ಬಿಡಿಸಿಸಿಐನಲ್ಲಿ ‘ಬ್ಯುಸಿನೆಸ್ ಎಂಟ್ರು್ಯನರ್ ಎಡ್ಜ್, ಎಂಪವರ್, ಇವಾಲ್ವ್’ ವಿಚಾರ ಸಂಕಿರಣ
ಬಳ್ಳಾರಿ 17: ರಂದು ನಗರದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಜೆ.ಐ.ಟಿ.ಓ ಬ್ಯುಸಿನೆಸ್ ನೆಟ್‌ವರ್ಕ್ನ ಜಂಟಿ ಆಶ್ರಯದಲ್ಲಿ ‘ಬ್ಯುಸಿನೆಸ್ ಎಂಟ್ರು್ಯನರ್ ಎಡ್ಜ್, ಎಂಪವರ್, ಇವಾಲ್ವ್’ ವಿಷಯದ ವಿಚಾರ ಸಂಕಿರಣ ನಡೆಯಿತು. ಜಿಲ್ಲೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ, ಹಾಗೂ ಸಂಪನ್ಮೂಲವ್ಯಕ್ತಿಗಳಾದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಸೋಮಶೇಖರ್, ಮುಖ್ಯ ಅತಿಥಿಗಳಾದ, ಜೆಐಟಿಓನ ಬಳ್ಳಾರಿ ಚಾಪ್ಟರ್, ಚೇರ್ಮೆನ್ ನೀಲೇಶ್ ಜೈನ್, ರಾಕೇಶ್ ಜೈನ್.ಕಾರ್ಯದರ್ಶಿಗಳು ಇವರುಗಳು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಅವರು, ಯುವ ಮತ್ತು ಹೊಸ ಉದ್ಯಮಿಗಳಿಗೆ ನಮ್ಮ ಸಂಸ್ಥೆಯು ಸೂಕ್ತ ಸಹಕಾರ - ಮಾರ್ಗದರ್ಶನ ನೀಡಲಿದೆ. ನವ ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡುವ ಪೂರ್ವದಲ್ಲಿಯೇ ಪ್ರಾರಂಭಿಸಲು ಉದ್ದೇಶಿಸಿರುವ ಉದ್ಯಮದ ಬಂಡವಾಳ ಹೂಡಿಕೆ, ಕಚ್ಚಾವಸ್ತು, ಸಿದ್ದವಸ್ತುಗಳ ಮಾರಾಟ, ಮಾರುಕಟ್ಟೆ ವ್ಯವಸ್ಥೆ ಇನ್ನಿತರೆಗಳ ಕುರಿತು ಸಮಗ್ರ ಅಧ್ಯಯನ ನಡೆಸುವುದು ಸೂಕ್ತ ಎಂದರು.ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಸೋಮಶೇಖರ್ ಅವರು, ಹೊಸ ಉದ್ಯಮಗಳ ಪ್ರಾರಂಭ, ಸರ್ಕಾರದ ಬೆಂಬಲ ಮತ್ತು ಹಣಕಾಸು ಸೌಲಭ್ಯಗಳು - ಸಬ್ಸಿಡಿಗಳ ಕುರಿತು ಸಮಗ್ರವಾದ ಮಾಹಿತಿಯನ್ನು ನೀಡಿದರು. ಸಂಪನ್ಮೂಲವ್ಯಕ್ತಿಗಳಾದ ಜವಳಿ ಉದ್ಯಮ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ್ ಕಂಚಿಮಠ್ ಅವರು, ಹೊಸ ಉದ್ಯಮಗಳ ಪ್ರಾರಂಭದ ಪೂರ್ವದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ, ಉದ್ಯಮಿಗಳು ವಿಮೆ ಯೋಜನೆಗಳ ಅನುಕೂಲಗಳ ಕುರಿತು ವಿವರಿಸಿದರು. ಜೆಐಟಿಓನ ಬಳ್ಳಾರಿ ಚಾಪ್ಟರ್ ಚೇರ್ಮೆನ್ ನೀಲೇಶ್ ಜೈನ್, ರಾಕೇಶ್ ಜೈನ್. ಕಾರ್ಯದರ್ಶಿಗಳು, ಅವರು ಮುಖ್ಯ ಅತಿಥಿಗಳಾಗಿ, ನವ ಉದ್ಯಮಿಗಳು ಹಾಗೂ ಉತ್ಸಾಹಿ ಉದ್ಯಮಿಗಳಿಗೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಪ್ರೋತ್ಸಾಹ ನೀಡುತ್ತಿರುವುದು ಪ್ರಶಂಸನೀಯ ಎಂದರು.
ಈ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ ಅವರು ಸ್ವಾಗತ ಕೋರಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಐಟಿ ಕಮಿಟಿ ಚೇರ್ಮೆನ್ ಟಿ. ವೇಣುಗೋಪಾಲ್ ಗುಪ್ತ ಅವರು ಕಾರ್ಯಕ್ರಮ ನಿರೂಪಿಸಿದರು. ಜೆ.ಐ.ಟಿ.ಓ ಬ್ಯುಸಿನೆಸ್ ನೆಟ್‌ವರ್ಕ್ನ ಪ್ರತಿಷ್ಠಾ ಜೈನ್ ಅವರು ವಂದನಾರೆ್ಣ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಜೆಐಟಿಓನ ಯುತ್ ಬಳ್ಳಾರಿ, ಜಿನೇಶ್ ಜೈನ್, ಚೇರ್ಮನ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಅವ್ವಾರು ಮಂಜುನಾಥ್, ಉಪಾಧ್ಯಕ್ಷರುಗಳಾದ ಎಸ್. ದೊಡ್ಡನಗೌಡ, ಸೊಂತ ಗಿರಿಧರ, ಜಂಟಿ ಕಾರ್ಯದರ್ಶಿಗಳಾದ ವಿ. ರಾಮಚಂದ್ರ, ಚೇಂಬರ್ ಕೌಶಲ್ಯಾಭಿವೃದ್ಧಿ ಕೇಂದ್ರದ ಚೇರ್ಮೆನ್ ನಾಗಳ್ಳಿ ರಮೇಸ್, ಪತ್ರಿಕಾ ಮಾಧ್ಯಮ ಕಮಿಟಿ ಚೇರ್ಮೆನ್ ಟಿ. ಶ್ರೀನಿವಾಸರಾವ್, ಸಿಎಸ್‌ಆರ್ ಕಮಿಟಿ ಚೇರ್ಮೆನ್ ಟಿ. ಶ್ರೀನಿವಾಸರಾವ್ (ವಾಸು), ಕಾರ್ಯಕಾರಿ ಸಮಿತಿ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.