ಆ.8ರಂದು ಸ್ವಾಭಿಮಾನ ಸಂಘರ್ಷ ಚೈತನ್ಯ ಸಮಾವೇಶ: ಪೂರ್ವ ಭಾವಿ ಸಭೆ

ಆ.8ರಂದು ಸ್ವಾಭಿಮಾನ ಸಂಘರ್ಷ ಚೈತನ್ಯ ಸಮಾವೇಶ: ಪೂರ್ವ ಭಾವಿ ಸಭೆ Self-Respect Struggle Chaitanya Conference on August 8th: Pre-Fall Meeting

ಆ.8ರಂದು ಸ್ವಾಭಿಮಾನ ಸಂಘರ್ಷ ಚೈತನ್ಯ ಸಮಾವೇಶ: ಪೂರ್ವ ಭಾವಿ ಸಭೆ 

ಕೊಪ್ಪಳ 30 : ದಲಿತ, ಶೋಷಿತರ, ಹಿಂದುಳಿದವರ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ, ಅಂಬೇಡ್ಕರ್‌ತತ್ವ ಸಿದ್ಧಾಂತವನ್ನೆ ಮೈಗೂಡಿಸಿಕೊಂಡ ಪ್ರೋ.ಬಿ. ಕೃಷ್ಣಪ್ಪಜನ್ಮ ದಿನವನ್ನು ಮತ್ತಷ್ಟು ಸಾರ್ಥಕಗೊಳಿಸುವ ಹಾಗೂ ವಿವಿಧ ಸಂಘಟನೆಗಳ ಬಲಿಷ್ಠಗೊಳಿಸುವ ಉದ್ದೇಶಿದಿಂದ ಆ.8ರಂದು ಬಳ್ಳಾರಿಯ ಕೆಇಬಿ ಫಂಕ್ಷನ್ ಸಭಾಂಗಣದಲ್ಲಿ ಸ್ವಾಭಿಮಾನ ಸಂಘರ್ಷಚೈತನ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕ.ಕ. ವಿಭಾಗೀಯ ಸಂಚಾಲಕ ಹಂಪೇಸ್ ಹರಿಗೋಲ್ ಹೇಳಿದರು.ನಗರದ ಕಾರ್ಯನಿರತ ಪತ್ರಕರ್ತರ ಸಂಘದಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿಅವರು ಮಾತನಾಡಿದರು.ಪ್ರೋ. ಬಿ. ಕೃಷ್ಣಪ್ಪರವರುದಲಿತ, ಶೋಷಿತರ, ಹಿಂದುಳಿದವರ ಪರವಾಗಿ ನೊಂದ ಕುಟುಂಬಗಳಿಗೆ ನ್ಯಾಯಒದಗಿಸುವ ನಿಟ್ಟಿನಲ್ಲಿರಾಜ್ಯದಲ್ಲಿಕರ್ನಾಟಕದಲಿತ ಸಂಘರ್ಷ ಸಮಿತಿ ರಚಿಸಿ ಸಾವಿರಾರು ಕುಟುಂಬಗಳಿಗೆ ಪ್ರಮಾಣಿಕವಾಗಿ ನ್ಯಾಯಒದಗಿಸುವ ಕೆಲಸ ಮಾಡಿದ್ದಾರೆ. ಹಂತ ಹಂತವಾಗಿರಾಜ್ಯದಉದ್ದಗಲಕ್ಕೂ ಸಂಚರಿಸಿ ಸಂಘಟನೆ ಮಾಡಿದ್ದಾರೆ. ಅದರಲ್ಲೂ ಸಿದ್ಲಿಪುರ ಭೂಹೋರಾಟ, ಚಂದ್ರಗುತ್ತಿ ಬೆತ್ತಲೆ ಸೇವೆ ವಿಮುಕ್ತ ದೇವದಾಸಿ ಪದ್ಧತಿ, ಕುಂಬಾರ ಅನಸೂಯಮ್ಮಳ ಅತ್ಯಾಚಾರ ವಿರೋಧಿಸಿ ಉಗ್ರ ಹೋರಾಟ ಮಾಡಿ ನ್ಯಾಯಒದಗಿಸುವಕಾರ್ಯಾವನ್ನು ಪ್ರೋ. ಬಿ. ಕೃಷ್ಣಪ್ಪ ಮಾಡಿದ್ದಾರೆ.ಹೀಗಾಗಿ ಆ.8ರಂದು ಬಿ.ಕೃಷ್ಣಪ್ಪಅವರಿಗೆ 88 ವರ್ಷ ಪೂರೈಸುವ ನಿಟ್ಟಿನಲ್ಲಿ ಸಂಘಟನೆಯ ಅನೇಕ ಕಾರ್ಯಕರ್ತರುಒಗ್ಗೂಡಿಕೊಂಡುಅವರಜನ್ಮ ದಿನವನ್ನು ಸಾರ್ಥಗೊಳಿಸುವ ನಿಟ್ಟಿನಲ್ಲಿಅಂದು ಬಳ್ಳಾರಿಯಲ್ಲಿ ಸ್ವಾಭಿಮಾನ ಸಂಘರ್ಷಚೈತನ್ಯ ಸಮಾವೇಶ ಆಯೋಜಿಸಿದೆ. ಅಂದಿನ ಸಮಾವೇಶಕ್ಕೆ ಮೂರು ಸಾವಿರಕ್ಕೂಅಧಿಕಕಾರ್ಯಕರ್ತರುಜಿಲ್ಲೆಯಿಂದ ತೆರಳಲಿದ್ದೇವೆ. ರಾಜ್ಯಾದ್ಯಂತ ಸಾವಿರಾರುಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಹರಿದು ಹಂಚಿ ಹೋಗಿರುವ ಅನೇಕ ಸಂಘಟನೆಗಳನ್ನು ಒಗ್ಗೂಡಿಸಿ, ಮತ್ತೇ ಸಮಿತಿಯನ್ನು ಗಟ್ಟಿಸಿಗೊಳಿಸುವ ಕೆಲಸ ಮಾಡುತ್ತೇವೆ.  ನಿಟ್ಟಿನಲ್ಲಿ ಅಂದಿನ ಸಮಾವೇಶದಲ್ಲಿ ಅನೇಕ ಗಣ್ಯರಿಗೆ ಸನ್ಮಾನಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹನುಮಂತಪ್ಪ ಹ್ಯಾಟಿ, ಗವಿಸಿದ್ದಪ್ಪ ನಾಯಕ, ಪಿ. ಲಕ್ಷ್ಮಯ್ಯ, ಎಂ.ರವಿಕುಮಾರ್, ಜಂಬಣ್ಣ ಸೇರಿದಂತೆಇತರರು ಪಾಲ್ಗೊಂಡಿದ್ದರು.ಫೋಟೋಕ್ಯಾಪ್ಸನ್‌: ಕೊಪ್ಪಳ ನಗರದಕಾರ್ಯನಿರತ ಪತ್ರಕರ್ತರ ಸಂಘದಕಾರ್ಯಾಲಯದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಹಂಪೇಸ್ ಹರಿಗೋಲ್ ಮಾತನಾಡಿದರು.