗರಗಳ ಬೆಳವಣಿಗೆಯಾಗಿ ಯುವಕರು ಹೊಸ ಉದ್ಯೋಗ ಅರಸಿ ಗ್ರಾಮಗಳಿಂದ ನಗರಕ್ಕೆ ಹೊರಟಿದ್ದರಿಂದ, ಕೌಟುಂಬಿಕ ಸಾಮಾಜಿಕ ವ್ಯವಸ್ಥೆ ಬದಲಾಗುತ್ತ ಇಂದು ವಿಭಕ್ತ ಕುಟುಂಬಗಳು ಹೆಚ್ಚಾಗಿವೆ. ಈ ಕಾರಣದಿಂದ ವಯಸ್ಕರನ್ನು ಪೋಷಿಸಲು ವೃದ್ಧಾಶ್ರಮಗಳ ಅವಶ್ಯಕತೆ ಕಂಡು ಬಂದಿದೆ. ನಗರಗಳಲ್ಲಿ ವಿವಿಧ ರೀತಿಯ ವೃದ್ಧಾಶ್ರಮಗಳು ಆರಂಭಗೊಂಡಿವೆ. 

         ಈಗ ಡಿಜಿಟಲ್ ತಂತ್ರಜ್ಞಾನದಿಂದಾಗಿ ಒಂದೆಡೆ ಜಗತ್ತು ಚಿಕ್ಕದಾದಂತೆ ಆಗಿ, ಮನಸ್ಸುಗಳು ದೂರಾಗುತ್ತಿವೆ. ಮಾನವೀಯ ಮೌಲ್ಯಗಳು ಬದಲಾಗುತ್ತಿವೆ. ಹೊಸ ಹೊಸ ಕಾನೂನುಗಳನ್ನು ತರುವ ಅನಿವಾರ್ಯತೆ ಎದುರಾಗಿದೆ. ಒಪ್ಪಂದದ ಮದುವೆ, ಮದುವೆಯಾಗದೆ ಹೆಣ್ಣು ಗಂಡು ಕೂಡಿ ಬಾಳುವುದು, ಒಬ್ಬರೇ ತಂದೆ ಅಥವಾ ತಾಯಿ ಮಕ್ಕಳನ್ನು ಪಡೆದು ಬದುಕುವುದು, ಮಕ್ಕಳನ್ನು ಬೇರೆ ಹೆಣ್ಣಿನ ಗರ್ಭದ ಮೂಲಕ ಪಡೆಯುವುದು-ಹೀಗೆ ಬದಲಾವಣೆ ಪರ್ವ ಆರಂಭವಾಗಿದೆ.  

         ಆರಂಭದಲ್ಲಿ ಬಿ.ಎಸ್‌.ಸಜ್ಜನ ಹಾಗೂ ಅಕ್ಕಮಹಾದೇವಿ ಬುರ್ಲಿ ಅವರು ಪ್ರಾರ್ಥನೆ ಸಲ್ಲಿಸಿದರು. ಡಾಕ್ಟರ್ ಎಸ್‌.ಸಿ.ಹಿರೇಮಠ ಸ್ವಾಗತಿಸಿದರು. ರೋಟರಿ ಪ್ರೋಬಸ್ ಸಂಸ್ಥೆಯ ಅಧ್ಯಕ್ಷರಾದ ಮಹಾದೇವ ಹಾಲಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಶಶಿಧರ್ ಶಿರಹಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಭಾಷ್ ಬೆಟಗೇರಿ ವಂದನಾರೆ​‍್ಣ ಸಲ್ಲಿಸಿದರು. 

         ಡಾ. ಓ.ವಿ.ಪಟ್ಟಣಶೆಟ್ಟಿ, ಡಾ.ಡಿ.ಅರುಣ್ ಪಾಟೀಲ್ ಹೊಸ ಸದಸ್ಯರಾಗಿ ಸೇರಿದರು.        ಸಹದೇವ ನಾಡಗೌಡರ, ಡಾ. ವೈ.ಬಿ.ಪಟ್ಟಣಶೆಟ್ಟಿ, ಎಸ್‌.ಪಿ.ಮುಧೋಳ, ಡಾ. ವಿ.ಡಿ.ಐಹೊಳೆ, ಡಾ. ಧರ್ಮರಾಜ ಇಂಗಳೆ, ಸುಭಾಷ ಯಾದವಾಡ ಮುಂತಾದ ಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.